ನೂಪುರ್ ಶರ್ಮಾ ಬೆಂಬಲಕ್ಕೆ ನಿಂತ ನೆದರ್‌ಲ್ಯಾಂಡ್ ಸಂಸದ
ನವದೆಹಲಿ, ಜೂ. 8: ಪ್ರವಾದಿ ಮೊಹಮ್ಮದ್ ಪೈಗಂಬರ್ ವಿವಾದದಿಂದ ಅಮಾನತ್ತಾಗಿರುವ ನೂಪುರ್ ಶರ್ಮಾ ಬೆಂಬಲಕ್ಕೆ ನೆದರ್‌ಲ್ಯಾಂಡ್ ಸಂಸದರೊಬ್ಬರು ನಿಂತಿದ್ದಾರೆ. ಅಲ್ಲದೆ ನೂಪುರ್ ಶರ್ಮಾರನ್ನು ಬೆಂಬಲಿಸಲು ಭಾರತಕ್ಕೆ ಒತ್ತಾಯಿಸಿದ್ದಾರೆ.
Recommended Video
ನೆದರ್‌ಲ್ಯಾಂಡ್‌ನ ರಾಜಕಾರಣಿಯಾಗಿರುವ ಗೀರ್ಟ್ ವೈಲ್ಡರ್ಸ್ ವಿವಾದ ಮಧ್ಯೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದಲ್ಲದೆ ಭಯೋತ್ಪಾದಕ ಸಂಘಟನೆ ಅಲ್‌ಕೈದಾ ವಿರುದ್ಧ ಕಿಡಿಕಾರಿದ್ದು, ಅದರ ಬೆದರಿಕೆಗಳಿಗೆ ಬಗ್ಗಬಾರದು ಎಂದು ಭಾರತಕ್ಕೆ ಕರೆ ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ವಕ್ತಾರೆ ಆಗಿದ್ದ ನೂಪುರ್ ಶರ್ಮಾ ವಿವಾದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಗೀರ್ಟ್ ವೈಲ್ಡರ್ಸ್, "ನೂಪುರ್ ಶರ್ಮಾ ಅವರು ಸತ್ಯವನ್ನೇ ಮಾತನಾಡಿದ್ದಾರೆ. ಅವರಿಗೆ ಭಯೋತ್ಪಾದಕ ಸಂಘಟನೆ ಅಲ್‌ಖೈದಾದಿಂದ ಬೆದರಿಕೆ ಕರೆಗಳು ಬಂದಿದೆ. ಈ ಅಲ್‌ಖೈದ ಸಂಘಟನೆ ಯಾವಾಗಲೂ ಎಂದಿಗೂ ಭಯೋತ್ಪಾದನೆ, ಅನಾಗರಿಕತೆಯನ್ನು ಹೇಳುತ್ತಾರೆ. ಆದ್ದರಿಂದ ಶರ್ಮಾ ಅವರನ್ನು ಬೆಂಬಲಿಸಿ" ಎಂದು ಅವರು ಹೇಳಿದ್ದಾರೆ.

ಗೀರ್ಟ್ ವೈಲ್ಡರ್ಸ್ ಅವರು ಟ್ವಿಟ್ಟರ್‌ನಲ್ಲಿ "ಅಲ್ ಖೈದಾದಂತಹ ಇಸ್ಲಾಮಿಕ್ ಭಯೋತ್ಪಾದಕರಿಗೆ ಎಂದಿಗೂ ಶರಣಾಗಬೇಡಿ. ಅವರು ಅನಾಗರಿಕತೆಯನ್ನೇ ಮೆರೆಯುತ್ತಾರೆ. ಇಡೀ ಭಾರತ ದೇಶವು ನೂಪುರ್ ಶರ್ಮಾ ಅವರನ್ನು ಬೆಂಬಲಿಸಬೇಕು. ಅಲ್ ಖೈದಾ ಮತ್ತು ತಾಲಿಬಾನ್ ನನ್ನನ್ನು ವರ್ಷಗಳ ಹಿಂದೆ ತಮ್ಮ ಹಂತಕರ ಪಟ್ಟಿಯಲ್ಲಿ ಸೇರಿಸಿದ್ದರು. ಆದರೆ ನಾನು ಎಂದಿಗೂ ತಲೆಬಾಗಿಲ್ಲ" ಎಂದಿದ್ದಾರೆ.
ಸತ್ಯವನ್ನು ಮಾತನಾಡಿದ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕಾಗಿ ನನ್ನನ್ನು ಕೊಲ್ಲಲು ಬಯಸುವ ಮುಸ್ಲಿಮರಿಂದ ನನಗೆ ಈಗ ಅನೇಕ ಕೊಲೆ ಬೆದರಿಕೆಗಳು ಬಂದಿವೆ. ಆದರೆ ಶರ್ಮಾ ಅವರು ಮೊಹಮ್ಮದ್ ಪೈಗಂಬರ್ ಬಗ್ಗೆ ಸತ್ಯವನ್ನೇ ಮಾತನಾಡಿದ್ದಾರೆ ಎಂದು ವೈಲ್ಡರ್ಸ್ ತಿಳಿಸಿದ್ದಾರೆ.

"ಭಯೋತ್ಪಾದಕರಿಗೆ ನಾನು 'ನೀವು ನರಕಕ್ಕೆ ಹೋಗಿ ನಾನು ಯಾವಾಗಲೂ ಸತ್ಯವನ್ನೇ ಮಾತನಾಡುತ್ತೇನೆ. ನಿಮಗೆ ಯಾವುದೇ ನೈತಿಕತೆ ಇಲ್ಲ. ನಾವು ಸ್ವಾತಂತ್ರಕ್ಕಾಗಿ ನಿಲ್ಲುತ್ತೇವೆ' ಎಂಬ ಸಂದೇಶ ನೀಡುತ್ತೇನೆ" ಎಂದು ಹೇಳಿದ್ದಾರೆ.
I receive many death threats now from Muslims who want to kill me for supporting #NupurSharma who spoke the truth and nothing but the truth about Muhammad and Aisha.
— Geert Wilders (@geertwilderspvv) June 8, 2022
My message to them is: go to hell. You have no morals. We stand for the truth. We stand for freedom.
ಕೆಲವು ದಿನಗಳ ಹಿಂದೆ ಭಾರತೀಯ ಜನತಾ ಪಕ್ಷವು (ಬಿಜೆಪಿ) ಪ್ರವಾದಿ ಮುಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಪಕ್ಷದ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಅಮಾನತುಗೊಳಿಸಿತ್ತು. ಇದು ಅನೇಕ ಇಸ್ಲಾಮಿಕ್ ಮತ್ತು ಗಲ್ಫ್ ರಾಷ್ಟ್ರಗಳಿಂದ ಟೀಕೆಗೆ ಗುರಿಯಾಗಿತ್ತು.
ನಂತರ ನುಪೂರ್ ಶರ್ಮಾ ಪ್ರವಾದಿ ಬಗ್ಗೆಗಿನ ತಮ್ಮ ಹೇಳಿಕೆಗಳಿಗೆ ಕ್ಷಮೆಯಾಚಿಸಿದ್ದರು. ಬಳಿಕ ನನಗೆ ಹಾಗೂ ಕುಟುಂಬಕ್ಕೆ ಕೊಲೆ ಹಾಗೂ ಅತ್ಯಾಚಾರದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿಯ ಅವರ ನಿವಾಸ ಹಾಗೂ ಅವರ ಕುಟುಂಬಕ್ಕೆ ಪೊಲೀಸರು ಭದ್ರತೆಯನ್ನು ಒದಗಿಸಿದ್ದರು.
(ಒನ್ಇಂಡಿಯಾ ಸುದ್ದಿ)
-
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications