ಎಲ್ಲಾದರೇನು ಎಲೆಕ್ಷನ್, ಇಲ್ಲಿದೆ ಮಜವಾದ ಕ್ಯಾಂಪೇನ್!
ರಾಜಕಾರಣ ಅಂತ ಬಂದುಬಿಟ್ಟರೆ ಬಹಳ ವ್ಯತ್ಯಾಸಗಳೇನೂ ಇರಲ್ಲ ಎಂದು ಎಲ್ಲವನ್ನೂ ಸಾಮಾನ್ಯಗೊಳಿಸಿ ಮಾತನಾಡಿ ಬಿಡುವುದು ಸರಳ. ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ ಎಲ್ಲೇ ಹೋದರೂ ರಾಜಕಾರಣದ ಸ್ಟಂಟ್ ಗಳೆಲ್ಲ ಒಂದೇ ಎಂದು ಮೂದಲಿಸುವುದು ಸಲೀಸು.
ನಿಮಗೆ ಯಾಕೆ ಅನುಮಾನ? ಪಾಕಿಸ್ತಾನದಲ್ಲಿ ಜುಲೈನಲ್ಲಿ ನಡೆಯುವ ಚುನಾವಣೆಗೆ ಅಲ್ಲಿನ ಪಕ್ಷೇತರ ಅಭ್ಯರ್ಥಿಯೊಬ್ಬರ ಪ್ರಚಾರ ವೈಖರಿ ನೋಡಿದ ನಂತರ ನಿಮಗೆ ಏನನ್ನಿಸುತ್ತದೆ ಅಂತ ಹೇಳಿ. ಈ ಪುಣ್ಯಾತ್ಮನ ಹೆಸರು ಅಯಾಜ್ ಮೆಮನ್ ಮೋಟಿವಾಲ. ಕರಾಚಿಯಲ್ಲಿ ಪಕ್ಷೇತರವಾಗಿ ಕಣಕ್ಕಿಳಿದಿರುವ ಈ ಆಸಾಮಿ ಬಿಡುಗಡೆ ಮಾಡಿರುವ ಫೋಟೋ- ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಅಂತಹ ಫೋಟೋ- ವಿಡಿಯೋ ಏನಪ್ಪ ಅಂದರೆ, ಕಸದ ರಾಶಿಗಳ ಮೇಲೆ ಕೂತು, ಚರಂಡಿ ನೀರಿನ ಮೇಲೆ ಆರಾಮವಾಗಿ ಮಲಗಿ, ರಸ್ತೆಯ ಗುಂಡಿಯೊಳಗೆ ಅರ್ಧ ದೇಹವನ್ನು ಒಳಗೆ ಹಾಕಿ ತಮ್ಮ ಚುನಾವಣೆ ಪ್ರಚಾರವನ್ನು ಭರ್ಜರಿಯಾಗಿ ಮಾಡಿ, ಗಮನ ಸೆಳೆಯುತ್ತಿದ್ದಾರೆ. ಅದಕ್ಕೆ ಹೇಳಿದ್ದು, ಎಲ್ಲಾದರೇನು ಚುನಾವಣೆ? ಕೆಲವು ಅಭ್ಯರ್ಥಿಗಳ ಪ್ರಚಾರವಾದರೂ ಹೀಗೆ ಗಮನ ಸೆಳೆಯುತ್ತದೆ.

ಅಷ್ಟೇ ಅಲ್ಲ, ಈತ ಚರಂಡಿಯ ಕಸದ ಮೇಲೆ ಯಾವುದೇ ಮುಜುಗರ ಇಲ್ಲದೆ, ಮೂಗು ಮುರಿಯದೆ ಊಟ ಮಾಡಿದ್ದಾರೆ. ಇನ್ನು ಚರಂಡಿ ನೀರೇ ಕುಡಿದಿದ್ದಾರೆ. ಅಂದಹಾಗೆ ಕಸ, ಚರಂಡಿ, ರಸ್ತೆ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದು ಅಯಾಜ್ ಮೆಮನ್ ಮೋಟಿವಾಲ ಉದ್ದೇಶವಂತೆ. ಈ ಫೋಟೋ ನೋಡಿದರೆ ನಿಮಗೇನನ್ನಿಸುತ್ತದೆ.












Click it and Unblock the Notifications