ನ್ಯೂ ಮೆಕ್ಸಿಕೋ ಹೈಸ್ಕೂಲ್ ನಲ್ಲಿ ಶೂಟೌಟ್: ಶೂಟರ್ ಸೇರಿ 3 ಬಲಿ
ಅಜ್ಟೆಕ್(ನ್ಯೂ ಮೆಕ್ಸಿಕೋ), ಡಿಸೆಂಬರ್ 8: ಅಮೆರಿಕದ ನ್ಯೂಮೆಕ್ಸಿಕೋದ ಅಜ್ಟೆಕ್ ನ ಹೈಸ್ಕೂಲ್ ವೊಂದರಲ್ಲಿ ನಡೆದ ಶೂಟೌಟ್ ನಲ್ಲಿ ಗನ್ ಮನ್ ಸೇರಿದಂತೆ ಮೂವರು ಮೃತರಾಗಿದ್ದಾರೆ. ಘಟನೆ ಡಿ.7 ರಂದು ನಡೆದಿದೆ.
ಶೂಟೌಟ್ ನಡೆಸಿದ ಶೂಟರ್ ಸಹ ಮೃತನಾಗಿದ್ದಾನೆಂದು ಮೂಲಗಳು ತಿಳಿಸಿವೆ. ಆದರೆ ಮೃತರಾದವರು ವಿದ್ಯಾರ್ಥಿಗಳೋ ಅಥವಾ ದೊಡ್ಡವರೋ ಎಂಬ ಬಗ್ಗೆ ಮಾಹಿತಿ ಇಲ್ಲ.

ಇತ್ತೀಚೆಗೆ ತಾನೇ ಟೆಕ್ಸಾಸ್ ನ ಚರ್ಚ್ ವೊಂದರಲ್ಲಿ ನಡೆದಿದ್ದ ಶೂಟೌಟ್ ನಲ್ಲಿ 25 ಕ್ಕೂ ಹೆಚ್ಚು ಜನ ಮೃತರಾಗಿದ್ದರು.












Click it and Unblock the Notifications