ಬೇಡ.. ಬೇಡ.. ಅಂದ್ರೂ ಅದನ್ನೇ ಮಾಡ್ತಿದ್ದಾರೆ ಡೊನಾಲ್ಡ್ ಟ್ರಂಪ್!
ಅಮೆರಿಕ ಅಧ್ಯಕ್ಷೀಯ ಚುನಾವಣೆ 2024ರ ಕಾವು ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದ್ದು, ಸೋಲು & ಗೆಲುವಿನ ಆಟ ಶುರುವಾಗಿದೆ. ಒಂದು ಕಡೆ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ, 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ನಡೆಸಬೇಕು ಎಂಬ ಆಸೆಯಲ್ಲಿ ಇದ್ದಾರೆ. ಇದೇ ವೇಳೆ ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಮಾತ್ರ ಅಮೆರಿಕದ ಇತಿಹಾಸದಲ್ಲಿ ತಮ್ಮದೇ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಇಷ್ಟೆಲ್ಲದರ ನಡುವೆ ಡೊನಾಲ್ಡ್ ಟ್ರಂಪ್ ಮಾತ್ರ, ಬೇಡ.. ಬೇಡ.. ಅಂದ್ರೂ ಅದನ್ನೇ ಮಾಡ್ತಿದ್ದಾರೆ!
ಡೊನಾಲ್ಡ್ ಟ್ರಂಪ್ ಆರಂಭದಿಂದ ಕೂಡ ವಿವಾದಗಳನ್ನ ಮೈಮೇಲೆ ಎಳೆದುಕೊಂಡು, ಈ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಇಷ್ಟು ಸಾಲದು ಎಂಬಂತೆ ಚುನಾವಣೆಗೆ ಸ್ಪರ್ಧೆ ಮಾಡಿ ಕಮಲಾ ಹ್ಯಾರಿಸ್ ವಿರುದ್ಧ ಬಾಯಿಗೆ ಬಂದ ರೀತಿ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಹೀಗಾಗಿ ಇದೆಲ್ಲಾ ಡೊನಾಲ್ಡ್ ಟ್ರಂಪ್ ಗೆಲುವಿಗೆ ಮುಳುವಾಗುತ್ತಿದೆ ಎಂಬ ಮಾತು ಕೇಳಿಬಂದಿದೆ. ಈ ಆರೋಪಗಳಿಗೆ ಬಲ ನೀಡುವಂತೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಕ್ಷೆಗಳು ಕೂಡ, ಇದೇ ರೀತಿ ಉತ್ತರ ನೀಡುತ್ತಿವೆ. ಸಮೀಕ್ಷೆಗಳು ನುಡಿದ ಭವಿಷ್ಯದ ಪ್ರಕಾರ ಡೊನಾಲ್ಡ್ ಟ್ರಂಪ್ ಗೆಲ್ತಾರಾ? ಅಥವಾ ಅಮೆರಿಕದ ಚುನಾವಣೆಯಲ್ಲಿ ಸೋಲುತ್ತಾರಾ? ಮುಂದೆ ಓದಿ.

ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ...
ಅಮೆರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶವಾಗಿದ್ದು, ಜಾಗತಿಕ ಮಟ್ಟದಲ್ಲಿ ಇದೇ ದೇಶ ನಂಬರ್ 1 ಪಟ್ಟ ಕೂಡ ಪಡೆದುಕೊಂಡಿದೆ. ಇದು ಸಾಲದು ಎಂಬಂತೆ ಆರ್ಥಿಕತೆಯ ದೃಷ್ಟಿಯಲ್ಲಿ ಕೂಡ ಅಮೆರಿಕ ಮುಂದೆ ಇದೆ. ಹೀಗೆ ಎಲ್ಲಾ ಹಂತದಲ್ಲೂ ಅಮೆರಿಕ ತಾಕತ್ ತೋರಿಸುತ್ತಿದೆ. ಹೀಗಾಗಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಂದ್ರೆ ಇಡೀ ಜಗತ್ತಿನ ಗಮನ ಆ ಕಡೆ ಇದ್ದೇ ಇರುತ್ತದೆ. ಹೀಗಿದ್ದರೂ ಡೊನಾಲ್ಡ್ ಟ್ರಂಪ್ ಮಾತ್ರ ಜನಾಂಗಿಯ ವಿಚಾರಗಳು ಸೇರಿದಂತೆ ವಿವಾದ ಸೃಷ್ಟಿ ಮಾಡುವ ಮಾತು ಆಡುತ್ತಿದ್ದಾರೆ ಎಂಬ ಆರೋಪ ಪದೇ ಪದೇ ಕೇಳಿಬರುತ್ತಿದೆ.
ವಿವಾದಗಳ ಮೂಲಕವೇ ಸೋಲು?
ಡೊನಾಲ್ಡ್ ಟ್ರಂಪ್ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಹೆಚ್ಚಾದ ನಂತರ, ಅಮೆರಿಕದ ಚುನಾವಣಾ ಸಮೀಕ್ಷೆಗಳು ಕೂಡ ಬೇರೆ ರೀತಿಯ ಭವಿಷ್ಯ ನುಡಿಯುತ್ತಿವೆ. ಯಾಕಂದ್ರೆ ಈಗ ಅಮೆರಿಕದಲ್ಲಿ ಇರುವ ಪರಿಸ್ಥಿತಿ ನೋಡಿದರೆ, ಈ ಬಾರಿ ಡೊನಾಲ್ಡ್ ಟ್ರಂಪ್ ಹೀನಾಯ ಸೋಲು ಕಾಣುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಈ ಹಿಂದೆ ಜೋ ಬೈಡನ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಗಿದ್ದ ಸಮಯದಲ್ಲಿ, ಡೊನಾಲ್ಡ್ ಟ್ರಂಪ್ ಗೆಲ್ಲುವ ಕುದುರೆ ಆಗಿದ್ದರು.
ಅದೇ ಸಮಯದಲ್ಲಿ ಕಮಲಾ ಹ್ಯಾರಿಸ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಡೆಮಾಕ್ರಟಿಕ್ ಪಕ್ಷಕ್ಕೆ ಬಲ ತುಂಬಿದೆ. ಆದ್ರೆ ಇದು ಡೊನಾಲ್ಡ್ ಟ್ರಂಪ್ ಅವರಿಗೆ ಹಿನ್ನಡೆ ತಂದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಜೊತೆಗೆ ಟ್ರಂಪ್ ತಾವೇ ನೀಡುತ್ತಿರುವ ವಿವಾದ ಸೃಷ್ಟಿ ಮಾಡುವ ಹೇಳಿಕೆಗಳ ಪರಿಣಾಮ ಸೋಲಿಗೆ ಹತ್ತಿರ ಆಗ್ತಿದ್ದಾರೆ ಎಂದರೆ ತಪ್ಪಿಲ್ಲ ಬಿಡಿ.












Click it and Unblock the Notifications