ಸೀಕ್ರೇಟ್ ಸರ್ವರ್ ನಿಂದ ರಷ್ಯಾದೊಂದಿಗೆ ಟ್ರಂಪ್ ಸಂಪರ್ಕ

Posted By:
Subscribe to Oneindia Kannada

ವಾಷಿಂಗ್ಟನ್, ನವೆಂಬರ್, 1: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಸಂಘಟನೆಯೊಂದು ರಷ್ಯಾದ ಬ್ಯಾಂಕ್ ವೊಂದರ ಜತೆ ಸಂವಹನ ನಡೆಸುತ್ತಿತ್ತು ಎಂಬ ಮಾಹಿತಿಯನ್ನು ಈಗ ಹೊರಬಿದ್ದಿದೆ.

ಅಧ್ಯಕ್ಷೀಯ ಚುನಾವಣೆಗೆ ಕೇವಲ ಒಂದು ವಾರ ಮಾತ್ರ ಬಾಕಿ ಇರುವಾಗ, ರಷ್ಯಾದೊಂದಿಗೆ ಟ್ರಂಪ್ ಅವರ ಸಂಪರ್ಕ ಬಗ್ಗೆ ವರದಿ ಬಹಿರಂಗವಾಗಿರುವುದು ಹಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.

Trump has 'secret server' communicating with Russia

ರಷ್ಯಾ ಬ್ಯಾಂಕ್ ನೊಂದಿಗೆ ಸಂಪರ್ಕ ಹೊಂದಿರುವ ಸರ್ವರ್ ಟ್ರಂಪ್ ಅವರ ಸಂಘಟನೆಗೆ ಹೆಸರಲ್ಲಿ ದಾಖಲಾಗಿದೆ. ರಷ್ಯಾದ ಅತಿದೊಡ್ಡ ಖಾಸಗಿ ವಾಣಿಜ್ಯ ಬ್ಯಾಂಕ್ ಆಗಿರುವ 'ಆಲ್ಫಾ' ಬ್ಯಾಂಕ್ ಜತೆ ಟ್ರಂಪ್ ಸಂಘಟನೆ ಸಂಪರ್ಕ ಹೊಂದಿದೆ ಎಂಬ ವರದಿಯಲ್ಲಿ ಉಲ್ಲೇಖವಾಗಿದೆ.

ಆಲ್ಫಾ ಬ್ಯಂಕ್ ನ ಎರಡು ಸರ್ವರ್ ಗಳು ಹಾಗೂ, ಟ್ರಂಪ್ ಸಂಘಟನೆಗೆ ಸೇರಿದ ಒಂದು ಸರ್ವರ್ ಗಳ ಮಧ್ಯೆ ಮಾಹಿತಿ ವಿನಿಮಯವಾಗಿರುವ ಬಗ್ಗೆ ದಾಖಲೆ ದೊರೆತಿದೆ.

ಅಷ್ಟೇ ಅಲ್ಲದೆ ಟ್ರಂಪ್ ಅವರು ರಷ್ಯನ್ ಬ್ಯಾಂಕ್ ನೊಂದಿಗೆ ರಹಸ್ಯ ಸಂವಹನ ನಡೆಸಿದ್ದಾರೆ ಎಂದು 'ಸ್ಲೇಟ್' ಎಂಬ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಆದರೆ ಟ್ರಂಪ್ ಅವರ ಸಂಘಟನೆ ಮಾತ್ರ ಈ ಆರೋಪವನ್ನು ತಳ್ಳಿಹಾಕಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರು "ಟ್ರಂಪ್ ಅವರು ರಷ್ಯಾದೊಂದಿಗೆ ಹೊಂದಿರುವ ಸಂಬಂಧವನ್ನು ಈಗಲೇ ಬಹಿರಂಗಪಡಿಸಬೇಕು" ಎಂದು ಒತ್ತಾಯಿಸಿದ್ದಾರೆ.

Trump has 'secret server' communicating with Russia

ಇದಕ್ಕೆ ತಿರುಗೇಟು ನೀಡಿರುವ ಟ್ರಂಪ್ ಸಂಘಟನೆ "ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ಹಿಲರಿ ಅವರು ರಾಷ್ಟ್ರದ ಭದ್ರತೆಗೆ ಸಂಬಂಧಿಸಿದಂತೆ ತಮ್ಮ ಸರ್ವರ್ ಮೂಲಕ ಮಾಹಿತಿ ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿದೆ.

ಅಷ್ಟೇ ಅಲ್ಲದೇ ಈ ಸರ್ವರ್ ಮೂಲಕ ಟ್ರಂಪ್ ಅವರ ಸಂಘಟನೆ ಯಾವುದೇ ಮಾಹಿತಿ ವಿನಿಮಯ ಮಾಡಿಲ್ಲ. ರಷ್ಯಾದ ಆಲ್ಫಾ ಬ್ಯಂಕ್ ನೊಂದಿಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಎಂದು ಟ್ರಂಪ್ ಅವರ ಅಪಾದಿತ ಸಂಘಟನೆ ಸ್ಪಷ್ಟನೆ ನೀಡಿದೆ.

ರಷ್ಯಾದ ಅಲ್ಫಾ ಬ್ಯಾಂಕ್ ಮತ್ತು ಟ್ರಂಪ್ ಸಂಘಟನೆ ನಡುವೆ ಇರುವ ಸಂಬಂಧವನ್ನು ಕಂಪ್ಯೂಟರ್ ಸೈಂಟಿಸ್ಟ್ ಗಳು ಪತ್ತೆ ಹಚ್ಚಿದ್ದು, ಇದು ಡೊನಾಲ್ಡ್ ಟ್ರಂಪ್ ಮತ್ತು ಮಾಸ್ಕೋ ನಡುವೆ ಇರುವ ರಹಸ್ಯ ಸಂಬಂಧವನ್ನು ಬಹಿರಂಗಪಡಿಸಿದೆ ಎಂದು ಹಿಲರಿ ಕ್ಲಿಂಟನ್ ಅವರ ಹಿರಿಯ ಸಲಹೆಗಾರ ಜಾಕ್ ಸುಲೈವನ್ ಹೇಳಿದ್ದಾರೆ.

ಈ ಮಧ್ಯೆ ಮದರ್ ಜಾನ್ಸ್ ಸುದ್ದಿ ನಿಯತಕಾಲಿಕೆ ವರದಿಯನ್ನು ಎಫ್ ಬಿ ಐ ಗೆ ಕಳುಹಿಸಿದ್ದು, ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Trump Organisation has a secret server registered to Trump Tower that has been covertly communicating with a Russian bank, a media report said, in the latest allegation of questionable links between Donald Trump and Russia just a week ahead of the presidential polls.
Please Wait while comments are loading...