ಥಾಯ್ಲೆಂಡಿನ ಹುಲಿ ದೇಗುಲದಲ್ಲಿ 40 ಹುಲಿ ಮರಿಗಳ ಮೃತದೇಹ ಪತ್ತೆ
ಬ್ಯಾಂಕಾಕ್, ಜೂನ್ 01: ಕಾಂಚನ್ಬುರಿಯ ವಾತ್ ಪಾ ಲುಂಗ್ ತ ಬುವಾ ಹುಲಿ ದೇಗುಲದ ಫ್ರೀಜರ್ನಲ್ಲಿ ಬುಧವಾರ(ಜೂನ್ 01) 40 ಹುಲಿ ಮರಿಗಳ ಮೃತದೇಹ ಪತ್ತೆಯಾಗಿದ್ದು, ವಿವಾದಾತ್ಮಕ ದೇಗುಲ ಮುಚ್ಚುವ ಸಾಧ್ಯತೆ ಕಂಡು ಬಂದಿದೆ.
ಹುಲಿಗಳನ್ನು ಅಕ್ರಮ ಸಾಗಾಟ, ಅನೈತಿಕ ವ್ಯವಹಾರದ ಆರೋಪಗಳು ಈ ಹಿಂದೆ ಕೂಡಾ ಕೇಳಿ ಬಂದಿತ್ತು. ಆದರೆ, ಯಾವುದೇ ಬಲವಾದ ಸಾಕ್ಷಿ ಸಿಕ್ಕಿರಲಿಲ್ಲ. ಈಗ ದೇಗುಲದ ವಿರುದ್ಧ ಥಾಯ್ಲೆಂಡ್ ಸರ್ಕಾರ ಕ್ರಮ ತೆಗೆದುಕೊಂಡಿದೆ. [ಅರಣ್ಯದಲ್ಲಿ ಹಸಿವು ತಾಳಲಾರದೆ ಹುಲಿ ಸಾವು]

ಸದ್ಯಕ್ಕೆ 45 ಹುಲಿಗಳನ್ನು ರಕ್ಷಿಸಲಾಗಿದ್ದು, ದೇಗುಲಕ್ಕೆ ಬೀಗ ಮುದ್ರ ಹಾಕಲಾಗಿದೆ. ಬುಧವಾರ ಮತ್ತಷ್ಟು ಶೋಧ ಕಾರ್ಯ ನಡೆಸಿದಾಗ ದೇಗುಲದಲ್ಲಿದ್ದ ಫ್ರೀಜರ್ನಲ್ಲಿ 40 ಹುಲಿ ಮರಿಗಳ ಮೃತದೇಹ ಪತ್ತೆಯಾಗಿದೆ. 137 ಬೆಂಗಾಲ್ ಹುಲಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ನವಜಾತ ಹುಲಿ ಮರಿಗಳ ಮೃತದೇಹವನ್ನು ಸಂರಕ್ಷಿಸಿ ಇಡಲಾಗಿದೆ. ಇವುಗಳನ್ನು ಎಷ್ಟು ದಿನದಿಂದ ಸಂರಕ್ಷಿಸಿ ಇಡಲಾಗಿದೆ ಎಂಬುದ ಮಾಹಿತಿ ಇಲ್ಲ.
ಅನುಮತಿಯಿಲ್ಲದೆ ಹುಲಿ ಮರಿಗಳ ಮೃತದೇಹವನ್ನು ಸಂಗ್ರಹಸಿ, ಅಕ್ರಮ ಮಾರಾಟದ ಶಂಕೆ ವ್ಯಕ್ತವಾಗಿದ್ದು ತನಿಖೆ ನಡೆಸಲಾಗುತ್ತಿದೆ, ಆದರೆ, ಮೃತ ಹುಲಿ ಮರಿಗಳ ಅಂತ್ಯಕ್ರಿಯೆಯನ್ನು ನಡೆಸಲು ಸಾಧ್ಯವಾಗದ ಕಾರಣ ಮೃತಪಟ್ಟ ಹುಲಿ ಮರಿಗಳನ್ನು ಸಂರಕ್ಷಿಸಿ ಫ್ರೀಜರ್ಗಳಲ್ಲಿ ಸಂಗ್ರಹಿಸಿಡಲಾಗಿದೆ ಎಂದು ದೇಗುಲದ ಆಡಳಿತ ಮಂಡಳಿ ಹೇಳಿದೆ.












Click it and Unblock the Notifications