ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೇಲ್ ನಲ್ಲಿ ಮೋದಿ: ಭಾರತಕ್ಕಾಗಲಿರುವ 10 ಪ್ರಯೋಜನ

ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡಿರುವ ಇಸ್ರೇಲ್ ಪ್ರವಾಸ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ವಿಶೇಷವಾಗಿ ರಕ್ಷಣಾ ವಲಯಕ್ಕೆ ಇಸ್ರೇಲ್ ನಿಂದ ಹೆಚ್ಚು ಸಹಕಾರ ಸಿಗುವ ಸಾಧ್ಯತೆ ಹೆಚ್ಚಿದೆ.

|
Google Oneindia Kannada News

ನವದಹೆಲಿ, ಜುಲೈ 5: ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಗೆ ಪ್ರಯಾಣ ಬೆಳೆಸಿರುವುದು ಭಾರತವಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.

ಅಮೆರಿಕ ಸೇರಿದಂತೆ, ಭಾರತದ ನೆರೆಯ ದೇಶಗಳಾದ, ಪಾಕಿಸ್ತಾನ, ಚೀನಾ, ಭೂತಾನ್ ಮೊದಲಾದ ಏಷ್ಯಾದ ರಾಷ್ಟ್ರಗಳೂ ಮೋದಿಯವರ ಈ ಪ್ರವಾಸವನ್ನು ಕುತೂಹಲದಿಂದ ಗಮನಿಸುತ್ತಿವೆ.

'ಮೇಕ್ ಇನ್ ಇಂಡಿಯಾ'ಕ್ಕೆ ಇಸ್ರೇಲ್ ನೀಡಿತು ಆನೆಬಲ'ಮೇಕ್ ಇನ್ ಇಂಡಿಯಾ'ಕ್ಕೆ ಇಸ್ರೇಲ್ ನೀಡಿತು ಆನೆಬಲ

ಕಳೆದ ತಿಂಗಳ ಕೊನೆಯ ವಾರದಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ಮೋದಿ, ಈಗ ಇಸ್ರೇಲ್ ಗೂ ಹೋಗಿರುವುದು ಸಹಜವಾಗಿ ಯುದ್ಧಾಸಕ್ತ ರಾಷ್ಟ್ರಗಳಾದ ಪಾಕಿಸ್ತಾನ, ಚೀನಾಗಳಿಗೆ ಕೊಂಚ ಆತಂಕವನ್ನೂ ಸೃಷ್ಟಿಸಿದೆ.

ಈ ಎಲ್ಲಾ ಬೆಳವಣಿಗೆಗಳಿಂದಾಗಿ, ಮೋದಿಯವರ ಈ ಭೇಟಿಯಿಂದ ಭಾರತಕ್ಕಾಗುವ ಲಾಭಗಳೇನು? ಮೋದಿಯವರ ಈ ರಾಜತಾಂತ್ರಿಕ ನಡೆಯಿಂದ ಆಗಬಲ್ಲ ಬದಲಾವಣೆಗಳೇನು ಎಂಬಿತ್ಯಾದಿ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ಕೊಡಲಾಗಿದೆ.

ಭಾರತೀಯ ಸೇನೆಗೆ ಮತ್ತಷ್ಟು ಬಲ

ಭಾರತೀಯ ಸೇನೆಗೆ ಮತ್ತಷ್ಟು ಬಲ

ಇಸ್ರೇಲ್ ತಯಾರಿಸುವ ಯುದ್ಧ ಸಾಮಗ್ರಿಗಳಿಗೆ ಅತಿ ದೊಡ್ಡ ಗ್ರಾಹಕ, ಭಾರತ. 2012ರಿಂದ 2016ರವರೆಗೆ ಭಾರತೀಯ ಸಮಗ್ರ ಸೇನಾ ಬಲಕ್ಕೆ ಬೇಕಾದ ಒಟ್ಟು ಯುದ್ಧ ಸಾಮಗ್ರಿಗಳಲ್ಲಿ ಶೇ. 40ರಷ್ಟನ್ನು ಭಾರತ, ಇಸ್ರೇಲ್ ನಿಂದಲೇ ಪಡೆದಿದೆ. ಅಲ್ಲದೆ, ಇಸ್ರೇಲ್ ಕೂಡ ಭಾರತಕ್ಕೆ ಅತಿ ಹೆಚ್ಚು ಯುದ್ಧ ಸಾಮಗ್ರಿಗಳನ್ನು ತಯಾರಿಸಿಕೊಡುವ ದೇಶಗಳ ಮೂರನೇ ಸ್ಥಾನ ಪಡೆದಿದೆ. (ಈ ಪಟ್ಟಿಯಲ್ಲಿ ರಷ್ಯಾ ಮೊದಲ ಸ್ಥಾನದಲ್ಲಿ, ಅಮೆರಿಕ ಎರಡನೇ ಸ್ಥಾನದಲ್ಲಿವೆ) ಇತ್ತೀಚೆಗೆ, ಭಾರತೀಯ ಸೇನೆಗೆ ನೈಟ್ ಬೈನಾಕ್ಯುಲರ್, ವಿವಿಧ ಕ್ಷಿಪಣಿಗಳ ತಂತ್ರಜ್ಞಾನ ಅಭಿವೃದ್ಧಿಗೆ ಸಾವಿರಾರು ಕೋಟಿ ಬಂಡವಾಳ ಹೂಡಿವೆ. ಇದೀಗ, ಈ ವಲಯಕ್ಕೆ ಹೆಚ್ಚು ಉತ್ತೇಜನ ಕೊಟ್ಟರೆ ಭಾರತದ ಮಿಲಿಟರಿ ಶಕ್ತಿಗೆ ಹೆಚ್ಚು ಇಂಬು ಸಿಗಬಹುದು.

ರಕ್ಷಣಾ ವಿಚಾರದಲ್ಲಿ ಸವಾಲೆಸೆಯುವ ತಂತ್ರಗಾರಿಕೆ

ರಕ್ಷಣಾ ವಿಚಾರದಲ್ಲಿ ಸವಾಲೆಸೆಯುವ ತಂತ್ರಗಾರಿಕೆ

ಭಾರತದಂತೆ ಚೀನಾ ದೇಶವೂ ಇಸ್ರೇಲ್ ನಿಂದ ಯುದ್ಧ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡುತ್ತಿದೆ. ಈ ನಿಟ್ಟಿನಲ್ಲಿ, ಭಾರತವು ಇಸ್ರೇಲ್ ನಿಂದ ಏನೇನು ಪಡೆದಿದೆಯೋ ಅದೆಲ್ಲವನ್ನೂ ಚೀನಾ ಈಗಾಗಲೇ ಇಸ್ರೇಲ್ ನಿಂದ ಪಡೆದುಕೊಂಡಿದೆ. ಆದರೆ, ಚೀನಾಕ್ಕೆ ನೀಡದ ತಂತ್ರಜ್ಞಾನವೊಂದು ಭಾರತಕ್ಕೆ ಸಿಕ್ಕಿದೆ. ಅದೇ, ಆಕಾಶದಲ್ಲಿ ಹಾರಾಡುತ್ತಾ ಗಡಿಯಲ್ಲಿನ ಶತ್ರುಗಳನ್ನು ದೂರದಿಂದಲೇ ಪತ್ತೆ ಹಚ್ಚಿ ಹೊಡೆದುಹಾಕುವ ಸ್ವಯಂ ಚಾಲಿತ ಸಂಶೋಧನಾ ಡ್ರೋನ್. ಈ ಡ್ರೋನ್ ಇನ್ನೂ ತಯಾರಿಕಾ ಹಂತದಲ್ಲಿದೆ. ಇದಕ್ಕೆ ಸಂಬಂಧಿಸಿದ ಒಪ್ಪಂದವನ್ನು ಮತ್ತಷ್ಟು ಮಹತ್ವವನ್ನಾಗಿಸುವ ಪ್ರಯತ್ನಕ್ಕೆ ಭಾರತವು ಈ ಬಾರಿ ಕೈ ಹಾಕಬಹುದು.

ಇಸ್ರೇಲ್ ಜತೆಗೆ ಸೇರಿ ಕ್ಷಿಪಣಿ ಅಭಿವೃದ್ಧಿಗೆ 17 ಸಾವಿರ ಕೋಟಿ ಒಪ್ಪಂದಇಸ್ರೇಲ್ ಜತೆಗೆ ಸೇರಿ ಕ್ಷಿಪಣಿ ಅಭಿವೃದ್ಧಿಗೆ 17 ಸಾವಿರ ಕೋಟಿ ಒಪ್ಪಂದ

ಜಂಟಿ ಸಮರಾಭ್ಯಾಸಕ್ಕೆ ಆನೆ ಬಲ

ಜಂಟಿ ಸಮರಾಭ್ಯಾಸಕ್ಕೆ ಆನೆ ಬಲ

ಇಸ್ರೇಲ್ ನೊಂದಿಗೆ ಸ್ನೇಹ ಸಂಪರ್ಕವನ್ನು ಮತ್ತಷ್ಟು ಗಟ್ಟಿಯಾಗಿಸುವ ಮೂಲಕ, ಭಾರತವು ನೆರೆಯ ತಗಾದೆ ದೇಶಗಳಾದ ಪಾಕಿಸ್ತಾನ ಹಾಗೂ ಚೀನಾಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಬಹುದಾಗಿದೆ. ಅಲ್ಲದೆ, ಚೀನಾ ಹಾಗೂ ಪಾಕಿಸ್ತಾನದ ಕುತಂತ್ರಗಳ ವಿರುದ್ಧ ಹೋರಾಡಲು ಸಹಾಯ ಮಾಡಬೇಕೆಂದು ಇಸ್ರೇಲ್ ಸರ್ಕಾರದೊಂದಿಗೆ ಮಾತನಾಡಿ ಈ ಬಗ್ಗೆ ಒಪ್ಪಂದ ಮಾಡಿಕೊಳ್ಳುವ ಅವಕಾಶವಿದೆ. ಈಗಾಗಲೇ, ಚೀನಾ ಹಾಗೂ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಲು ಅಮೆರಿಕ-ಜಪಾನ್ ಗಳೊಂದಿಗೆ ನೌಕಾಪಡೆಗಳ ಜಂಟಿ ಸಮರಾಭ್ಯಾಸ ನಡೆಸುತ್ತಿರುವ ಭಾರತಕ್ಕೆ ಇಸ್ರೇಲ್ ಬೆಂಬಲ ಸಿಕ್ಕರೆ ಆನೆ ಬಲ ಬಂದಂತಾಗುತ್ತದೆ.

ಉಭಯ ದೇಶಗಳ ಸೌಹಾರ್ದತೆಯಿಂದ ಭವಿಷ್ಯ ಉತ್ತಮ

ಉಭಯ ದೇಶಗಳ ಸೌಹಾರ್ದತೆಯಿಂದ ಭವಿಷ್ಯ ಉತ್ತಮ

70 ವರ್ಷಗಳ ನಂತರ, ಭಾರತದ ಪ್ರಧಾನಿಯೊಬ್ಬರು ಇಸ್ರೇಲ್ ಗೆ ಕಾಲಿಟ್ಟಂತಾಗಿದೆ. ಈ ಹಿಂದೆ, 2008ರಲ್ಲಿ ಅಂದಿನ ಗೃಹ ಸಚಿವ ಎಲ್.ಕೆ. ಅಡ್ವಾಣಿ, 2008ರಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, 2014ರಲ್ಲಿ ಗೃಹ ಸಚಿವ ರಾಜ್ ನಾಥ್ ಸಿಂಗ್, 2015ರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಕಳೆದ ವರ್ಷ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಭೇಟಿ ನೀಡಿದ್ದರು. ಪ್ರಧಾನಿ ಭೇಟಿ ನೀಡುತ್ತಿರುವುದು ಇದೇ ಮೊದಲು ಆಗಿರುವುದರಿಂದ ದ್ವಿಪಕ್ಷೀಯ ರಾಜತಾಂತ್ರಿಕ ಸಂಬಂಧಗಳು ಮತ್ತಷ್ಟು ವೃದ್ಧಿಯಾಗುವ ನಿರೀಕ್ಷೆಗಳಿವೆ.

ಕೃಷಿ ತಂತ್ರಜ್ಞಾನ ಹಸ್ತಾಂತರಗೊಳ್ಳುವ ಸಾಧ್ಯತೆ

ಕೃಷಿ ತಂತ್ರಜ್ಞಾನ ಹಸ್ತಾಂತರಗೊಳ್ಳುವ ಸಾಧ್ಯತೆ

2015ರಲ್ಲಿ ಜಾರಿಗೆ ಬಂದಿರುವ ಉಭಯ ದೇಶಗಳ ನಡುವಿನ ಕೃಷಿ ಕ್ಷೇತ್ರದಲ್ಲಿನ ಸಹಕಾರ ಒಪ್ಪಂದ 2018ರವರೆಗೆ ಮುಂದುವರಿಯಲಿದೆ. ಇದು ಪುನಃ ನವೀಕರಣಗೊಳ್ಳುವ ಸಾಧ್ಯತೆಯಿದ್ದು, ಭಾರತೀಯ ರೈತರಿಗೆ ಇಸ್ರೇಲ್ ನ ಕ್ಷಷಿ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿರುವ ಅನೇಕ ತಂತ್ರಜ್ಞಾನ ಹಾಗೂ ಇತರ ವಿಷಯಗಳನ್ನು ಭಾರತಕ್ಕೂ ಹಸ್ತಾಂತರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಅಲ್ಲದೆ, ಶೇ. 65ರಷ್ಟು ನೀರಿನ ಕೊರತೆಯ ನಡುವೆಯೇ ಸಮೃದ್ಧ ಬೆಳೆ ಬೆಳೆಯುವ ತಂತ್ರಜ್ಞಾನವೂ ಭಾರತಕ್ಕೆ ಲಭ್ಯವಾಗುವ ಸಾಧ್ಯತೆಗಳಿವೆ.

ನೀರಿನ ಕೊರತೆ ಎದುರಿಸಲು ಸಿಗಬಹುದೇ ಹೊಸ ತಂತ್ರಜ್ಞಾನ?

ನೀರಿನ ಕೊರತೆ ಎದುರಿಸಲು ಸಿಗಬಹುದೇ ಹೊಸ ತಂತ್ರಜ್ಞಾನ?

2016ರಲ್ಲಿ ಭಾರತ ಮತ್ತು ಇಸ್ರೇಲ್ ನಡುವೆ ನೀರಿನ ಮೂಲಗಳ ಅಭಿವೃದ್ಧಿ ಕುರಿತ ತಂತ್ರಜ್ಞಾನ, ಮಾಹಿತಿಗಳ ವಿನಿಮಯದ ಬಗ್ಗೆ ಒಪ್ಪಂದವಾಗಿತ್ತು. ಈ ನಿಟ್ಟಿನಲ್ಲಿ ತನ್ನ ಹಲವಾರು ಭಾಗಗಳಲ್ಲಿ ತೀವ್ರ ಬರಗಾಲ, ಮುಂಗಾರು ವೈಫಲ್ಯಗಳನ್ನು ಅನುಭವಿಸುತ್ತಿರುವ ಭಾರತಕ್ಕೆ ಉಪಯುಕ್ತ ತಂತ್ರಜ್ಞಾನಗಳು ಲಭ್ಯವಾಗಬಹುದು.

ಕುಸಿದ ವ್ಯಾಪಾರ ವ್ಯವಹಾರ ಮೇಲೆತ್ತುವ ಪ್ರಯತ್ನ

ಕುಸಿದ ವ್ಯಾಪಾರ ವ್ಯವಹಾರ ಮೇಲೆತ್ತುವ ಪ್ರಯತ್ನ

ವಾಣಿಜ್ಯ ವ್ಯವಹಾರಗಳ ಸಂಬಂಧದಲ್ಲಿಇಸ್ರೇಲ್, ಭಾರತದ 38ನೇ ಅತಿ ದೊಡ್ಡ ಜತೆಗಾರ. ಅಂದರೆ, ಉಭಯ ದೇಶಗಳ ನಡುವೆ ಸುಮಾರು 33,634 ಕೋಟಿ ರು. ಗಳಷ್ಟು ವಾಣಿಜ್ಯ ವ್ಯವಹಾರಗಳು ನಡೆಯುತ್ತಿವೆ. ಆದರೆ, ಕಳೆದ ಆರ್ಥಿಕ ವರ್ಷದಲ್ಲಿ (2016-17) ಇದರ ಪ್ರಮಾಣ ಶೇ. 18ರಷ್ಟು ಇಳಿದಿದೆ. ಇದನ್ನು ಮೇಲೆತ್ತಲು ಈಗ ಬಾರಿಯ ಮೋದಿ ಭೇಟಿಯ ವೇಳೆ ಒತ್ತು ಕೊಡಬಹುದು.

ಇಸ್ರೇಲ್ ನಿಂದ 17 ಸಾವಿರ ಕೋಟಿ ರು. ಬಂಡವಾಳ

ಇಸ್ರೇಲ್ ನಿಂದ 17 ಸಾವಿರ ಕೋಟಿ ರು. ಬಂಡವಾಳ

'ಮೇಕ್ ಇನ್ ಇಂಡಿಯಾ' ಯೋಜನೆಯಡಿ ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಇಸ್ರೇಲ್ ಈಗಾಗಲೇ 12 ಸಾವಿರ ಕೋಟಿ ರು. ನೀಡುವುದಾಗಿ ಹೇಳಿದೆ. ಇದೇ ಒಪ್ಪಂದದಡಿ, ಡ್ರೋನ್, ರೇಡಾರ್ ಗಳ ನಿರ್ಮಾಣ ಹಾಗೂ ಮಾರಾಟಕ್ಕೆ ಸಂಬಂಧಿಸಿದ ಒಪ್ಪಂದವೊಂದಕ್ಕೆ ಮೋದಿಯವರ ಈ ಬಾರಿಯ ಭೇಟಿಯಲ್ಲಿ ಸಹಿ ಬೀಳುವ ಸಾಧ್ಯತೆಯಿದೆ.

ಪೌರಾಣಿಕ ಮಹತ್ವದ ನದಿ ಸ್ವಚ್ಛತೆಗೆ ಮತ್ತಷ್ಟು ಬಲ?

ಪೌರಾಣಿಕ ಮಹತ್ವದ ನದಿ ಸ್ವಚ್ಛತೆಗೆ ಮತ್ತಷ್ಟು ಬಲ?

ಗಂಗಾ ನದಿಯ ಸ್ವಚ್ಛತೆಯ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಭಾರತಕ್ಕೆ ಇಸ್ರೇಲ್ ಸಹ ಕೈ ಜೋಡಿಸಿದೆ. ಗಂಗಾ ನದಿ ನೈರ್ಮಲ್ಯೀಕರಣ ಯೋಜನೆಯ ಭಾಗ 1ರಲ್ಲಿ ಇಸ್ರೇಲ್ ಧನ ಸಹಾಯ ಮಾಡಿದೆ. ಈ ಆರ್ಥಿಕ ಸಹಾಯವನ್ನು ಮತ್ತಷ್ಟು ಹೆಚ್ಚಿಸಲು ಭಾರತ ಈ ಬಾರಿ ಇಸ್ರೇಲ್ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು.

ಆಹಾರ ಪೂರೈಕೆ ಸಮಸ್ಯೆ ಪರಿಹಾರಕ್ಕೂ ಸಹಾಯ?

ಆಹಾರ ಪೂರೈಕೆ ಸಮಸ್ಯೆ ಪರಿಹಾರಕ್ಕೂ ಸಹಾಯ?

ಉಭಯ ದೇಶಗಳಲ್ಲಿರುವ ಆಹಾರ ಉತ್ಪಾದನೆ ಹಾಗೂ ಪೂರೈಕೆ ಸಮಸ್ಯೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಪರಸ್ಪರ ಸಹಕಾರ, ಉತ್ತೇಜನಗಳನ್ನು ನೀಡುವ ಸಂಬಂಧ ಹೊಸತೊಂದು ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ.

English summary
As Prime Minister Narendra Modi is on Israel tour, many expectations have erupted in India. As, Israel is the third third-largest source of arms, it is expected to Modi's Israel visit this time, strengthen the Indian defense sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X