ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ ರೊಚ್ಚಿಗೆದ್ದಿದ್ದು ಏಕೆ?
ಹಿಂಸಾಚಾರದ ಕೂಪದಲ್ಲಿ ಬಿದ್ದು ಮತ್ತೊಮ್ಮೆ ಪ್ರಪಂಚ ನರಳುತ್ತಾ ಒದ್ದಾಡುವ ಸಮಯ ಬಂದಿದೆ. ಹೊಡಿಬಡಿ ಆಟದಲ್ಲಿ ಇಸ್ರೇಲ್ ಮೇಲುಗೈ ಸಾಧಿಸಿದ್ದು, ಗಾಜಾ ಇದೀಗ ಸಂಪೂರ್ಣ ಇಸ್ರೇಲ್ ವಶಕ್ಕೆ ಸಿಕ್ಕಿದೆ. ಇಸ್ರೇಲ್ & ಹಮಾಸ್ ನಡುವಿನ ತಿಕ್ಕಾಟ ಅಂತ್ಯ ಆಗಿದೆ ಅನ್ನುವಾಗಲೇ ಮತ್ತೆ ಆ ಕಿಚ್ಚು ದೊಡ್ಡದಾಗಿದೆ. ಹೀಗೆಲ್ಲಾ ಇಬ್ಬರೂ ಹೊಡೆದಾಡುತ್ತಾ ರಕ್ತಪಾತ ಮಾಡುತ್ತಾ ಸಾಮಾನ್ಯರ ಬದುಕು ಬೀದಿಗೆ ಬಿದ್ದಿದೆ ಅನ್ನೋ ಆರೋಪ ಕೂಡ ಕೇಳಿಬರುತ್ತಿದೆ. ಇಷ್ಟೆಲ್ಲಾ ಚರ್ಚೆಗಳ ನಡುವೆ ದಿಢೀರ್ ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್?
ಇಸ್ರೇಲ್ ಕೊತ ಕೊತ ಕುದಿಯುತ್ತಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಗಾಜಾ ವಿರುದ್ಧ ಯುದ್ಧದಲ್ಲಿ ಘೋರ ದಾಳಿ ನಡೆಸುವ ಸಾಧ್ಯತೆ ಇದೆ. ಅದರಲ್ಲೂ ಹಮಾಸ್ ವಿರುದ್ಧ ಶುರುವಾಗಿದ್ದ ಯುದ್ಧ ಇದೀಗ ಸಾಮಾನ್ಯರ ಜೀವನದ ಮೇಲೆ ದಾಳಿ ಮಾಡಿದಂತೆ ಆಗಿದೆ ಎಂಬ ಆರೋಪ ಕೇಳಿಬಂದು ಸಂಚಲನ ಸೃಷ್ಟಿಯಾಗಿದೆ. ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಕೈಮೀರಿ ಹೋಗುತ್ತಿದೆ. ಮುಂದೆ ಏನಾಗಲಿದೆ? ಯಾರು ಯಾರ ಮೇಲೆ ದಾಳಿ ಮಾಡುತ್ತಾರೆ? ಅಕಸ್ಮಾತ್ ಪರಮಾಣು ಬಾಂಬ್ ದಾಳಿಯೇ ನಡೆದರೆ ಕಥೆ ಏನು? ಹೀಗೆ ನೂರಾರು ಪ್ರಶ್ನೆಗಳು ಈ ಸಮಯದಲ್ಲಿ ಜಗತ್ತಿನಾದ್ಯಂತ ಉದ್ಭವಿಸುತ್ತಿವೆ. ಇಂತಹ ಸಮಯದಲ್ಲೇ ಅನ್ನ & ನೀರು ಇಲ್ಲದೆ ಒದ್ದಾಡುತ್ತಿರುವ ಗಾಜಾ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂಬ ಆದೇಶ ನೀಡಲಾಗಿದೆ. ಆದರೆ ಇದೇ ಸಮಯದಲ್ಲಿ ವೆಸ್ಟ್ ಬ್ಯಾಂಕ್ ವಶಕ್ಕೆ ಇಸ್ರೇಲ್ ಮುಂದಾಗಿದೆ ಎಂಬ ಆರೋಪಗಳ ನಡುವೆ ಟ್ರಂಪ್ ರೊಚ್ಚಿಗೆದ್ದಿದ್ದಾರೆ.

ಅಮೆರಿಕ & ಇಸ್ರೇಲ್ ನಡುವೆ ಬಿರುಕು?
ಹೌದು, ಅಮೆರಿಕ ಹಾಗೂ ಇಸ್ರೇಲ್ ಎರಡೂ ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಏಕೆಂದರೆ ಇಷ್ಟು ದಿನಗಳ ಕಾಲ ಎರಡೂ ದೇಶಗಳ ನಡುವೆ ಸಂಬಂಧ ಚನ್ನಾಗಿಯೇ ಇತ್ತು. ಆದರೆ ಗಾಜಾ ಯುದ್ಧದ ನಂತರ ಪದೇ ಪದೇ ಎರಡು ದೇಶಗಳ ನಡುವೆ ಬಿರುಕು ಮೂಡುತ್ತಿರುವ ಆರೋಪ ಇದೆ. ಇಂತಹ ಸಮಯದಲ್ಲೇ ಟ್ರಂಪ್ ಕೂಡ ಎಚ್ಚರಿಕೆ ನೀಡಿದ್ದು ತಲ್ಲಣ ಎಬ್ಬಿಸಿದೆ. ಆದರೆ ಇಸ್ರೇಲ್ ಇಂತಹ ಸಾಹಸಕ್ಕೆ ಕೈಹಾಕಲ್ಲ ಎನ್ನಲಾಗುತ್ತಿದೆ.












Click it and Unblock the Notifications