ಬರ್ಲಿನ್ ನಲ್ಲಿ ಜನರ ಮೇಲೆ ಟ್ರಕ್ ಹರಿಸಿ ಐಸಿಸ್ ಭೀಕರ ಹತ್ಯಾಕಾಂಡ

By: ವಿಕಾಸ್ ನಂಜಪ್ಪ
Subscribe to Oneindia Kannada

ಬರ್ಲಿನ್, ಡಿಸೆಂಬರ್ 20 : ಜನನಿಬಿಡ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ಟ್ರಕ್ ಹರಿಸಿ ಐಸಿಸ್ ಭೀಕರ ಹತ್ಯಾಕಾಂಡ ನಡೆಸಿದ್ದು, ಕನಿಷ್ಠ 9 ಜನರು ಸಾವಿಗೀಡಾಗಿದ್ದು, ಹಲವಾರು ಜನರು ಗಾಯಗೊಂಡ ಘಟನೆ ಸೋಮವಾರ ಸಂಜೆ ನಡೆದಿದೆ.

ಬರ್ಲಿನ್ ನ ಜನಪ್ರಿಯ ಕ್ರಿಸ್ಮಸ್ ಮಾರುಕಟ್ಟೆಯ ಹೊರಭಾಗದಲ್ಲಿರುವ ಕೈಸರ್ ವಿಲ್ಹೆಮ್ ಚರ್ಚ್ ಬಳಿ ಬೃಹತ್ ಸ್ಕಾನಿಯಾ ಟ್ರಕ್ ಜನರ ಮೇಲೆ ನುಗ್ಗಿದೆ. ಈ ಘಟನೆಗೆ ಕಾರಣಕರ್ತನಾದ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. [ಯಾಸಿನ್ ಭಟ್ಕಳ ಹಾಗೂ ನಾಲ್ವರು ಉಗ್ರರಿಗೆ ಗಲ್ಲು ಶಿಕ್ಷೆ]

Truck runs into Berlin's Christmas market: 9 killed several injured

ಉಗ್ರ ಸಂಘಟನೆಯಾದ ಇಸ್ಲಾ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್ಐಎಸ್) ಈ ಭಯೋತ್ಪಾದಕ ಕೃತ್ಯದ ಹೊಣೆ ಹೊತ್ತುಕೊಂಡಿದೆ. ಕೆಲ ತಿಂಗಳ ಹಿಂದೆ ಫ್ರಾನ್ಸ್ ನಲ್ಲಿ ಕೂಡ ಐಸಿಸ್ ಟ್ರಕ್ ಹರಿಸಿ 86 ಜನರನ್ನು ಹತ್ಯೆ ಮಾಡಿತ್ತು. [ಫ್ರಾನ್ಸ್ ನಲ್ಲಿ ಲಾರಿ ಹರಿಸಿ 77 ಜನರ ಭೀಕರ ಹತ್ಯೆ]

ಕ್ರಿಸ್ಮಸ್ ರಜಾ ದಿನಗಳಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಐಎಸ್ಐಎಸ್ ಅಥವಾ ಅಲ್ ಕೈದಾ ಸಂಘಟನೆಗಳು ಇಂಥ ಕೃತ್ಯ ಎಸಗಬಹುದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅಮೆರಿಕ ಎಚ್ಚರಿಕೆ ನೀಡಿತ್ತು.

ಕೆಲ ಪ್ರತ್ಯಕ್ಷದರ್ಶಿಗಳ ಪ್ರಕಾರ, ಉದ್ದೇಶಪೂರ್ವಕವಾಗಿಯೇ ಟ್ರಕ್ಕನ್ನು ಜನರ ಮೇಲೆ ಹಾಯಿಸಲಾಗಿದೆ. ಸುಮಾರು 50ರಿಂದ 80 ಮೀಟರ್ ಉದ್ದಕ್ಕೂ ಟ್ರಕ್ ಚಲಿಸಿ ಜನರ ಮೇಲೆ ನುಗ್ಗಿದೆ ಎಂದು ಅವರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least nine persons were killed after a truck rammed into a crowded Christmas market in Central Berlin on Monday evening. Several others were injured. The police said that a person suspected to be the driver was arrested while a passenger was dead.
Please Wait while comments are loading...