ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಬ್ಬರ ಬಳಿಯೂ ಅಣ್ವಸ್ತ್ರವಿದೆ, ನೆನಪಿರಲಿ: ಅಬ್ಬರಿಸಿದ ಇಮ್ರಾನ್ ಖಾನ್

|
Google Oneindia Kannada News

ಇಸ್ಲಾಮಾಬಾದ್, ಆಸಗ್ಟ್ 26: "ಕಾಶ್ಮೀರ ಸಮಸ್ಯೆಗೆ ಅಂತಿಮ ಪರಿಹಾರ ಕಂಡುಕೊಳ್ಳುವ ಸಮಯ ಸನ್ನಿಹಿತವಾಗಿದೆ" ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

'ಭಾರತ ಯಾವುದೇ ನಡೆ ಇಡುವ ಮುನ್ನ ಎರಡೂ ದೇಶಗಳೂ ಅಣ್ವಸ್ತ್ರಗಳನ್ನು ಹೊಂದಿವೆ ಎಂಬುದು ನೆನಪಿರಲಿ' ಎಂದು ಇದೇ ಸಂದರ್ಭದಲ್ಲಿ ಖಾನ್ ಹೇಳಿದರು.

ಸೋಮವಾರ ಪಾಕಿಸ್ತಾನಿ ಟಿವಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಇಮ್ರಾನ್ ಖಾನ್, "ಪಾಕಿಸ್ತಾನ ಯಾವತ್ತೂ ಶಾಂತಿ ಮತ್ತು ಅಭಿವೃದ್ಧಿಯನ್ನು ಬಯಸುತ್ತಿದೆ. ಆದರೆ ಭಾರತ ನಮ್ಮನ್ನು ದಿವಾಳಿ ಮಾಡಲು ಯತ್ನಿಸುತ್ತಿದೆ. ಎಷ್ಟೋ ದಶಕಗಳಿಂದ ಎದುರಿಸುತ್ತಿರುವ ಸಮಸ್ಯೆಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಮಯ ಸನ್ನಿಹಿತವಾಗಿದೆ" ಎಂದು ಇಮ್ರಾನ್ ಖಾನ್ ಹೇಳಿದರು.

ಸದ್ಯ, ಹಿಸ್ಟರಿ ಮೇಷ್ಟ್ರಾಗಲಿಲ್ಲ! ಇಮ್ರಾನ್ ಗೆ ಆನಂದ್ ಮಹೀಂದ್ರಾ ಮಂಗಳಾರತಿ ಸದ್ಯ, ಹಿಸ್ಟರಿ ಮೇಷ್ಟ್ರಾಗಲಿಲ್ಲ! ಇಮ್ರಾನ್ ಗೆ ಆನಂದ್ ಮಹೀಂದ್ರಾ ಮಂಗಳಾರತಿ

ಭಾರತ ಸರ್ಕಾರ ತನ್ನ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾವನ್ನು ರದ್ದುಗೊಳಿಸಿದ ನಡೆಯನ್ನು 'ಮಹಾ ಪ್ರಮಾದ' ಎಂದು ಕರೆದ ಇಮ್ರಾನ್ ಖಾನ್, 'ಜಮ್ಮು ಮತ್ತು ಕಾಶ್ಮೀರ ಆಯ್ತು. ಈಗ ಪಿಒಕೆಯತ್ತ ಭಾರತ ಕಣ್ಣು ಹಾಕುತ್ತಿದೆ' ಎಂದು ಇಮ್ರಾನ್ ಖಾನ್ ದೂರಿದರು.

ಯುದ್ಧಕ್ಕೆ ನಮ್ಮ ಸೇನೆ ಸಿದ್ಧ!

ಯುದ್ಧಕ್ಕೆ ನಮ್ಮ ಸೇನೆ ಸಿದ್ಧ!

"ನಾವು ಯಾವಾಗಲೂ ಶಾಂತಯನ್ನು ಬಯಸುವವರು. ಆದರೆ ಭಾರತವೇನಾದರೂ ಗಡಿಯಲ್ಲಿ ತಂಟೆ ತೆಗೆದರೆ ಯುದ್ಧಕ್ಕೆ ನಮ್ಮ ಸೇನೆ ಸಿದ್ಧವಾಗಿದೆ" ಎಂದು ಇಮ್ರಾನ್ ಖಾನ್ ಹೇಳಿದರು. 'ಭಾರತದ ಬಳಿ ಅಣ್ವಸ್ತ್ರವಿದೆ ಎಂಬುದೇ ನಮಗೆ ಆತಂಕದ ವಿಷಯ' ಎಂದು ಇತ್ತೀಚೆಗಷ್ಟೇ ಖಾನ್ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಭಾರತದೊಂದಿಗೆ ಮಾತುಕತೆಯ ಕಾಲ ಮುಗಿಯಿತು: ಇಮ್ರಾನ್ ಖಾನ್ ಭಾರತದೊಂದಿಗೆ ಮಾತುಕತೆಯ ಕಾಲ ಮುಗಿಯಿತು: ಇಮ್ರಾನ್ ಖಾನ್

ವಿಶ್ವದ ಗಮನ ಎಳೆಯುವಲ್ಲಿ ಗೆದ್ದಿದ್ದೇವೆ!

ವಿಶ್ವದ ಗಮನ ಎಳೆಯುವಲ್ಲಿ ಗೆದ್ದಿದ್ದೇವೆ!

"ನಾವು ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದೇವೆ. ವಿಶ್ವಸಂಸ್ಥೆಯ ಗಮನಕ್ಕೆ ತಂದಿದ್ದೇವೆ. ಬೇರೆ ಬೇರೆ ರಾಷ್ಟ್ರದ ಪತ್ರಿಕೆಗಳೂ ಈ ಬಗ್ಗೆ ಚರ್ಚಿಸಿವೆ" ಎಂದು ಇಮ್ರಾನ್ ಖಾನ್ ಹೇಳಿದರು.

ಇಬ್ಬರ ಬಳಿಯೂ ಅಣ್ವಸ್ತ್ರವಿದೆ, ನೆನಪಿರಲಿ

ಇಬ್ಬರ ಬಳಿಯೂ ಅಣ್ವಸ್ತ್ರವಿದೆ, ನೆನಪಿರಲಿ

ಅಕಸ್ಮಾತ್ ಉಭಯ ದೇಶಗಳ ನಡುವಿನ ಸಂಘರ್ಷ ವಿಕೋಪಕ್ಕೆ ತೆರಳಿದರೆ, 'ಇಬ್ಬರ ಬಳಿಯೂ ಅಣ್ವಸ್ತ್ರವಿದೆ ಎಂಬುದು ನೆನಪಿರಲಿ. ಅಣು ಯುದ್ಧದಲ್ಲಿ ಯಾರೂ ಗೆಲುವು ಸಾಧಿಸುವುದಿಲ್ಲ. ಬದಲಾಗಿ ಜಗತ್ತು ನೋವನುಭವಿಸಬೇಕಾಗುತ್ತದೆ. ವಿಶ್ವದ ಸೂಪರ್ ಪವರ್ ಗಳು ನಮ್ಮನ್ನು ಬೆಂಬಲಿಸಲಿ, ಬಿಡಲಿ. ಆದರೆ ಭಾರತ ಯುದ್ಧಕ್ಕೆ ನಿಂತರೆ ನಾವು ಸುಮ್ಮನೆ ಬಿಡುವುದಿಲ್ಲ' ಎಂದು ಇಮ್ರಾನ್ ಖಾನ್ ಎಚ್ಚರಿಕೆಯ ಧಾಟಿಯಲ್ಲಿ ಹೇಳಿದರು.

ಪಾಕ್ ದುರಹಂಕಾರಕ್ಕೆ ತಕ್ಕ ಶಾಸ್ತಿ, FATF ನಿಂದ ಕಪ್ಪುಪಟ್ಟಿಯ ಶಿಕ್ಷೆ!ಪಾಕ್ ದುರಹಂಕಾರಕ್ಕೆ ತಕ್ಕ ಶಾಸ್ತಿ, FATF ನಿಂದ ಕಪ್ಪುಪಟ್ಟಿಯ ಶಿಕ್ಷೆ!

ಅತ್ತ ಮೋದಿ -ಟ್ರಂಪ್ ಮಾತುಕತೆ

ಅತ್ತ ಮೋದಿ -ಟ್ರಂಪ್ ಮಾತುಕತೆ

ಅತ್ತ ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಕಾಶ್ಮೀರಕ್ಕೆ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎತ್ತಿದ ಪ್ರಸ್ತಾಪಕ್ಕೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ, 'ಕಾಶ್ಮೀರ ಭಾರತ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ ದ್ವಿಪಕ್ಷೀಯ ವಿಷಯ. ಅದನ್ನು ನಾವು ಬಗೆಹರಿಸಿಕೊಳ್ಳುತ್ತೇವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮೂರನೇ ದೇಶ ಮಧ್ಯಸ್ಥಿಕೆ ವಹಿಸುವ ತೊಂದರೆ ತೆಗೆದುಕೊಳ್ಳುವುದು ಬೇಡ ಎಂಬುದು ನನ್ನ ಭಾವನೆ' ಎಂದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

English summary
Pakistan Prime Minister Imran Khan while addressing his nation on television said, Time has come for final solution of Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X