• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುದ್ದಿ ಚಿತ್ರ: ನರೇಂದ್ರ ಮೋದಿ- ನವಾಜ್ 'ಹ್ಯಾಂಡ್ ಶೇಕ್'

By Mahesh
|

ಬೆಂಗಳೂರು, ನ,27: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಇತ್ತೀಚಿನ ರೌಂಡ್ಅಪ್ ಅನ್ನು ಚಿತ್ರಗಳ ಮೂಲಕ ಹೇಳುವ ಪ್ರಯತ್ನ ಇದಾಗಿದೆ. ಇಲ್ಲಿ ಅಕ್ಷರಕ್ಕಿಂತ ಆಕರ್ಷಕ ಚಿತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಚುಟುಕು ಮಾಹಿತಿಯೊಂದಿಗೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ನಡೆದ ಸಾರ್ಕ್ ಶೃಂಗಸಭೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ಅವರ ಮೇಲೆ ಮುನಿಸಿಕೊಂಡಿದ್ದಾರೆ. ಇಬ್ಬರು ಹಸ್ತಲಾಘವ ಮಾಡಿ ಶುಭಾಶಯ ವಿನಿಮಯ ಮಾಡಿಕೊಂಡಿಲ್ಲ ಎಂಬುದು ದೊಡ್ಡ ಸುದ್ದಿಯಾಗಿತ್ತು.

ಅದರೆ, ಸಾರ್ಕ್ ಶೃಂಗಸಭೆಯಲ್ಲಿ ಕೊನೆ ಗಳಿಗೆಯಲ್ಲಿ ಇಬ್ಬರು ಮುಖಂಡರು ಪರಸ್ಪರ ಹಸ್ತಲಾಘವ ಮಾಡಿದ್ದಲ್ಲದೆ ಸಂತೋಷದಿಂದ ನಗೆ ಚೆಲ್ಲಿದ ಚಿತ್ರ ಎಲ್ಲರ ಗಮನ ಸೆಳೆದಿದೆ. [ನೇಪಾಳದಲ್ಲಿ ಭಾರತದ ಕರೆನ್ಸಿ ಧೈರ್ಯವಾಗಿ ಬಳಸಿ]

ಶೃಂಗಸಭೆಯಲ್ಲಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದಿಲ್ಲ ಹಾಗೂ ಬುಧವಾರದಂದು ಇಬ್ಬರು ನಾಯಕರು ಒಂದೇ ವೇದಿಕೆಯಲ್ಲಿದ್ದರೂ ಇಬ್ಬರ ಕಣ್ಣುಗಳು ಕಲೆತಿರಲಿಲ್ಲ ಎಂಬುದು ಎಲ್ಲೆಡೆ ಚರ್ಚೆಗೊಳಗಾಗಿತ್ತು. ಅಂದ ಹಾಗೆ, ಮುಂದಿನ ಸಾರ್ಕ್ ಸಮ್ಮೇಳನ ಪಾಕಿಸ್ತಾನದಲ್ಲಿ ಇಸ್ಲಾಮಾಬಾದಿನಲ್ಲಿ ನಡೆಯಲಿದೆ. ಇಬ್ಬರು ನಾಯಕರ ಸಂತಸದ ಕ್ಷಣದ ಚಿತ್ರಗಳ ಜೊತೆಗೆ ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ ನೋಡಿ

ಸಾರ್ಕ್ ಸಮ್ಮೇಳನದ ಟಾಪ್ ಚಿತ್ರ

ಸಾರ್ಕ್ ಸಮ್ಮೇಳನದ ಟಾಪ್ ಚಿತ್ರ

ಭಾರತ ಹಾಗೂ ಪಾಕಿಸ್ತಾನದ ಪ್ರಧಾನಿಗಳು ಪರಸ್ಪರ ಹಸ್ತಲಾಘವ ಮಾಡಿಕೊಂಡು ಸಂತಸದಿಂದಿರುವ ಚಿತ್ರವನ್ನು PIB ಪೋಸ್ಟ್ ಮಾಡಿದೆ.

ಮೋದಿ- ನವಾಜ್ 'ಹ್ಯಾಂಡ್ ಶೇಕ್'

ಮೋದಿ- ನವಾಜ್ 'ಹ್ಯಾಂಡ್ ಶೇಕ್'

ಸಾರ್ಕ್ ಶೃಂಗಸಭೆಯಲ್ಲಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದಿಲ್ಲ ಹಾಗೂ ಬುಧವಾರದಂದು ಇಬ್ಬರು ನಾಯಕರು ಒಂದೇ ವೇದಿಕೆಯಲ್ಲಿದ್ದರೂ ಇಬ್ಬರ ಕಣ್ಣುಗಳು ಕಲೆತಿರಲಿಲ್ಲ ಎಂಬುದು ಎಲ್ಲೆಡೆ ಚರ್ಚೆಗೊಳಗಾಗಿತ್ತು.

PIBನಿಂದ ಮೋದಿ ಹಾಗೂ ಷರೀಫ್ ಚಿತ್ರ

PIBನಿಂದ ಮೋದಿ ಹಾಗೂ ಷರೀಫ್ ಚಿತ್ರ

ಭಾರತದ ವಾರ್ತಾ ಮತ್ತು ಪ್ರಸಾರ ಇಲಾಖೆಯಿಂದ ನರೇಂದ್ರ ಮೋದಿ ಹಾಗೂ ನವಾಜ್ ಷರೀಫ್ ಅವರ ಹಸ್ತಲಾಘವ ಚಿತ್ರ

ಧುಲಿಖೇಲ್ ನಲ್ಲಿ ಸಾರ್ಕ್ ದೇಶಗಳ ನಾಯಕರು

ಧುಲಿಖೇಲ್ ನಲ್ಲಿ ಸಾರ್ಕ್ ದೇಶಗಳ ನಾಯಕರು

ನೇಪಾಳದ ಧುಲಿಖೇಲ್ ನಲ್ಲಿ ನಡೆದ 18ನೇ ಸಾರ್ಕ್ ಸಮ್ಮೇಳನದಲ್ಲಿ ವಿವಿಧ ದೇಶಗಳ ನಾಯಕರು. PTI Photo / PIB

ಗ್ರೇಟರ್ ನೋಯ್ಡಾದಲ್ಲಿ ಸಚಿನ್ ತೆಂಡೂಲ್ಕರ್

ಗ್ರೇಟರ್ ನೋಯ್ಡಾದಲ್ಲಿ ಸಚಿನ್ ತೆಂಡೂಲ್ಕರ್

ಗ್ರೇಟರ್ ನೋಯ್ಡಾದಲ್ಲಿ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರು ಬಿಎಂಡಬ್ಲ್ಯೂ ಹೊಸ ಕಾರಿನೊಂದಿಗೆ ಪೋಸ್

ಬಿಎಂಡಬ್ಲ್ಯೂ ಹೊಸ ಕಾರುಗಳ ಜತೆ ಸಚಿನ್

ಬಿಎಂಡಬ್ಲ್ಯೂ ಹೊಸ ಕಾರುಗಳ ಜತೆ ಸಚಿನ್

ಗ್ರೇಟರ್ ನೋಯ್ಡಾದಲ್ಲಿ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರು ಬಿಎಂಡಬ್ಲ್ಯೂ ಎಂ 3 ಹಾಗೂ ಎಂ 4 ಕಾರುಗಳ ಜೊತೆ. PTI Photo

 ಟಿಎಂಸಿ ಸಂಸದರ ಪ್ರತಿಭಟನೆ ಮುಂದುವರಿಕೆ

ಟಿಎಂಸಿ ಸಂಸದರ ಪ್ರತಿಭಟನೆ ಮುಂದುವರಿಕೆ

ನವದೆಹಲಿ: ಲೋಕಸಭೆ ಹೊರಗಡೆ ತೃಣಮೂಲ ಕಾಂಗ್ರೆಸ್ ನ ಸಂಸದರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮುಂದುವರೆಸಿದ್ದಾರೆ. ಕಪ್ಪುಹಣ ತರುತ್ತೇವೆ ಎಂದು ಹೇಳಿ ಸರ್ಕಾರ ಮೋಸ ಮಾಡುತ್ತಿದೆ ಎಂದು ದೂರಿದ್ದಾರೆ. PTI Photo by Kamal Singh

 ಜಾಮ್ ನಗರದಲ್ಲಿ ನೇವಿ ಜಂಪ್

ಜಾಮ್ ನಗರದಲ್ಲಿ ನೇವಿ ಜಂಪ್

ಜಾಮ್ ನಗರದಲ್ಲಿ ಭಾರತೀಯ ಜಲಸೇನೆಯ ಅಧಿಕಾರಿಗಳು 100 ಮೀಟರ್ ಈಜು ಸ್ಪರ್ಧೆಯಲ್ಲಿ ಪಾಲ್ಗೊಂಡು ಅರಬ್ಬಿ ಸಮುದ್ರಕ್ಕೆ ಜಿಗಿಯುತ್ತಿರುವ ಚಿತ್ರ PTI Photo

ಚುನಾವಣಾ ಪ್ರಚಾರ ನಿರತ ಒಮರ್ ಅಬ್ದುಲ್ಲಾ

ಚುನಾವಣಾ ಪ್ರಚಾರ ನಿರತ ಒಮರ್ ಅಬ್ದುಲ್ಲಾ

ಶ್ರೀನಗರ : ಚುನಾವಣಾ ಪ್ರಚಾರ ನಿರತ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲಾ ಅವರು ಕುಲ್ಗಾಮ್ ನಲ್ಲಿ ಗುರುವಾರ ಭಾಷಣ ಮಾಡುತ್ತಿರುವ ದೃಶ್ಯ. PTI Photo

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Todays news stories in pics around the world: Indian PM Narendra Modi shakes hands with Pakistan PM Nawaz Sharif at the end of SAARC summit held in Kathmandu, Nepal and many interesting pictures from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more