ಇಟಲಿ ಬಳಿಕ ಸ್ಪೇನ್‌ನಲ್ಲಿ ನರಬಲಿ: 10 ಸಾವಿರ ದಾಟಿದ ಸಾವಿನ ಸಂಖ್ಯೆ
ದೆಹಲಿ, ಏಪ್ರಿಲ್ 2: ಸದ್ಯದ ವೇಗ ನೋಡುತ್ತಿದ್ದರೆ ಜಗತ್ತಿನಲ್ಲಿ ಹತ್ತು ಲಕ್ಷ ಕೊರೊನಾ ಪ್ರಕರಣಗಳು ದಾಖಲಾಗುತ್ತೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿತ್ತು. ಅದರಂತೆ ಪ್ರಸ್ತುತ ವಿಶ್ವದಲ್ಲಿ 9.5 ಲಕ್ಷ ಕೊರೊನಾ ಕೇಸ್‌ಗಳು ವರದಿಯಾಗಿದೆ. 48,276 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಸಾವಿನಲ್ಲಿ ಚೀನಾ ದೇಶವನ್ನು ಹಿಂದಿಕ್ಕಿದ ಇಟಲಿ ದೇಶದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಕೊರೊನಾ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ವತಃ ದೇಶದ ಪ್ರಧಾನಿ ಅಳಲು ತೋಡಿಕೊಂಡಿದ್ದರು. ಇದೀಗ, ಇಟಲಿ ದೇಶವನ್ನು ಮೀರಿಸುವಂತೆ ಸ್ಪೇನ್ ದೇಶದಲ್ಲಿ ಕೊರೊನಾಗೆ ನರಬಲಿ ಆಗಿದೆ.
ಆರಂಭದಲ್ಲಿ ಸ್ಪೇನ್ ದೇಶದಲ್ಲಿ ಕೊರೊನಾ ಒಂದು ಹಂತಕ್ಕೆ ನಿಯಂತ್ರಣದಲ್ಲಿತ್ತು. ತದನಂತರ ಲೆಕ್ಕಾಚಾರವನ್ನು ಉಲ್ಟಾಪಲ್ಟಾ ಆಗಿದ್ದು, ಈಗ ಸ್ಪೇನ್ ದೇಶದಲ್ಲೀ ಕೊರೊನಾ ಸಾವಿನ ಸಂಖ್ಯೆ 10 ಸಾವಿರ ಗಡಿದಾಟಿದೆ. ಮುಂದೆ ಓದಿ....

1 ಲಕ್ಷ ಕೇಸ್, 10 ಸಾವಿರ ಸಾವು
ಸ್ಪೇನ್ ದೇಶದಲ್ಲಿ ಇದುವರೆಗೂ 110,238 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಅದರಲ್ಲಿ 10,003 ಜನರು ಸೋಂಕಿಗೆ ಬಲಿಯಾಗಿದ್ದಾರೆ. 26,743 ಜನರು ಚೇತರಿಕೆ ಕಂಡಿದ್ರೆ, 6,092 ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ಹೇಳುತ್ತಿದೆ.

ಯುಎಸ್‌ನಲ್ಲಿ 2 ಲಕ್ಷ ದಾಟಿದ ಸೋಂಕಿತರು
ಅಮೆರಿಕದಲ್ಲಿ ಕೊರೊನಾ ಕೈಮೀರಿದೆ. ಯುಎಸ್ ರಾಷ್ಟ್ರ ಒಂದರಲ್ಲಿ 215,344 ಜನರಲ್ಲಿ ಸೋಂಕಿ ಖಚಿತವಾಗಿದೆ. 5,112 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಚೇತರಿಕೆ ಕಂಡಿರುವವರ ಸಂಖ್ಯೆಯೂ (8,878) ಕಡಿಮೆ ಇದೆ. 5,005 ಜನರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

ಇಟಲಿಯಲ್ಲಿ ಒಂದು ಲಕ್ಷ ಕೇಸ್
ಜಗತ್ತಿನ ಮೂರು ದೇಶಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದು ಲಕ್ಷ ಗಡಿದಾಟಿದೆ. ಅಮೆರಿಕ, ಸ್ಪೇನ್ ಬಿಟ್ಟರೆ ಇಟಲಿ ದೇಶದಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷ (110,574) ಆಗಿದೆ. ಇದುವರೆಗೂ ಇಟಲಿ ದೇಶದಲ್ಲಿ 13,155 ಜನರು ಸಾವನ್ನಪ್ಪಿದ್ದಾರೆ.

ಜರ್ಮನ್, ಇರಾನ್, ಫ್ರಾನ್ಸ್ ಕಥೆ ಏನು?
ಚೀನಾ (81,589 ಸೋಂಕಿತರು) ಬಿಟ್ಟರೆ ಜರ್ಮನ್, ಇರಾನ್, ಫ್ರಾನ್ಸ್ ದೇಶಗಳಲ್ಲಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಜರ್ಮನ್ 77,981 ಸೋಂಕಿತರು, ಇರಾನ್ನಲ್ಲಿ 50,468 ಸೋಂಕಿತರು, ಫ್ರಾನ್ಸ್ ನಲ್ಲಿ 56,989 ಸೋಂಕಿತರ ದಾಖಲಾಗಿದ್ದಾರೆ.












Click it and Unblock the Notifications