ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

''ಸಾಕ್ಷಿ ಇದೆ'' ಎಂದ ಟ್ರಂಪ್‌ಗೆ ತಿರುಗೇಟು ನೀಡಿದ ಚೀನಾ

|
Google Oneindia Kannada News

ಬೀಜಿಂಗ್‌, ಮೇ 1: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಚೀನಾ ಅಸಮಾಧಾನ ಹೊರಹಾಕಿದೆ. ಅಮೇರಿಕದ ಕೊರೊನಾ ಪ್ರಕರಣಗಳ ಬಗ್ಗೆ ಗಮನ ಹರಿಸುವಂತೆ ಡೊನಾಲ್ಡ್ ಟ್ರಂಪ್‌ಗೆ ಹೇಳಿದೆ.

Recommended Video

ದಾವಣಗೆರೆಯಲ್ಲಿ ಒಂದೇ ದಿನಕ್ಕೆ‌ 6 ಮಂದಿಗೆ ಕೊರೊನಾ ಪಾಸಿಟೀವ್ | Davangere | Oneindia kannada

ಕೊರೊನಾ ವೈರಸ್ ಸೋಂಕು ಹರಡಲು ಚೀನಾ ಕಾರಣ ಎಂದು ಅಮೆರಿಕ ಹೇಳುತ್ತಲೇ ಬಂದಿದೆ. ಇಂದು ಸಹ ಅಧ್ಯಕ್ಷ ಡೊನಲ್ಡ್ ಟ್ರಂಪ್ ಈ ಬಗ್ಗೆ ಮಾತನಾಡಿದ್ದಾರೆ. ಕೊರೊನಾ ವೈರಸ್‌ ವುಹಾನ್ ಲ್ಯಾಬ್‌ನಲ್ಲಿ ಹುಟ್ಟಿದೆ ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ ಎಂದಿದ್ದಾರೆ. ಇದನ್ನು ಅಮೆರಿಕದ ಗುಪ್ತಚರ ಅಧಿಕಾರಿಗಳು ದೃಢಪಡಿಸಿದ್ದಾರಂತೆ.

ಶುಭ ಸುದ್ದಿ ನೀಡಿದ ಅಧ್ಯಯನ: ಮೇ 21 ಕ್ಕೆ ಭಾರತದಲ್ಲಿ ಕೊರೊನಾ ಮಾಯ!ಶುಭ ಸುದ್ದಿ ನೀಡಿದ ಅಧ್ಯಯನ: ಮೇ 21 ಕ್ಕೆ ಭಾರತದಲ್ಲಿ ಕೊರೊನಾ ಮಾಯ!

ಟ್ರಂಪ್ ಮಾಡಿದ ಈ ಆರೋಪವನ್ನು ಚೀನಾ ಅಧಿಕಾರಿಗಳು ನಿರಾಕರಿಸಿದ್ದಾರೆ. "ಸಾಂಕ್ರಾಮಿಕ ರೋಗವನ್ನು ಸರಿಯಾಗಿ ನಿಭಾಯಿಸಲು ಆಗದೆ, ತಮ್ಮ ತಪ್ಪನ್ನು ಇತರರಿಗೆ ವರ್ಗಾಯಿಸಲು ಟ್ರಂಪ್ ಪ್ರಯತ್ನಿಸಿದ್ದಾರೆ" ಎಂದು ಟೀಕಿಸಿದ್ದಾರೆ.

ಶತ್ರು ವೈರಸ್‌, ಚೀನಾ ಅಲ್ಲ

ಶತ್ರು ವೈರಸ್‌, ಚೀನಾ ಅಲ್ಲ

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಅಮೆರಿಕದ ಆರೋಪಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ''ಅಮೆರಿಕದ ತನ್ನ ಶತ್ರು ವೈರಸ್‌, ಚೀನಾ ಅಲ್ಲ'' ಎನ್ನುವದನ್ನು ತಿಳಿಯಬೇಕು ಎಂದಿದ್ದಾರೆ. ''ಸಾಂಕ್ರಾಮಿಕ ರೋಗವನ್ನು ಸರಿಯಾಗಿ ನಿಭಾಯಿಸಲು ಆಗದೆ, ತಮ್ಮ ತಪ್ಪನ್ನು ಇತರರಿಗೆ ವರ್ಗಾಯಿಸಲು ಟ್ರಂಪ್ ಪ್ರಯತ್ನಿಸಿದ್ದಾರೆ" ಎಂದು ಹೇಳಿದ್ದಾರೆ.

ಯು ಎಸ್ ಚುನಾವಣೆಯಲ್ಲಿ ಆಸಕ್ತಿ ಇಲ್ಲ

ಯು ಎಸ್ ಚುನಾವಣೆಯಲ್ಲಿ ಆಸಕ್ತಿ ಇಲ್ಲ

ತಮ್ಮ ಮರು ಚುನಾವಣೆ ಪ್ರಯತ್ನಗಳಿಗೆ ಅಡ್ಡಿಯುಂಟು ಮಾಡಲು ಚೀನಾ ಸಾಂಕ್ರಾಮಿಕ ಬಳಸಿದೆ ಎನ್ನುವ ಟ್ರಂಪ್ ಹೇಳಿಕೆ ಚೀನಾ ತಿರುಗೇಟು ನೀಡಿದೆ. "ಯು ಎಸ್ ಅಧ್ಯಕ್ಷೀಯ ಚುನಾವಣೆಯು ಆಂತರಿಕ ವ್ಯವಹಾರವಾಗಿದೆ. ಅದರಲ್ಲಿ ಹಸ್ತಕ್ಷೇಪ ಮಾಡಲು ನಮಗೆ ಯಾವುದೇ ಆಸಕ್ತಿ ಇಲ್ಲ. ಯು ಎಸ್ ಜನರು ಚೀನಾವನ್ನು ಚುನಾವಣಾ ರಾಜಕೀಯಕ್ಕೆ ಎಳೆಯುವುದಿಲ್ಲ ಎಂದು ನಾವು ಭಾವಿಸುತ್ತೇವೆ." ಎಂದಿದ್ದಾರೆ.

ಕಳೆದ 15 ದಿನಗಳಲ್ಲಿ ದೇಶದ ರೆಡ್‌ಜೋನ್‌ಗಳ ಸಂಖ್ಯೆ ಇಳಿಕೆಕಳೆದ 15 ದಿನಗಳಲ್ಲಿ ದೇಶದ ರೆಡ್‌ಜೋನ್‌ಗಳ ಸಂಖ್ಯೆ ಇಳಿಕೆ

ವೈರಸ್‌ ಲ್ಯಾಬ್‌ನಲ್ಲಿ ಹುಟ್ಟಿದ ಸಾಕ್ಷಿ ಸಿಕ್ಕಿದೆ

ವೈರಸ್‌ ಲ್ಯಾಬ್‌ನಲ್ಲಿ ಹುಟ್ಟಿದ ಸಾಕ್ಷಿ ಸಿಕ್ಕಿದೆ

ಕೊರೊನಾ ವೈರಸ್‌ ವುಹಾನ್ ಲ್ಯಾಬ್‌ನಲ್ಲಿ ಹುಟ್ಟಿದೆ ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ ಎಂದು ಟ್ರಂಪ್ ಹೇಳಿದ್ದಾರೆ. ಇದನ್ನು ಅಮೆರಿಕದ ಗುಪ್ತಚರ ಅಧಿಕಾರಿಗಳು ಸಹ ದೃಢಪಡಿಸಿದ್ದಾರಂತೆ. ಕೊರೊನಾ ವೈರಸ್‌ ಸೋಂಕನ್ನು ಸರಿಯಾಗಿ ನಿಭಾಯಿಸದ ಕಾರಣ ಚೀನಾಗೆ ಶಿಕ್ಷೆ ನೀಡಬೇಕೆಂದು ಅಮೆರಿಕ ಮುಂದಾಗಿದೆ. ಟ್ರಂಪ್‌ ಸಹ ದೊಡ್ಡ ಮಟ್ಟದ ದಂಡವನ್ನು ಚೀನಾ ನೀಡಬೇಕಾಗುತ್ತದೆ ಎಂದಿದ್ದರು.

ಕೊರೊನಾದಿಂದ ನಲುಗಿದ ಅಮೆರಿಕ

ಕೊರೊನಾದಿಂದ ನಲುಗಿದ ಅಮೆರಿಕ

ಇಡೀ ವಿಶ್ವದಲ್ಲಿ ಸಾಕಷ್ಟು ದೇಶಗಳು ಕೊರೊನಾದಿಂದ ಸಂಕಷ್ಟ ಎದುರಿಸುತ್ತಿವೆ. ಅದರಲ್ಲಿಯೂ ಅಮೆರಿಕ ಕೊರೊನಾ ಹೊಡೆತಕ್ಕೆ ನಲುಗಿ ಹೋಗಿದೆ. ಅಮೆರಿಕಾದಲ್ಲಿ ಈವರೆಗೆ 10,95,651 ಜನರಿಗೆ ಕೊರೊನಾ ವೈರಸ್‌ ಸೊಂಕು ಕಾಣಿಸಿಕೊಂಡಿದೆ. ಅದರಲ್ಲಿ 1,32,544 ಮಂದಿ ಕೊರೊನಾವನ್ನು ಗೆದ್ದು ಗುಣಮುಖರಾಗಿದ್ದಾರೆ. 63,746 ಜನರು ವೈರಸ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಅಮೆರಿಕ ಅತಿ ಹೆಚ್ಚು ಸೋಂಕಿತರನ್ನು ಹೊಂದಿದ್ದಾರೆ.

ಚೀನಾದಲ್ಲಿ ಎಷ್ಟಿದೆ?

ಚೀನಾದಲ್ಲಿ ಎಷ್ಟಿದೆ?

ಕೊರೊನಾ ವೈರಸ್‌ ಮೊದಲು ಕಾಣಿಸಿಕೊಂಡಿದ್ದು ಚೀನಾದಲ್ಲಿ. ಆದರೆ, ಚೀನಾಗಿಂತ ಹೆಚ್ಚು ಅಮೆರಿಕದಲ್ಲಿ ಕೊರೊನಾ ಪ್ರಕರಣಗಳು ಕಂಡು ಬಂದಿವೆ. ಚೀನಾದಲ್ಲಿ 84,373 ಮಂದಿಗೆ ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿತ್ತು. ಅದರಲ್ಲಿ 77,642 ಜನರು ಗುಣಮುಖರಾಗಿದ್ದಾರೆ. 4,643 ಜನರು ಕೊರೊನಾಗೆ ಬಲಿಯಾಗಿದ್ದಾರೆ.

English summary
Trump said that he has seen evidence that the coronavirus originated from a lab in Wuhan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X