ಉಕ್ರೇನ್ ಅಧ್ಯಕ್ಷನಿಗೆ ‘ಸರ್ವಾಧಿಕಾರಿ’ ಪಟ್ಟ ಕೊಟ್ಟ ಡೊನಾಲ್ಡ್ ಟ್ರಂಪ್!
ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ನಡುವಿನ ಕಿರಿಕ್ ಜೋರಾಗುತ್ತಿದೆ. ರಷ್ಯಾ ಜೊತೆಯಲ್ಲಿ ಅಮೆರಿಕದ ಅಧಿಕಾರಿಗಳು ಸಭೆ ನಡೆಸಿದ ನಂತರ ಬೆಂಕಿ ಇನ್ನಷ್ಟು ಹೊತ್ತಿಕೊಂಡಿದೆ. ಹೀಗೆ ಕಿರಿಕ್ ಜೋರಾಗಿರುವ ಸಮಯದಲ್ಲೇ, ಅಮೆರಿಕ ವಿರುದ್ಧ ಉಕ್ರೇನ್ ಮಾತನಾಡಿ ದೊಡ್ಡ ತಪ್ಪು ಮಾಡಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಹೀಗಿದ್ದಾಗಲೇ ರೊಚ್ಚಿಗೆದ್ದ ಡೊನಾಲ್ಡ್ ಟ್ರಂಪ್ ಅವರು, ಉಕ್ರೇನ್ ಅಧ್ಯಕ್ಷನಿಗೆ 'ಸರ್ವಾಧಿಕಾರಿ' ಪಟ್ಟ ಕೊಟ್ಟಿದ್ದಾರೆ!
ಉಕ್ರೇನ್ & ರಷ್ಯಾ ಯುದ್ಧ ನಿಲ್ಲಿಸಬೇಕು ಎಂಬ ಜವಾಬ್ದಾರಿ ಅಮೆರಿಕ ಮೇಲೆ ಇದ್ದು, ಈ ಕಾರಣಕ್ಕೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ ಅಮೆರಿಕ. ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಯುದ್ಧ ನಿಲ್ಲಿಸುವ ಪ್ರಕ್ರಿಯೆ ಜೋರಾಗಿದ್ದು, ಇದನ್ನು ಉಕ್ರೇನ್ ಸಹಿಸಿಕೊಳ್ಳುತ್ತಿಲ್ಲ. ಯಾಕಂದ್ರೆ, ರಷ್ಯಾ ಜೊತೆಗಿನ ಮಾತುಕತೆಯ ವೇಳೆ ತಮ್ಮನ್ನು ಕೂಡ ಸೇರಿಸಿಕೊಳ್ಳಿ ಎಂಬ ಬೇಡಿಕೆ ಇಡುತ್ತಿದೆ ಉಕ್ರೇನ್. ಆದರೆ ಉಕ್ರೇನ್ ಮಾತು ಕೇಳದೆ ಅಮೆರಿಕ ಅಧ್ಯಕ್ಷ ಟ್ರಂಪ್ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂಬ ಆರೋಪ ಇದೆ.

ಝೆಲೆನ್ಸ್ಕಿಗೆ ಸರ್ವಾಧಿಕಾರಿ ಪಟ್ಟ!
ಇಷ್ಟೆಲ್ಲಾ ಗೊಂದಲದ ನಡುವೆ ಡೊನಾಲ್ಡ್ ಟ್ರಂಪ್ ವಿರುದ್ಧ ಉಕ್ರೇನ್ ಬೇಸರ ಹೊರಹಾಕಿ ಯುದ್ಧದ ಬಗ್ಗೆ ತನ್ನದೇ ನಿಲುವು ತಳೆದಿತ್ತು. ಇದನ್ನು ನೋಡಿ ಗರಂ ಆಗಿರುವ ಡೊನಾಲ್ಡ್ ಟ್ರಂಪ್, ಉಕ್ರೇನ್ ಅಧ್ಯಕ್ಷನ ವರ್ತನೆ ಕಂಡು ರೊಚ್ಚಿಗೆದ್ದಿದ್ದಾರೆ. ಅಲ್ಲದೆ ವೊಲೊಡಿಮಿರ್ ಝೆಲೆನ್ಸ್ಕಿಗೆ ಸರ್ವಾಧಿಕಾರಿ ಪಟ್ಟವನ್ನೂ ಕಟ್ಟಿದ್ದಾರೆ. ಈ ಮೂಲಕ ಅಮೆರಿಕ ಮತ್ತು ಉಕ್ರೇನ್ ಸಂಬಂಧ ಇನ್ನಷ್ಟು ಹಾಳಾಗಿ ಹೋಗುತ್ತಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ.
3 ವರ್ಷ ಪೂರೈಸಲಿದೆ ಯುದ್ಧ!
ರಷ್ಯಾ ಆಧುನಿಕ ಕಾಲದಲ್ಲಿ ಉಕ್ರೇನ್ ವಿರುದ್ಧ ಘೋರ ಯುದ್ಧವನ್ನು ಇದೀಗ ನಡೆಸುತ್ತಿದೆ. ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿ 3 ವರ್ಷ ತುಂಬಲಿದ್ದು, ಅದಕ್ಕೂ ಮೊದಲೇ ಯುದ್ಧ ನಿಲ್ಲಿಸಬೇಕು ಎಂಬ ಪ್ರಯತ್ನಗಳು ಆರಂಭವಾಗಿವೆ. ಜಾಗತಿಕ ಮಟ್ಟದಲ್ಲಿ ಈ ಯುದ್ಧ ದೊಡ್ಡ ತಲೆನೋವು ತಂದಿದೆ. ಇಂತಹ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಯುದ್ಧ ನಿಲ್ಲಿಸಲು ಪ್ರಯತ್ನ ಆರಂಭಿಸಿದ್ದಾರೆ. ಹೀಗಿದ್ದಾಗ ಉಕ್ರೇನ್ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೂಡ ದೊಡ್ಡ ಕಿಚ್ಚು ಹೊತ್ತಿಸಿದೆ.












Click it and Unblock the Notifications