Ukraine War: ಸೈಲೆಂಟ್ ಆಗಿ ಹೋಗಿ ಪುಟಿನ್ ಜೊತೆ ಒಪ್ಪಂದ ಮಾಡಿಕೊಳ್ಳಿ... ಉಕ್ರೇನ್‌ಗೆ ಅಮೆರಿಕ ವಾರ್ನಿಂಗ್!
ಅಮೆರಿಕ
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿನಲ್ಲಿ ಯಾವುದೇ ಯುದ್ಧ ಶುರುವಾದರೂ ನಾನು ಅದನ್ನ ನಿಲ್ಲಿಸುತ್ತೇನೆ, ಅಂತಾ ಮುಂದೆ ನುಗ್ಗಿ ಬರುತ್ತಿದ್ದಾರೆ. ಈ ಮೂಲಕ, ನೊಬೆಲ್ ಶಾಂತಿ ಪುರಸ್ಕಾರವು ಮುಂದಿನ ವರ್ಷಕ್ಕಾದರೂ ತಮಗೆ ಸೇರಲಿ ಅನ್ನೋದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಸೆ ಇರಬೇಕು ಅಂತಾ ಕಾಣುತ್ತದೆ. ಇಷ್ಟೆಲ್ಲಾ ಮಾತನಾಡುವ ಡೊನಾಲ್ಡ್ ಟ್ರಂಪ್ ಕೈಯಲ್ಲೂ ಉಕ್ರೇನ್ ಮತ್ತು ರಷ್ಯಾ ಯುದ್ಧ ನಿಲ್ಲಿಸಲು ಆಗುತ್ತಿಲ್ಲ. ಪರಿಸ್ಥಿತಿ ಕೈಮೀರಿ ಹೋಗಿರುವುದನ್ನು ಗಮನಿಸುತ್ತಿರುವ ಟ್ರಂಪ್ ಈಗ ಉಕ್ರೇನ್ ಅಧ್ಯಕ್ಷನಿಗೆ ಮಹತ್ವದ ಸಲಹೆ ನೀಡಿದ್ದಾರೆ! id="toptextpromo"> id='are-slot-1' class='oiad oi-axt oiadv'> id='top-searched-articles'>ಅಮೆರಿಕ
ಅಧ್ಯಕ್ಷ ಡೊನಾಲ್ಡ್ ಟ್ರಂಪ್ & ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಇಂದು ಬಹು ದಿನಗಳ ನಂತರ ಭೇಟಿ ಮಾಡಿದ್ದರು. ಈ ಸಮಯದಲ್ಲಿ ಹಲವಾರು ವಿಚಾರಗಳು ಚರ್ಚೆಗೆ ಬಂದಿದ್ದು, ಯುದ್ಧ ನಿಲ್ಲಿಸುವ ಕುರಿತು ಡೊನಾಲ್ಡ್ ಟ್ರಂಪ್ ಬೆಸ್ಟ್ ಐಡಿಯಾ ಕೊಟ್ಟಿದ್ದಾರಂತೆ. ಅದು ಏನೆಂದರೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿಗೆ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಈಗ ಸೂಚನೆ ನೀಡಿದ್ದಾರೆ ಟ್ರಂಪ್. ಕಳೆದ ತಿಂಗಳಷ್ಟೇ ಟ್ರಂಪ್, ಉಕ್ರೇನ್ ತನ್ನ ಸಂಪೂರ್ಣ ಪ್ರದೇಶ ಮರುಪಡೆಸಿಕೊಳ್ಳಲು ಸಾಧ್ಯ ಎಂದು ನಂಬಿದ್ದೇನೆ ಎಂದು ಹೇಳಿದ್ದರು. ಆದರೆ ಇದೀಗ ತಮ್ಮ ಮಾತನ್ನೇ ಬದಲಿಸಿದಂತೆ ಕಾಣುತ್ತಿದೆ. id='are-slot-2' class='oiad oi-axt oiadv'>












Click it and Unblock the Notifications