ಕಿಮ್ ಜಾಂಗ್ ಮೇಲೆ ಟ್ರಂಪ್ ತಿರುಗೇಟಿನ ನ್ಯೂಕ್ಲಿಯರ್ ಬಾಂಬ್!
ವಾಷಿಂಗ್ಟನ್ ಡಿಸಿ, ಜನವರಿ 03: ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನ್ಯೂಕ್ಲಿಯರ್ ಬಾಂಬ್ ಗೆ ಸಂಬಂಧಿಸಿದಂತೆ ನೀಡಿದ ಹೇಳಿಕೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಕ್ತ ತಿರುಗೇಟು ನೀಡಿದ್ದಾರೆ.
ತನ್ನ ಬಳಿ ನ್ಯೂಕ್ಲಿಯರ್ ಬಾಬ್ ಇದೆ ಎಂದು ಸದಾ ಇಡೀ ವಿಶ್ವವನ್ನು ಹೆದರಿಸುವ ಕಿಮ್ ಜಾಂಗ್, ಹೊಸ ವರ್ಷದಂದೇ ಮತ್ತೊಂದು ಬಾಂಬ್ ಸಿಡಿಸಿದ್ದರು! ನ್ಯೂಕ್ಲಿಯರ್ ಬಾಂಬ್ ನ ರಿಮೋಟ್ ಕಂಟ್ರೋಲ್ ನನ್ನ ಡೆಸ್ಕ್ ನಲ್ಲೇ ಇದೆ. ಯಾವುದೇ ಕ್ಷಣದಲ್ಲಿ ನಾನು ಆ ಬಟನ್ ಅದುಮಬಹುದು ಎಂಬ ಹೇಳಿಕೆ ನೀಡಿದ್ದರು.
I will be announcing THE MOST DISHONEST & CORRUPT MEDIA AWARDS OF THE YEAR on Monday at 5:00 o’clock. Subjects will cover Dishonesty & Bad Reporting in various categories from the Fake News Media. Stay tuned!
— Donald J. Trump (@realDonaldTrump) January 3, 2018
Recommended Video

ಈ ಹೆಳಿಕೆಗೆ ಪ್ರತಿಕ್ರಿಯೆ ನೀಡಿದ ಟ್ರಂಪ್, ನ್ಯೂಕ್ಲಿಯರ್ ಬಟನ್ ಯಾವಾಗಲೂ ತಮ್ಮ ಡೆಸ್ಕ್ ನಲ್ಲಿಯೇ ಇರುತ್ತದೆಂದಯ ಕಿಮ್ ಹೇಳಿದ್ದಾರೆ. ಅವರ ಹಸಿವಿ, ಬಡ ಸಾಮ್ರಾಜ್ಯದ ಯಾರಾದರೊಬ್ಬರು ಹೋಗಿ ಅವರಿಗೆ ಹೇಳಿ, ನನ್ನ(ಟ್ರಂಪ್) ಬಳಿಯೂ ನ್ಯೂಕ್ಲಿಯರ್ ಬಾಂಬ್ ಇದೆ. ಅವರ ಬಳಿ ಇರುವುದಕ್ಕಿಂತ ಹೆಚ್ಚು ದೊಡ್ಡ ಮತ್ತು ಶಕ್ತಿಶಾಲಿ ಬಾಂಬ್ ಇದು. ಅಷ್ಟೇ ಅಲ್ಲ ನನ್ನ ಬಟನ್ ಕೆಲಸ ಮಾಡುತ್ತದೆ!" ಎಂದು ವ್ಯಂಗ್ಯವಾಗಿ ಕುಟುಕಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.











Click it and Unblock the Notifications