ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಅಫ್ಘಾನ್ ನಿರಾಶ್ರಿತರ ತಡೆಯಲು 295 ಕಿ.ಮೀ ಗೋಡೆ ನಿರ್ಮಿಸುತ್ತಿರುವ ಟರ್ಕಿ!

|
Google Oneindia Kannada News

ಕಾಬೂಲ್, ಆಗಸ್ಟ್ 17: ಅಫ್ಘಾನಿಸ್ತಾನದಲ್ಲಿ ನಿರಾಶ್ರಿತರ ಸ್ಥಿತಿಯಲ್ಲಿ ನಿಂತಿರುವ ಪ್ರಜೆಗಳ ನುಸುಳುವಿಕೆ ತಡೆಯುವ ಉದ್ದೇಶದಿಂದ ಟರ್ಕಿಯು ಇರಾನಿಯನ್ ಗಡಿ ಪ್ರದೇಶದಲ್ಲಿ 295 ಕಿಲೋ ಮೀಟರ್ ಉದ್ದದ ಬೃಹತ್ ಗೋಡೆಯೊಂದನ್ನು ನಿರ್ಮಿಸುತ್ತಿದೆ.

ಪ್ರಸ್ತುತ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇರಾನ್ ಮೂಲಕ ನಿರಾಶ್ರಿತರು ಟರ್ಕಿಯನ್ನು ಪ್ರವೇಶಿಸದಿರಲು ಎನ್ನುವ ಉದ್ದೇಶವನ್ನು ಇಟ್ಟುಕೊಂಡು 295 ಕಿಲೋ ಮೀಟರ್ ಉದ್ದದ ಗೋಡೆ ನಿರ್ಮಾಣದ ಗುರಿಯನ್ನು ಹೊಂದಲಾಗಿದೆ.

ಅಫ್ಘಾನಿಸ್ತಾನದಲ್ಲಿ ಬಂದೂಕು ಹಿಡಿದು ನಿಂತ ತಾಲಿಬಾನಿಗಳ ಕುಣಿತಕ್ಕೆ ಚೀನಾ ತಾಳ!ಅಫ್ಘಾನಿಸ್ತಾನದಲ್ಲಿ ಬಂದೂಕು ಹಿಡಿದು ನಿಂತ ತಾಲಿಬಾನಿಗಳ ಕುಣಿತಕ್ಕೆ ಚೀನಾ ತಾಳ!

ಅಫ್ಘಾನಿಸ್ತಾನದಲ್ಲಿ ಎರಡು ದಶಕಗಳ ನಂತರ ಯುನೈಟೆಡ್ ಸ್ಟೇಟ್ಸ್ ಸೇನೆ ವಾಪಸ್ ಕರೆಸಿಕೊಳ್ಳುವುದಾಗಿ ಘೋಷಿಸುತ್ತಿದ್ದಂತೆ ತಾಲಿಬಾನ್ ಉಗ್ರ ಸಂಘಟನೆ ಇಡೀ ದೇಶವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಮೊದಲಿಗೆ ದೇಶದ ಒಂದೊಂದೇ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡ ತಾಲಿಬಾನ್ ಉಗ್ರರು ಆಗಸ್ಟ್ 15ರಂದು ರಾಜಧಾನಿ ಕಾಬೂಲ್‌ಗೆ ಲಗ್ಗೆ ಇಡುವ ಮೂಲಕ ಇಡೀ ದೇಶವನ್ನು ಹಿಡಿತಕ್ಕೆ ತೆಗೆದುಕೊಂಡಿದೆ. ಇದರ ಮಧ್ಯೆ ಅಫ್ಘಾನ್ ಪ್ರಜೆಗಳು ತಮ್ಮ ದೇಶವನ್ನು ಪ್ರವೇಶಿಸದಿರಲಿ ಎಂದು ಟರ್ಕಿ ಈ ಯೋಜನೆಯನ್ನು ಹಾಕಿಕೊಂಡಿದೆ. ಇರಾನ್ ಗಡಿಯಲ್ಲಿ ಟರ್ಕಿ ನಿರ್ಮಿಸುತ್ತಿರುವ ಗೋಡೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 ‘To Stop Influx of Refugees from Afghanistan’ Turkey Builds 295 km-long Wall Along Iranian Border

ದೇಶ ತೊರೆಯುವುದಕ್ಕೆ ನಿಂತ ಅಫ್ಘಾನ್ ಪ್ರಜೆಗಳು:

ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆ ದೇಶದ ಲಕ್ಷಾಂತರ ಜನರು ಆಘಾತಕ್ಕೊಳಗಾದರು. ಮುಂದಿನ ಭವಿಷ್ಯದ ಭೀತಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ದೇಶವನ್ನೇ ತೊರೆದು ಹೋಗುವುದಕ್ಕೆ ಶುರು ಮಾಡಿದ್ದಾರೆ. 1996 ರಿಂದ 2001ರ ಅವಧಿಯಲ್ಲಿ ಆಡಳಿತ ನಡೆಸಿದ ಇದೇ ತಾಲಿಬಾನ್ ಉಗ್ರರು ಕ್ರೂರಾತೀಕ್ರೂರ ಶಿಕ್ಷೆಗಳನ್ನು ನೀಡುವ ಮೂಲಕ ಜನರ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. 1990ರ ದಶಕದ ತಾಲಿಬಾನ್ ಉಗ್ರರ ಆಳ್ವಿಕೆಯಲ್ಲಿ ಜಾರಿಗೊಳಿಸಿದ ಶರಿಯಾ ಕಾನೂನಿನ ಕ್ರೌರ್ಯತೆ ಬಗ್ಗೆ ಅರಿತಿರುವ ಜನರು ಉಗ್ರರ ಮುಷ್ಠಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಹಾತೊರೆಯುತ್ತಿದ್ದಾರೆ.

ಗಡಿ ಗೋಡೆ ನಿರ್ಮಾಣದ ಬಗ್ಗೆ ಟರ್ಕಿ ಸಚಿವರ ಮಾತು:

"ನಾವು ಬೃಹತ್ ಗೋಡೆಯನ್ನು ನಿರ್ಮಿಸುತ್ತಿದ್ದೇವೆ. ಅದರ ಒಂದು ದೊಡ್ಡ ಭಾಗವನ್ನು ಪೂರ್ಣಗೊಳಿಸಲಾಗಿದೆ. ಸುಮಾರು 150 ಕಿಲೋಮೀಟರ್ ಕಂದಕಗಳನ್ನು ಅಗೆಯಲಾಯಿತು. ನಮ್ಮ ಗಡಿ ಹೊರ ವಲಯ ಮತ್ತು ಕೇಂದ್ರ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆ. ನಾವು ಥರ್ಮಲ್ ನೈಟ್ ವಿಷನ್ ಸಾಧನಗಳನ್ನು ಒಳಗೊಂಡಂತೆ ಸುಮಾರು ಒಂದು ಸಾವಿರ ವಿಚಕ್ಷಣ ಕಣ್ಗಾವಲು ವಾಹಕಗಳೊಂದಿಗೆ ಕಾರ್ಯನಿರ್ವಹಿಸುತ್ತೇವೆ. ಗಡಿರೇಖೆಯಲ್ಲಿ ಚಲನಶೀಲತೆಯನ್ನು ಪತ್ತೆಹಚ್ಚುವುದನ್ನು ತುಂಬಾ ಸುಲಭಗೊಳಿಸಿದ ಎಲೆಕ್ಟ್ರೋ-ಆಪ್ಟಿಕಲ್ ಟವರ್‌ಗಳು ಮತ್ತು ಅಕೌಸ್ಟಿಕ್ ಸೆನ್ಸರ್‌ಗಳಿಗೆ ಧನ್ಯವಾದ," ಎಂದು ಟರ್ಕಿ ರಕ್ಷಣಾ ಸಚಿವ ಹುಲಸಿ ಅಕರ್ ಹೇಳಿದ್ದಾರೆ.

ವಿದೇಶಗಳಿಗೆ ತೊಂದರೆ ಆಗುವುದಿಲ್ಲ ಎಂದ ತಾಲಿಬಾನ್:

"ನೆರೆಹೊರೆಯ ರಾಷ್ಟ್ರಗಳ ವಿರುದ್ಧ ದುಷ್ಕೃತ್ಯ ಎಸಗಲು ನಮ್ಮ ನೆಲವನ್ನು ದುರುಪಯೋಗ ಮಾಡಿಕೊಳ್ಳುವುದಕ್ಕೆ ಬಿಡುವುದಿಲ್ಲ ಎಂದು ಭರವಸೆ ನೀಡಿದ್ದೇವೆ. ಅಂತರಾಷ್ಟ್ರೀಯ ಸಮುದಾಯವು ನಮ್ಮ ಸರ್ಕಾರವನ್ನು ಗುರುತಿಸಬೇಕು" ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ. ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡ ನಂತರ ಮೊದಲ ಬಾರಿಗೆ ಕಾಬೂಲ್‌ನ ಸರ್ಕಾರಿ ಮಾಧ್ಯಮ ಮತ್ತು ಮಾಹಿತಿ ಕೇಂದ್ರದಲ್ಲಿ ತಾಲಿಬಾನ್ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದ್ದಾರೆ.

ಸೇಡು ತೀರಿಸಿಕೊಳ್ಳುವುದು ನಮ್ಮ ಉದ್ದೇಶವಲ್ಲ:

"ಅಫ್ಘಾನಿಸ್ತಾನ ವಿಮೋಚನೆ ಆಗಿರುವ ಈ ಸಂದರ್ಭದಲ್ಲಿ ತಾಲಿಬಾನ್ ಯಾರ ವಿರುದ್ಧವೂ ಸೇಡು ತೀರಿಸಿಕೊಳ್ಳುವುದಕ್ಕೆ ಬಯಸುವುದಿಲ್ಲ. ಕಾಬೂಲ್‌ನಲ್ಲಿ ಇರುವ ವಿದೇಶಿ ದೂತವಾಸ ಕಚೇರಿಗಳು, ರಾಯಭಾರಿ ಸಿಬ್ಬಂದಿ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಭದ್ರತೆ ಮತ್ತು ಸುರಕ್ಷತೆಗೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ. ದೇಶದ ಉಳಿದ ಪ್ರದೇಶಗಳನ್ನು ವಶಪಡಿಸಿಕೊಂಡ ನಂತರ ಕಾಬೂಲ್‌ನಲ್ಲಿ ಅಸ್ತಿತ್ವ ಸ್ಥಾಪಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ ದುರದೃಷ್ಟವಶಾತ್, ಈ ಹಿಂದಿನ ಸರ್ಕಾರವು ಅಸಮರ್ಥವಾಗಿತ್ತು. ಅವರಿಗೆ ಭದ್ರತೆ ನೀಡಲು ಸಾಧ್ಯವಾಗಲಿಲ್ಲ. ನಾವು ಈಗ ಎಲ್ಲಾ ವಿದೇಶಿ ಸಂಸ್ಥೆಗಳಿಗೆ ಭದ್ರತೆ ಒದಗಿಸುತ್ತೇವೆ. ನಾವು ಅಫ್ಘಾನಿಸ್ತಾನದ ಒಳಗೆ ಅಥವಾ ಹೊರಗೆ ಯಾವುದೇ ಶತ್ರುಗಳನ್ನು ಹುಡುಕುವುದಿಲ್ಲ," ಎಂದಿದ್ದಾರೆ.

Recommended Video

ತಾಲಿಬಾನ್ ಆಡಳಿತದ ನಿಯಮಗಳನ್ನು ಕೇಳಿದ್ರೆ ಎಂಥವರೂ ನಡುಗಿ ಹೋಗ್ತಾರೆ | Oneindia Kannada

English summary
‘To Stop Influx of Refugees from Afghanistan’ Turkey Builds 295 km-long Wall Along Iranian Border.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X