ಸಮಸ್ಯೆ ಅಮೆರಿಕದ ಗನ್ ನಿಯಮದ್ದಲ್ಲ, ಮಾನಸಿಕ ಅಸಮತೋಲನದ್ದು: ಟ್ರಂಪ್

ಟೋಕಿಯೋ, ನವೆಂಬರ್ 07: ಸಮಸ್ಯೆ ಇರುವುದು ಅಮೆರಿಕದ ಗನ್ ನಿಯಮದ್ದಲ್ಲ, ಆದರೆ ಅಂಥ ವ್ಯಕ್ತಿಗಳ ಮಾನಸಿಕೆ ಅಸಮತೋಲನವೇ ಇಂಥ ಘಟನೆಗಳಿಗೆ ಕಾರಣ ಎಂದು ಟೆಕ್ಸಾಸ್ ನಲ್ಲಿ ನಡೆದ ಶೂಟೌಟ್ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಫ್ ಪ್ರತಿಕ್ರಿಯಿಸಿದ್ದಾರೆ.

ಏಷ್ಯಾದ 5 ದೇಶಗಳ ಪ್ರವಾಸದ ಭಾಗವಾಗಿ ಜಪಾನಿಗೆ ಭೇಟಿ ನೀಡಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. "ಅಮೆರಿಕದ ಗನ್ ನಿಯಮಗಳು ಸಡಿಲವಾಗಿಲ್ಲ, ಅಥವಾ ನಿಯಮದಲ್ಲಿ ಯಾವುದೇ ದೋಷವಿಲ್ಲ. ಆದರೆ ಕೆಲವು ವ್ಯಕ್ತಿಗಳ ಮಾನಸಿಕ ಆರೋಗ್ಯ ಸಮಸ್ಯೆ ಪರಾಕಾಷ್ಠೆಯ ಸ್ಥಿತಿ ತಲುಪಿರುವುದೇ ಈ ಎಲ್ಲ ಸಮಸ್ಯೆಗಳಿಗೆ ಕಾರಣ. ಇದು ನಿಜಕ್ಕೂ ಅತ್ಯಂತ ಬೇಸರದ ಸಂಗತಿ, ಹೀನಾಯ ಹೀನ ಘಟನೆ" ಎಂದು ಅವರು ಭಾವುಕರಾಗಿ ನುಡಿದರು.

This isn't a guns situation. This is a mental health problem: Trump

ಇಂಥ ಘಟನೆಗಳನ್ನು ತಡೆಯಲು ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ನ.5 ರಂದು ಅಮೆರಿಕದ ಟೆಕ್ಸಾಸ್ ನ ಚರ್ಚೆ ವೊಂದರಲ್ಲಿ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 25 ಕ್ಕೂ ಹೆಚ್ಚು ಮಂದಿ ಮೃತರಾಗಿದ್ದರು. ನೂರಾರು ಜನ ಗಾಯಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+