'ರಾಜಕೀಯ ಪ್ರೇರಿತ ಪ್ರಕರಣ' ಎಂಬ ಗುರಾಣಿ ಬಳಸಲು ಮಲ್ಯ ಸಿದ್ಧತೆ!

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಏಪ್ರಿಲ್ 20: ಯಾವುದೇ ವ್ಯಕ್ತಿಯ ಹಸ್ತಾಂತರ ಪ್ರಕ್ರಿಯೆಯಲ್ಲಿ ಅದು ರಾಜಕೀಯ ಪ್ರೇರಿತವಲ್ಲ ಎಂಬ ಮುಖ್ಯ ಅಂಶ ಸಾಬೀತಾಗಬೇಕು. ವಿಜಯ್ ಮಲ್ಯ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಯುಕೆ ಕೋರ್ಟ್ ಕಲಾಪಗಳು ಮೇ 17ರಂದು ಆರಂಭವಾಗುತ್ತವೆ. ಮಲ್ಯ ಪರ ವಕೀಲರು ತನ್ನ ಕಕ್ಷೀದಾರ ರಾಜಕೀಯ ಉದ್ದೇಶದ ಬಲಿಪಶು ಎಂದು ವಾದ ಹೂಡುವ ಸಾಧ್ಯತೆಯಿದೆ.

ಭಾರತದ ಪರವಾಗಿ ವಾದ ಮಂಡಿಸುವಾಗ ವಿಜಯ್ ಮಲ್ಯ ವಿರುದ್ಧ ಇರುವ ಆರೋಪಗಳನ್ನು ಸಾಬೀತು ಮಾಡಿದರಷ್ಟೇ ಸಾಲದು. ಈ ಪ್ರಕರಣ ರಾಜಕೀಯ ಪ್ರೇರಿತವಲ್ಲ ಅಂತಲೂ ರುಜುವಾತು ಮಾಡಬೇಕು. ಇನ್ನೊಂದು ಕಡೆ ಮಲ್ಯ ಪರ ವಕೀಲರು ಇಡೀ ಪ್ರಕರಣವು ರಾಜಕೀಯ ಪ್ರೇರಿತವಾದದ್ದು ಎಂದು ಬಿಂಬಿಸಿಯೇ ಬಿಂಬಿಸುತ್ತಾರೆ.[ಜಾಮೀನು ಸಿಕ್ಕಿರಬಹುದು, ಆದ್ರೆ ಮಲ್ಯ ಪರಿಸ್ಥಿತಿ ದೇವ್ರಿಗೇ ಪ್ರೀತಿ!]

To avoid Mallya will quote political vendetta

ಒಂದು ವೇಳೆ ವಿಜಯ್ ಮಲ್ಯ ಹಸ್ತಾಂತರಕ್ಕೆ ಒಪ್ಪಿದ್ದೇ ಆದರೆ ಅದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಭಾರತದಲ್ಲಿ ಮಲ್ಯ ವಿಚಾರಣೆ ಎದುರಿಸಿದರೆ ಅವರಿಗೆ ನ್ಯಾಯ ಸಿಗುವುದಿಲ್ಲ. ಏಕೆಂದರೆ ಭಾರತದ ನ್ಯಾಯಾಂಗ ವ್ಯವಸ್ಥೆ ಮೇಲೆ ವಿಶ್ವಾಸವಿಲ್ಲ. ಈ ಪ್ರಕರಣವೇ ರಾಜಕೀಯ ಪ್ರೇರಿತ ಹಾಗೂ ಉದ್ದೇಶದಿಂದ ಕೂಡಿದೆ ಎಂದು ಮಲ್ಯ ಪರ ವಾದಿಸುವ ಕಾನೂನು ತಂಡ ಕೋರ್ಟ್ ಗೆ ಹೇಳುವ ಸಾಧ್ಯತೆಯಿದೆ.[ಮಲ್ಯ ಭಾರತಕ್ಕೆ ಬರಲು ಕನಿಷ್ಠ 10 ವರ್ಷವಾದರೂ ಬೇಕು!]

ಭಾರತವು ತುಂಬ ಪ್ರಬಲವಾದ ವಾದ ಮಂಡಿಸಬೇಕು. ಕಾನೂನು ಸಾಧ್ಯತೆ ಜತೆಗೆ ಎಲ್ಲ ರಾಜತಾಂತ್ರಿಕ ಮಾರ್ಗಗಳ ಮೂಲಕ ವಿಜಯ್ ಮಲ್ಯ ಹಸ್ತಾಂತರಕ್ಕೆ ಪ್ರಯತ್ನಿಸಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In any extradition proceedings, one major point that needs to be proven is that the process is not politically motivated. Vijay Mallya's extradition proceedings before a UK court which would begin on May 17 would see his lawyers arguing that he is a victim of political agenda.
Please Wait while comments are loading...