ಈ ಬ್ರಿಟಿಷ್ ಮಹಿಳೆ ಆಸ್ತಿ ರಾಣಿ ಎಲಿಜಬೆತ್ ಗಿಂತ ಹತ್ತು ಪಟ್ಟು ಜಾಸ್ತಿ

ಆನ್ ಲೈನರ್ ಬುಕ್ ಮೇಕರ್ ಬೆಟ್ 365 ಗ್ರೂಪ್ ಲಿಮಿಟೆಡ್ ನ ಸ್ಥಾಪಕಿ ಹಾಗೂ ಸಿಇಒ ಡೆನಿಸ್ ಕೋಟ್ಸ್ ಎಂಬ ಬ್ರಿಟಿಷ್ ಮಹಿಳೆ ರಾಣಿ ಎರಡನೇ ಎಲಿಜಬೆತ್ ಗಿಂತ 10 ಪಟ್ಟು ಶ್ರೀಮಂತೆ ಎಂಬ ಅಂಶ ಬಯಲಾಗಿದೆ. 51 ವರ್ಷದ ಕೋಟ್ಸ್ 4.5 ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿ ಹೊಂದಿದ್ದಾರೆ.

ಅದಕ್ಕೆ ಕಾರಣ ಆನ್ ಲೈನರ್ ಬುಕ್ ಮೇಕರ್ ಬೆಟ್ 365 ಗ್ರೂಪ್ ಲಿಮಿಟೆಡ್ ನಲ್ಲಿ ಆಕೆ ಹೊಂದಿರುವ ಬಹುಪಾಲು ಷೇರು. ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದಲ್ಲಿ ವಿಶ್ವದ 500 ಮಂದಿಯ ಪಟ್ಟಿಯಲ್ಲಿ ಮೊದಲ ಬಾರಿಗೆ ಆಕೆ ಸ್ಥಾನ ಪಡೆದಿದ್ದಾರೆ. 17 ಮಂದಿ ಯುನೈಟೆಡ್ ಕಿಂಗ್ ಡಮ್ ಮೂಲದ ಬಿಲಿಯನೇರ್ ಗಳು ಈ ಪಟ್ಟಿಯಲ್ಲಿದ್ದು, ಅದರಲ್ಲಿರುವ ಏಕೈಕ ಮಹಿಳೆ ಕೋಟ್ಸ್.

ಬೆಟ್ 365 ಕಂಪನಿ ಆರಂಭವಾಗಿದ್ದು ಹದಿನೆಂಟು ವರ್ಷಗಳ ಹಿಂದೆ. ಕ್ರೀಡೆಗಳ ಬೆಟ್ಟಿಂಗ್ ದಂಧೆಯನ್ನು ಇಂಟರ್ ನೆಟ್ ಪ್ರವರ್ಧಮಾನಕ್ಕೆ ಬರುವ ಕಾಲದಲ್ಲಿ ಚೆನ್ನಾಗಿ ಬಳಸಿಕೊಳ್ಳಲಾಗಿದೆ. ಕಂಪನಿಯು ಉತ್ತಮ ಫಲಿತಾಂಶ ಪ್ರಕಟಿಸಿದ್ದು, ಬ್ರಿಟನ್ ನಲ್ಲಿ ಬೆಟ್ಟಿಂಗ್ ದಂಧೆ ಮೇಲೆ ಕೆಲ ನಿರ್ಬಂಧ ಹೇರಿದ ನಂತರವೂ ಅದ್ಭುತ ಫಲಿತಾಂಶ ಬಂದಿದೆ.

This British woman Coates is more than 10 times richer than the Queen

ಕೋಟ್ಸ್ ಶ್ರೀಮಂತೆ ಅಷ್ಟೇ ಅಲ್ಲ, ಅತ್ಯಂತ ಹೆಚ್ಚು ವೇತನ ಕೂಡ ಪಡೆಯುತ್ತಾರೆ. ಅವರು ಕಳೆದ ವರ್ಷ ಪಡೆದ ವೇತನ $ 282 ಮಿಲಿಯನ್. ಜತೆಗೆ ಡಿವಿಡೆಂಡ್ಸ್ ಅಂತಲೇ ನಲವತ್ತು ಮಿಲಿಯನ್ ಪೌಂಡ್ಸ್ ಪಡೆದಿದ್ದಾರೆ. ಕೋಟ್ಸ್ ತಮ್ಮ ಇಪ್ಪತ್ತೆರಡನೇ ವಯಸ್ಸಿಗೇ ಮ್ಯಾನೇಜಿಂಗ್ ಡೈರೆಕ್ಟರ್ ಆದವರು. ಆಕೆ ಸಾಧನೆಗಾಗಿ ಸ್ವತಃ ರಾಣಿ ಎಲಿಜಬೆತ್ ಸನ್ಮಾನ ಮಾಡಿದ್ದಾರೆ. ಇನ್ನು ತೊಂಬತ್ತೆರಡು ವರ್ಷದ ರಾಣಿ ಮೌಲ್ಯ $ 420 ಮಿಲಿಯನ್ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+