ಚಿತ್ರಗಳಲ್ಲಿ: ಲಿಬಿಯಾ ಪ್ರಧಾನಿ ಅಪಹರಣ, ಇತ್ಯಾದಿ

ಬೆಂಗಳೂರು, ಅ.10: ಹೊಡೆದರೆ ಆನೆಯನ್ನೇ ಹೊಡೆಯ ಬೇಕು ಎನ್ನುವ ಗಾದೆ ಮಾತಿನಂತೆ ಶಸ್ತ್ರಸಜ್ಜಿತ ಅಪಹರಣಕಾರರು ಲಿಬಿಯಾ ದೇಶದ ಪ್ರಧಾನಿಯನ್ನೇ ಅಪಹರಿಸಿದ್ದಾರೆ. ಲಿಬಿಯಾ ದೇಶದಲ್ಲಿನ ಭದ್ರತಾ ವ್ಯವಸ್ಥೆ ಎಷ್ಟು ಕೀಳು ಮಟ್ಟದಲ್ಲಿದೆ ಅಂದರೆ ಅಪಹರಣಕಾರರು ಪ್ರಧಾನಿಯನ್ನು ಎಲ್ಲಿ ಒತ್ತೆ ಇಟ್ಟಿದ್ದಾರೆಂದು ಇದುವರೆಗೂ ತಿಳಿದು ಬಂದಿಲ್ಲ ಎಂಬ ವರದಿಗಳನ್ನು ಸರ್ಕಾರ ತಳ್ಳಿ ಹಾಕಿದೆ. ಅಸಲಿಗೆ ಅಪಹರಣ ನಡೆದಿಲ್ಲ. ಪ್ರಧಾನಿಯನ್ನು ಬಂಧಿಸಲಾಗಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ

ಕೊರಿಂಥಿಯನ್ ಹೋಟೆಲ್ ನಿಂದ ಸಿನಿಮಿಯ ರೀತಿಯಲ್ಲಿ ಲಿಬಿಯಾ ಪ್ರಧಾನಿ ಅಲಿ ಜೈದಾನ್ ಅವರನ್ನು ಗುರುವಾರ ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

ಪ್ರಧಾನಿ ಅಪಹರಣದ ಪ್ರತ್ಯಕ್ಷದರ್ಶಿ, ಹೋಟೆಲ್ ಕ್ಲರ್ಕ್‌ನ ಹೇಳಿಕೆ ಪ್ರಕಾರ, ಪ್ರಧಾನಿ ಅಲಿ ಜೈದಾನ್ ಅವರು ಹೋಟೆಲ್‌ನ ಹೊರಗೆ ತಮ್ಮ ಕಾರಿಗಾಗಿ ಕಾಯುತ್ತಿದ್ದ ವೇಳೆ ದೀಢಿರನೆ ದಾಳಿ ಮಾಡಿದ ಬಂದೂಕುಧಾರಿ ಬಂಡುಕೋರರು ಪ್ರಧಾನಿಯನ್ನು ಅಪಹರಿಸಿಕೊಂಡು ಹೋದರು ಎಂದು ತಿಳಿಸಿದ್ದಾನೆ. ಈ ವೇಳೆ ಯಾವುದೇ ಗುಂಡಿನ ಚಕಮಿಕಿ ನಡೆದ ವರದಿಯಾಗಿಲ್ಲ.

ಲಿಬಿಯಾ ಸರ್ವಾಧಿಕಾರಿ ಅಮ್ಮರ್ ಗಡಾಫಿ ಅಂತ್ಯದ ಬಳಿಕವೂ ಲಿಬಿಯಾ ದೇಶದಲ್ಲಿ ಶಾಂತಿ ನೆಲೆಸುವ ಸೂಚನೆಗಳು ಕಾಣುತ್ತಿಲ್ಲ. ಹೊಸ ಸರ್ಕಾರವನ್ನು ಬಂಡುಕೋರರು ಇನ್ನಿಲ್ಲದಂತೆ ಕಾಡುತ್ತಿದ್ದಾರೆ. ಗಡಾಫಿಯನ್ನು ಕಿತ್ತೊಗೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಿಬಿಯಾ ಮಿಲಿಟರಿ ಪಡೆ ಅಂದಿನಿಂದಲೂ ಕೇಂದ್ರ ಸರ್ಕಾರಕ್ಕೆ ಹೆಚ್ಚು ಸ್ವಾಯತ್ತತೆ ನೀಡುವಂತೆ ಆಗ್ರಹಿಸಿದ್ದವು. ಸ್ವಾಯತ್ತತೆ ನೀಡಲು ಒಪ್ಪದ ಹಿನ್ನೆಲೆಯಲ್ಲಿ ಈ ಅಪಹರಣ ನಡೆದಿದೆ ಎನ್ನಲಾಗುತ್ತಿದೆ. ಮಿಕ್ಕ ಸುದ್ದಿಗಳು ಚಿತ್ರಗಳಲ್ಲಿ ನೋಡಿ

ಲಿಬಿಯಾ ಪ್ರಧಾನಿ ಅಪಹರಣ

ಲಿಬಿಯಾ ಪ್ರಧಾನಿ ಅಪಹರಣ

ಲಿಬಿಯಾ ಸರ್ವಾಧಿಕಾರಿ ಅಮ್ಮರ್ ಗಡಾಫಿ ಅಂತ್ಯದ ಬಳಿಕವೂ ಲಿಬಿಯಾ ದೇಶದಲ್ಲಿ ಶಾಂತಿ ನೆಲೆಸುವ ಸೂಚನೆಗಳು ಕಾಣುತ್ತಿಲ್ಲ. ಹೊಸ ಸರ್ಕಾರವನ್ನು ಬಂಡುಕೋರರು ಇನ್ನಿಲ್ಲದಂತೆ ಕಾಡುತ್ತಿದ್ದಾರೆ. ಗಡಾಫಿಯನ್ನು ಕಿತ್ತೊಗೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಿಬಿಯಾ ಮಿಲಿಟರಿ ಪಡೆ ಅಂದಿನಿಂದಲೂ ಕೇಂದ್ರ ಸರ್ಕಾರಕ್ಕೆ ಹೆಚ್ಚು ಸ್ವಾಯತ್ತತೆ ನೀಡುವಂತೆ ಆಗ್ರಹಿಸಿದ್ದವು. ಸ್ವಾಯತ್ತತೆ ನೀಡಲು ಒಪ್ಪದ ಹಿನ್ನೆಲೆಯಲ್ಲಿ ಈ ಅಪಹರಣ ನಡೆದಿದೆ ಎನ್ನಲಾಗುತ್ತಿದೆ.

ಶಿವಮೊಗ್ಗದ ಹೊಸ ಅತಿಥಿ

ಶಿವಮೊಗ್ಗದ ಹೊಸ ಅತಿಥಿ

ಶಿವಮೊಗ್ಗದ ತಾವರಕೊಪ್ಪೆ ಸಿಂಹಧಾಮದಲ್ಲಿ ಕೃತಿಕಾ ಎಂಬ ಕರಿಚಿರತೆಗೆ ಇತ್ತೀಚೆಗೆ ಹುಟ್ಟಿದ ಕೂಸಿಗೆ ಮಿಂಚುಳ್ಳಿ ಎಂಬ ಹೆಸರಿಡಲಾಗಿದೆ.

ಹೇಮಾ ಮಾಲಿನಿ ಭಂಗಿ

ಹೇಮಾ ಮಾಲಿನಿ ಭಂಗಿ

ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿದ ನಟಿ ಹೇಮಮಾಲಿನಿ ಭಂಗಿ

ಬ್ರಾವೋ ಡ್ಯಾನ್ಸ್

ಬ್ರಾವೋ ಡ್ಯಾನ್ಸ್

ವೆಸ್ಟ್ ಇಂಡೀಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಬ್ರಾವೋ ಅವರು ತಮಿಳಿನ ಚಿತ್ರ 'ಉಲಾ' ದಲ್ಲಿ ನಟಿಸಿದ್ದು ನೃತ್ಯದಲ್ಲಿ ತೊಡಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+