ಅಮೆರಿಕದಲ್ಲಿ ಉದ್ಯೋಗ ಕಳೆದುಕೊಳ್ಳಲಿದ್ದಾರಾ ಐದು ಲಕ್ಷ ಭಾರತೀಯರು?!
Recommended Video

ವಾಷಿಂಗ್ಟನ್, ಜನವರಿ 03: ಅಮೆರಿಕದಲ್ಲಿರುವ ಭಾರತೀಯರ ಪಾಲಿಗೆ ಡೊನಾಲ್ಡ್ ಟ್ರಂಪ್ ವಿಲನ್ ಆಗಿಬಿಡುತ್ತಿದ್ದಾರಾ..? ಒಂದೊಮ್ಮೆ ಅವರ ಆಡಳಿತದ ಬಹು ನಿರೀಕ್ಷಿತ ಯೋಜನೆಯೊಂದು ಜಾರಿಗೆ ಬಂದಿದ್ದೇ ಆದಲ್ಲಿ ಅಮೆರಿಕದಲ್ಲಿರುವ 5 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಉದ್ಯೋಗ ಕಳೆದುಕೊಳ್ಳೋದು ಗ್ಯಾರಂಟಿ!
ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸುವುದಕ್ಕೆ ಅಗತ್ಯವಿರುವ ಗ್ರೀನ್ ಕಾರ್ಡ್ ಪಡೆಯಲು ಪ್ರಯತ್ನಿಸುತ್ತಿರುವವರ H-1B ವೀಸಾ ಅವಧಿಯನ್ನು ವಿಸ್ತರಿಸದಿರಲು ಡೊನಾಲ್ಡ್ ಟ್ರಂಪ್ ಆಡಳಿತ ತೀರ್ಮಾನಿಸಿದ್ದೇ ಆದಲ್ಲಿ ಇಲ್ಲಿರುವ ಐದು ಲಕ್ಷಕ್ಕೂ ಹೆಚ್ಚು ಭಾರತೀಯರು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ.

ಅಮೆರಿಕದ ಹೋಮ್ ಲ್ಯಾಂಡ್ ಸೆಕ್ಯುರಿಟಿ ವಿಭಾಗ ಹೇಳುವ ಪ್ರಕಾರ, 'ಈ ಹೊಸ ನಿಯಮ ಜಾರಿಗೆ ಬಂದರೆ ಭಾರತೀಯರಿಗೆ ಅಮೆರಿಕದಲ್ಲಿ ಉದ್ಯೋಗ ಪಡೆಯಲು ಅಗತ್ಯವಾದ H-1B ವೀಸಾ ಅವಧಿಯನ್ನು ವಿಸ್ತರಿಸಲು ಸಾಧ್ಯವಾಗುವುದಿಲ್ಲ. ಡೊನಾಲ್ಡ್ ಟ್ರಂಪ್ ಅವರು ಅಮೆರಿಕನ್ನರಿಗೇ ಹೆಚ್ಚು ಉದ್ಯೋಗ ನೀಡುವ, ಅಮೆರಿಕ ಪ್ರಜೆಗಳನ್ನು ಹೆಚ್ಚು ಆರ್ಥಿಕವಾಗಿ ಭದ್ರಗೊಳಿಸುವ ಉದ್ದೇಶ ಹೊಂದಿರುವುದರಿಂದ ಈ ನಿಯಮ ಜಾರಿಗೆ ಬರುವ ಎಲ್ಲಾ ಸಾಧ್ಯತೆಗಳಿವೆ'
ಈಗಿರುವ ನಿಯಮದ ಪ್ರಕಾರ H-1B ವೀಸಾ ಹೊಂದಿರುವ ವಿದೇಶಿಯರಿಗೆ ಮೂರು ವರ್ಷಗಳ ಕಾಲ ವೀಸಾ ಕಾಲಾವಧಿ ನಿಗದಿಯಾಗಿರುತ್ತದೆ. ನಂತರ ಅದನ್ನು ಮತ್ತೆ ಮೂರು ವರ್ಷದವರೆಗೆ ವಿಸ್ತರಿಸಬಹುದು. ಈ ಆರು ವರ್ಷದ ನಂತರ ವ್ಯಕ್ತಿ ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಗ್ರೀನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಗ್ರೀನ್ ಕಾರ್ಡ್ ಪಡೆಯುವವರೆಗೆ ಅನಿರ್ದಿಷ್ಟಾವಧಿ ಈ H-1B ವೀಸಾ ಕಾಲಾವಧಿಯನ್ನು ಇಷ್ಟು ದಿನ ವಿಸ್ತರಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಯಾವುದೇ ರೀತಿಯಲ್ಲಿ ಇದನ್ನು ವಿಸ್ತರಿಸುವುದಕ್ಕೆ ಸಾಧ್ಯವಿಲ್ಲ ಎಂಬುದು ಈ ನಿಯಮದ ಸಾರ.
ಈಗಾಗಲೇ ಚೀನಾ ಮತ್ತು ಭಾರತದಿಂದ ಗ್ರೀನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಸಾಕಷ್ಟಿದೆ. ಅವರೆಲ್ಲ 10-12 ವರ್ಷಗಳಿಂದ ಗ್ರೀನ್ ಕಾರ್ಡ್ ಗಾಗಿ ಕಾಯುತ್ತಿದ್ದಾರೆ. ಯಾರ್ಯಾರ ಗ್ರೀನ್ ಕಾರ್ಡ್ ಪ್ರಕ್ರಿಯೆ ಪ್ರಗತಿಯಲ್ಲಿದೆಯೋ ಅವರು ಗ್ರೀನ್ ಕಾರ್ಡ್ ಪಡೆಯುವವರೆಗೂ ಅಮೆರಿಕದಲ್ಲಿ ನೆಲೆಸಲು ಈಗಲೂ ಅವಕಾಶ ಕಲ್ಪಿಸಲಾಗಿದೆ.












Click it and Unblock the Notifications