ಚಿತ್ರಗಳಲ್ಲಿ : ಕ್ಲಿಯೋಪಾತ್ರ ದಾಳಿಗೆ ಇಟಲಿ ಜನತೆ ತತ್ತರ

ಬೆಂಗಳೂರು, ನ.20: ಇಟಲಿಯ ಮೆಡಿಟೇರಿಯನ್ ಸಮುದ್ರದ ಬಳಿದ ಸರ್ಡಿನಿಯಾ ದ್ವೀಪ ಕ್ಲಿಯೋಪಾತ್ರ ದಾಳಿಗೆ ತತ್ತರಿಸಿದೆ. ಕಳೆದೆರಡು ದಿನಗಳಿಂದ ಭಾರಿ ಮಳೆ, ಪ್ರವಾಹ ಪರಿಸ್ಥಿತಿಯಿಂದ ಜನತೆ ಆತಂಕದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕ್ಲಿಯೋಪಾತ್ರ ಹೆಸರಿನ ಚಂಡಮಾರುತ ಸುಮಾರು 450 ಮಿಲಿ ಮೀ ಮಳೆ ಸುರಿಸಿದ್ದಲ್ಲದೇ ಕಚೇರಿ, ಮನೆ, ಕಾರುಗಳನ್ನು ತನ್ನ ಪ್ರವಾಹದೊಡನೆ ಕೊಚ್ಚಿಕೊಂಡು ಕರೆದೊಯ್ದಿದೆ.

ಒಲ್ಬಿಯಾದ ಮೇಯರ್ ಗಿಯಾನಿ ಗಿಯೊವಾನ್ನೆಲ್ಲಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿ ಪ್ರವಾಹ ಪರಿಸ್ಥಿತಿಯಿಂದ ಜನತೆಯನ್ನು ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ತುರ್ತು ಆರ್ಥಿಕ ನೆರವಿನ ರೂಪದಲ್ಲಿ 20 ಮಿಲಿಯನ್ ಯುರೋ ಗಳನ್ನು ಎತ್ತಿಡಲಾಗಿದ್ದು, ಪರಿಹಾರ ಕಾರ್ಯ ಮುಂದುವರೆದಿದೆ ಎಂದಿದ್ದಾರೆ.

ಉಳಿದಂತೆ ಇಂದಿನ ಚಿತ್ರ ಸುದ್ದಿಗಳಲ್ಲಿ ಬಾಲಿವುಡ್ ಚಿತ್ರ ಧೂಮ್ 3 ಪ್ರಚಾರ, ಕೊಚ್ಚಿಗೆ ಏಕದಿನ ಕ್ರಿಕೆಟ್ ಆಡಲು ಬಂದ ವಿಂಡೀಸ್ ಪಡೆಗೆ ಕೇರಳಿಗರ ಸ್ವಾಗತ, ಚಿಕ್ಕಮಗಳೂರಿನ ರೈಲು, ಸಿಎನ್ ಆರ್ ರಾವ್ ಅವರನ್ನು ಸನ್ಮಾನಿಸಿದ ಜೆಡಿಎಸ್ ನಾಯಕರು, ಅಮೆರಿಕದ ಕಾನ್ಸಾಸ್ ನಗರ, ರಾಯ್ ಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ, ಭೋಪಾಲ್ ನಿಂದ ಬಂದ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ...

ಇಟಲಿಯಲ್ಲಿ ಪ್ರವಾಹ

ಇಟಲಿಯಲ್ಲಿ ಪ್ರವಾಹ

ಒಲ್ಬಿಯಾದಲ್ಲಿ ಸುಮಾರು 17 ಜನರನ್ನು ಬಲಿ ತೆಗೆದುಕೊಂಡ ಕ್ಲಿಯೋಪಾತ್ರ ಚಂಡಮಾರುತಕ್ಕೆ ಬೆದರಿ ನಿಂತಿರುವ ವಾಹನಗಳು

ಚಿಕ್ಕಮಗಳೂರಿನ ನೂತನ ರೈಲು

ಚಿಕ್ಕಮಗಳೂರಿನ ನೂತನ ರೈಲು

ಚಿಕ್ಕಮಗಳೂರು-ಕಡೂರು ನೂತನ ರೈಲ್ವೆ ಮಾರ್ಗ ಲೋಕಾರ್ಪಣೆ ಮಾಡಿದ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಜಿ.ಎಚ್.ಶ್ರೀನಿವಾಸ್, ವೈ.ಎಸ್.ವಿ.ದತ್ತ, ಬಿ.ಬಿ.ನಿಂಗಯ್ಯ, ಸಿ.ಟಿ.ರವಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಅಭಯಚಂದ್ರ ಜೈನ್, ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಎಂ.ವೀರಪ್ಪ ಮೊಯಿಲಿ, ಆಸ್ಕರ್ ಫರ್ನಾಂಡಿಸ್, ಆಸ್ಕರ್ ಪತ್ನಿ ಬ್ಲಾಸಂ ಫರ್ನಾಂಡಿಸ್, ಸಂಸದ ಜಯಪ್ರಕಾಶ್ ಹೆಗ್ಡೆ

ಗುರ್ ಗಾಂವ್ ನಲ್ಲಿ

ಗುರ್ ಗಾಂವ್ ನಲ್ಲಿ

ನಟಿ ಮೀನಾಕ್ಷಿ ಕಲಿತಾ ಗುರ್ ಗಾಂವ್ ನ ಖಾಸಗಿ ಕಾರ್ಯಕ್ರಾಮಕ್ಕೆ ಆಗಮಿಸಿದ್ದಾಗ ಕೊಟ್ಟ ಪೋಸ್

ಭಾರತ ರತ್ನ ರಾವ್ ಗೆ ಸನ್ಮಾನ

ಭಾರತ ರತ್ನ ರಾವ್ ಗೆ ಸನ್ಮಾನ

ಭಾರತ ರತ್ನ ಸಿಎನ್ ಆರ್ ರಾವ್ ಅವರಿಗೆ ಆತ್ಮೀಯ ಸನ್ಮಾನ ಮಾಡಿದ ಮಾಜಿ ಮುಖ್ಯಮಂತ್ರಿ ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ

ಕೊಚ್ಚಿಯಲ್ಲಿ ವಿಂಡೀಸ್

ಕೊಚ್ಚಿಯಲ್ಲಿ ವಿಂಡೀಸ್

ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯವಾಡಲು ಕೊಚ್ಚಿಗೆ ಆಗಮಿಸಿದ ವಿಂಡೀಸ್ ತಂಡಕ್ಕೆ ಕೇರಳದ ಸಾಂಪ್ರದಾಯಿಕ ಸ್ವಾಗತ ಸಿಕ್ಕಿದೆ

ಧೂಮ್ 3 ಪ್ರಚಾರ

ಧೂಮ್ 3 ಪ್ರಚಾರ

ಮುಂಬೈ: ಕತ್ರೀನಾ ಕೈಫ್ ಹಾಗೂ ಅಮೀರ್ ಖಾನ್ ಅವರು ಧೂಮ್ 3 ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ

ರಾಯ್ ಬರೇಲಿಯಲ್ಲಿ

ರಾಯ್ ಬರೇಲಿಯಲ್ಲಿ

ರಾಯ್ ಬರೇಲಿಯಲ್ಲಿ ಇಂದಿರಾಗಾಂಧಿ ಮೊಮ್ಮಗಳು ಪ್ರಿಯಾಂಕಾ ಗಾಂಧಿ ಅವರು ಅಲಿಪುರ್ ಗ್ರಾಮಸ್ಥರ ಜತೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+