Ukraine War: ರಷ್ಯಾ ವಿರುದ್ಧ ರೊಚ್ಚೆಗೆದ್ದ ಟ್ರಂಪ್, ಉಕ್ರೇನ್ ಪರ ನೇರವಾಗಿ ಅಮೆರಿಕ ಸೇನೆ ಎಂಟ್ರಿ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದೆಷ್ಟೇ ಪ್ರೀತಿಯಿಂದ ಹೇಳಿದರೂ ಅದನ್ನು ಈಗ ರಷ್ಯಾ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ ಅಂತಾ ಕಾಣುತ್ತಿದೆ. ಏಕೆಂದರೆ ಪ್ರತಿಬಾರಿ ಕೂಡ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಅಮೆರಿಕ ಪ್ರಯತ್ನ ಮಾಡಿದಾಗ ಭಾರಿ ದೊಡ್ಡ ಎಡವಟ್ಟು ಆಗುತ್ತಿದೆ. ಹೀಗೆ ಇದ್ದಾಗ ಅಮೆರಿಕ ಕೂಡ ಕೈಚೆಲ್ಲಿ ಕೂತಿದ್ದು, ಮುಂದೆ ಏನು ಮಾಡುವುದು ಅನ್ನೋ ಸ್ಥಿತಿಯಲ್ಲಿ ಯುರೋಪ್ ಒಕ್ಕೂಟ ಈಗ ಚರ್ಚೆ ನಡೆಸುತ್ತಿದೆ. ಇಂತಹ ವಾತಾವರಣದಲ್ಲಿ ದಿಢೀರ್ ರಷ್ಯಾ ಸೇನೆ ತನ್ನ ಬಳಿ ಇರುವ ಪರಮಾಣು ಅಸ್ತ್ರಗಳನ್ನು ಬಳಸಲು ಸಜ್ಜಾಗಿದೆಯಾ?

ಹೌದು, ರಷ್ಯಾ ಸೇನೆ ಇದೀಗ ತನ್ನ ಶತ್ರು ವಿರುದ್ಧ ಪರಮಾಣು ಅಸ್ತ್ರ ಬಳಕೆ ಮಾಡುವ ಎಲ್ಲಾ ಸಾಧ್ಯತೆಗಳನ್ನ ಮುನ್ಸೂಚನೆ ಮೂಲಕ ನೀಡಿದೆ. ರಷ್ಯಾ ತನ್ನ ಬಳಿ ಇರುವ ಅತ್ಯಾಧುನಿಕವಾದ ಕ್ಷಿಪಣಿಗಳನ್ನು ಪರೀಕ್ಷೆ ಮಾಡುವ ಮೂಲಕ ಭಯ ಮೂಡಿಸಿದೆ. ಇದು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೂ ಭಯ ಮೂಡಿಸಿದೆ. ಹೀಗಾಗಿ ಟ್ರಂಪ್ ಇದೀಗ ರಷ್ಯಾ ವಿರುದ್ಧವೇ ರೊಚ್ಚಿಗೆದ್ದು, ಮತ್ತೊಮ್ಮೆ ಪುಟಿನ್ ಬಗ್ಗೆ ಬೇಸರ ಹೊರ ಹಾಕಿದ್ದಾರೆ. ಇಂತಹ ಸಮಯದಲ್ಲೇ, ಅಮೆರಿಕ ಸೇನೆ ನೇರವಾಗಿ ಉಕ್ರೇನ್ ಪರ ಯುದ್ಧಕ್ಕೆ ಎಂಟ್ರಿ ಕೊಡುತ್ತಾ? ಎಂಬ ಪ್ರಶ್ನೆ ಮೂಡಿದೆ.

Trump Criticises Russia s Nuclear Missile Test as Inappropriate

ದೊಡ್ಡಣ್ಣ ಎಂಟ್ರಿ ಕೊಡೋದು ಡೌಟ್?

ಇಷ್ಟೆಲ್ಲಾ ನಡೆದರೂ ಅಮೆರಿಕ ಸೈಲೆಂಟ್ ಆಗಿ ಇರುವುದು ರಷ್ಯಾ ಬಳಿ ಇರುವ ಭೀಕರ ಅಸ್ತ್ರಗಳ ಕಾರಣಕ್ಕೆ. ಅದರಲ್ಲೂ ರಷ್ಯಾ ಬಳಿ ಅತ್ಯಂತ ವಿನಾಶಕಾರಿ ಪರಮಾಣು ಅಸ್ತ್ರಗಳು ಇದ್ದು, ಇದೇ ಕಾರಣಕ್ಕೆ ಅಮೆರಿಕ ಕೂಡ ಹಿಂದೆ ಮುಂದೆ ಯೋಚನೆ ಮಾಡ್ತಿದೆ. ಹೀಗಿದ್ದರೂ, ಯಾವ ಕಾರಣಕ್ಕೂ ಹಿಂದೆ ಸರಿಯಲ್ಲ ಎನ್ನುವ ರೀತಿ ಈಗ ರಷ್ಯಾ ತನ್ನ ಬಳಿ ಇರುವ ಪರಮಾಣು ಕ್ಷಿಪಣಿಗಳನ್ನ ಈಗ ಮತ್ತೊಮ್ಮೆ ಆಕಾಶಕ್ಕೆ ಚಿಮ್ಮಿಸಲು ಸಜ್ಜಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+