ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರೇಟ್ ಎಸ್ಕೇಪ್ : ಡ್ರಗ್ ಸ್ಮಗ್ಲರ್ ಗುಜ್ಮನ್ ಪರಾರಿ

By Mahesh
|
Google Oneindia Kannada News

ಮೆಕ್ಸಿಕೋ, ಜುಲೈ 14: ಜೈಲಿನಿಂದ ಎಸ್ಕೇಪ್ ಆಗುವುದು ಹೇಗೆ ಎಂಬುದರ ಬಗ್ಗೆ ಭಾರತೀಯ ಸಿನಿಮಾಗಳು ಸೇರಿದಂತೆ ಇಂಗ್ಲೀಷ್ ನಲ್ಲಿ ಸರಣಿ ಎಪಿಸೋಡುಗಳೇ ಬಂದಿವೆ. ಎಸ್ಕೇಪ್ ಸ್ಟೋರಿ ಇಷ್ಟಪಡುವವರಿಗೆ ಇಲ್ಲೊಂದು ರೋಚಕ ಕಥೆ ಇದೆ. ಕುಖ್ಯಾತ ಡ್ರಗ್ ಸ್ಮಗ್ಲರ್ 'ಎಲ್ ಚಾಪೋ' ಅಲಿಯಾಸ್ ಜಾವೋಕ್ವಿ ಗುಜ್ಮನ್ ಜೈಲಿನಿಂದ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಮುಂಚೆ ಕೂಡಾ 'ಪ್ಯಾಪಿಲಾನ್' ಮಾದರಿ ಜೈಲಿನಿಂದ ಎಸ್ಕೇಪ್ ಆಗಿದ್ದ ಗುಜ್ಮನ್ ಈಗಲೂ ಕೂಡಾ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುಜ್ಮನ್ ತೊಡಿದ್ದ ಸುರಂಗದ ಜಾಡು ಹಿಡಿದು ಹೊರಟ ಪೊಲೀಸರು ನಿರ್ಜನ ಪ್ರದೇಶವೊಂದರ ಪಾಳು ಬಿದ್ದ ನಿವೇಶನದ ತನಕ ಬಂದು ನಿಂತಿದ್ದಾರೆ. ಸುಮಾರು 1.5 ಕಿ.ಮೀ ಉದ್ದದ ಸುರಂಗ ಕಂಡು ದಂಗಾಗಿದ್ದಾರೆ.

ಸುರಂಗದಲ್ಲಿ ಎಸಿ: ಗುಜ್ಮನ್ ಪರಾರಿಯಾಗಲು ಆತನಿಗೆ ಇತರೆ ಕೈದಿಗಳು ನೆರವಾಗಿದ್ದಾರೆ. ನೆಲದಿಂದ 10 ಮೀಟರ್ ಆಳಕ್ಕೆ ಸುಮಾರು 1.5 ಕಿ.ಮೀ ದೂರಕ್ಕೆ ಸುರಂಗ ಕೊರೆದಿದ್ದಾರೆ. ಸುರಂಗದಲ್ಲಿ ವಿದ್ಯುತ್ ಹಾಗೂ ಏರ್​ಕಂಡೀಶನಿಂಗ್ ಕೂಡಾ ಒದಗಿಸಲಾಗಿದೆ. ಜೈಲಿನ ಬಾತ್ರೂಮಿನಿಂದ ಹೊರಟ ಸುರಂಗ ಆತನ ಮನೆಯೊಳಗೆ ದಾರಿ ತೋರಿಸುತ್ತದೆ.

ಕಳೆದ ಶನಿವಾರ 8.52ಕ್ಕೆ ಸ್ನಾನಕ್ಕೆ ಹೋದ ಗುಜ್ಮನ್ ಕಾವಲು ಕಾಯಲು ಭದ್ರತಾ ಪಡೆ ನೇಮಿಸಲಾಗಿತ್ತು. ಅಲ್ಟಿಪ್ಲಾನೊ ಜೈಲಿನಲ್ಲಿ 24 ತಾಸು ಸಿಸಿಟಿವಿ ನಿಗಾ ವಹಿಸಲಾಗಿತ್ತು. ಆದರೆ, ಎಲ್ಲಾ ಕಣ್ಣಿಗೆ ಮಣ್ಣೆರೆಚಿ ಪರಾರಿಯಾಗಿದ್ದಾನೆ.

ಈ ಹಿಂದೆ ಕೂಡ ಎಸ್ಕೇಪ್ ಆಗಿದ್ದ

ಈ ಹಿಂದೆ ಕೂಡ ಎಸ್ಕೇಪ್ ಆಗಿದ್ದ

ಈ ಹಿಂದೆ 1993ರಲ್ಲಿ ಗ್ವಾಟೆಮಾಲಾದಲ್ಲಿ ಬಂಧಿಯಾಗಿದ್ದ ಗುಜ್ಮನ್ 2001ರಲ್ಲೂ ಇದೇ ರೀತಿ ಎಸ್ಕೇಪ್ ಆಗಿದ್ದ, ಆಗ ಜೈಲಿನ ಸಿಬ್ಬಂದಿಗೆ ಲಂಚ ನೀಡಿದ್ದ. ಬಟ್ಟೆ ಸಾಗಿಸುವ ಲಾಂಡ್ರಿ ವಾಹನದಲ್ಲಿ ತೂರಿಕೊಂಡು ಪರಾರಿಯಾಗಿದ್ದ. ಸಿನೊಲಾ ಕಾರ್ಟೆಲ್ ಎಂಬ ಡ್ರಗ್ ದಂಧೆ ಮಾಫಿಯಾದ ಕಿಂಗ್ ಆಗಿರುವ ಗುಜ್ಮನ್ ಸುಮಾರು 100 ಕೋಟಿ ಡಾಲರ್ ಗೂ ಅಧಿಕ ಆಸ್ತಿ ಹೊಂದಿದ್ದಾನೆ.

ಡ್ರಗ್ ದಂಧೆ ಮಾಫಿಯಾದ ಮುಖ್ಯಸ್ಥ

ಸಿನೊಲಾ ಕಾರ್ಟೆಲ್ ಎಂಬ ಡ್ರಗ್ ದಂಧೆ ಮಾಫಿಯಾದ ಮುಖ್ಯಸ್ಥನಾಗಿರುವ ಗುಜ್ಮನ್ ಕೊಕೈನ್, ಮೆಥಾಂಫೆಟಮೈನ್ಸ್, ಮಾರಿಜುವಾ ಮಾರಿ ಸುಮಾರು 100 ಕೋಟಿ ಡಾಲರ್​ನಷ್ಟು ಆಸ್ತಿ ಹೊಂದಿದ್ದಾನೆ.

ಅಧ್ಯಕ್ಷ ಎರಿಕ್ ಪೇನಾ ನೇಟೊಗೆ ಅವರಿಗೆ ಮುಖಭಂಗ

ಅಧ್ಯಕ್ಷ ಎರಿಕ್ ಪೇನಾ ನೇಟೊಗೆ ಅವರಿಗೆ ಮುಖಭಂಗ

ಗುಜ್ಮನ್ ಪರಾರಿಗೆ ಜೈಲಿನ ಅಧಿಕಾರಿಗಳೂ ನೆರವು ನೀಡಿರುವ ಸಾಧ್ಯತೆಯಿದೆ. ತೀವ್ರ ವಿಚಾರಣೆ ಮುಂದುವರೆದಿದೆ ಎಂದು ಪೊಲೀಸ್ ಆಯುಕ್ತ ಮಾಂಟೆ ಅಲೆಕ್ಸಾಂಡೋ ರುಬಿಡೋ ಹೇಳಿದ್ದಾರೆ. ಗುಜ್ಮನ್ ಪರಾರಿ ಪ್ರಕರಣದಿಂದ ಅಧ್ಯಕ್ಷ ಎರಿಕ್ ಪೇನಾ ನೇಟೊಗೆ ಅವರಿಗೆ ಮುಖಭಂಗವಾಗಿದೆ.

ಸುರಂಗದಲ್ಲಿ ವಿದ್ಯುತ್ ಹಾಗೂ ಏರ್​ಕಂಡೀಷನಿಂಗ್

ಸುರಂಗದಲ್ಲಿ ವಿದ್ಯುತ್ ಹಾಗೂ ಏರ್​ಕಂಡೀಷನಿಂಗ್ ಕೂಡಾ ಒದಗಿಸಲಾಗಿದೆ. ಜೈಲಿನ ಬಾತ್ರೂಮಿನಿಂದ ಹೊರಟ ಸುರಂಗ ಆತನ ಮನೆಯೊಳಗೆ ದಾರಿ ತೋರಿಸುತ್ತದೆ.

English summary
In a major embarassment for President of Mexico-Enrique Pena Nieto, a most-wanted and notorious drug lord Joaquin "El Chapo" Guzman escaped from the prison for the second time through a tunnel just under his cell. National Security Commissioner Monte Alejandro Rubido said that the 1.5 kilometer tunnel opened in an abandoned property near the local town.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X