ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಥಾಯ್ಲೆಂಡ್‌ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ತೀವ್ರ: ಟಿವಿ ಚಾನೆಲ್ ಸ್ಥಗಿತಕ್ಕೆ ಆದೇಶ

|
Google Oneindia Kannada News

ಬ್ಯಾಂಕಾಕ್, ಅಕ್ಟೋಬರ್ 21: ಥಾಯ್ಲೆಂಡ್‌ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡಿದ್ದು, ಪ್ರತಿಭಟನೆಯ ಸುದ್ದಿಗಳು ಪ್ರಸಾರವಾಗದಂತೆ ತಡೆಯಲು ಅಲ್ಲಿನ ಸರ್ಕಾರ ತನ್ನ ಪ್ರಮುಖ ವಿರೋಧಿ ಆನ್‌ಲೈನ್ ಟಿವಿ ಚಾನೆಲ್‌ ಅನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದೆ.

ಸರ್ಕಾರ ಹಾಗೂ ಆಡಳಿತದ ವಿರುದ್ಧ ತೀವ್ರಗೊಳ್ಳುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ವಿವಿಧ ರೀತಿಯ ಬಲ ಪ್ರಯೋಗಗಳನ್ನು ಮಾಡಲಾಗುತ್ತಿದೆ. ನಾಲ್ಕು ಜನರಿಗಿಂತ ಹೆಚ್ಚು ಮಂದಿ ಗುಂಪುಗೂಡುವುದನ್ನು ನಿಷೇಧಿಸುವುದು ಸೇರಿದಂತೆ ಅನೇಕ ತುರ್ತು ಕ್ರಮಗಳನ್ನು ಹೇರಲಾಗಿದೆ.

20 ಸಖಿಯರೊಂದಿಗೆ ಥಾಯ್ಲೆಂಡ್ ಮಹಾರಾಜನ ಕ್ವಾರಂಟೈನ್!20 ಸಖಿಯರೊಂದಿಗೆ ಥಾಯ್ಲೆಂಡ್ ಮಹಾರಾಜನ ಕ್ವಾರಂಟೈನ್!

ಆದರೆ, ನಿರ್ಬಂಧಗಳ ನಡುವೆಯೂ ಪ್ರತಿಭಟನಾಕಾರರು ಗುಂಪುಗೂಡುವುದನ್ನು ಮುಂದುವರಿಸಿದ್ದು, ಪ್ರತಿಭಟನೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಹತ್ತಾರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಂಚೂಣಿ ಪ್ರತಿಭಟನಾಕಾರರಾದ ಪ್ಯಾರಿಟ್ ಪೆಂಗ್ವಿನ್ ಚಿವಾರಕ್ ಮತ್ತು ಪನುಸಯಾ ರುಂಗ್ ಅವರನ್ನು ಹಿಂದಿನ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತಿದ್ದಂತೆಯೇ ಹೊಸ ಪ್ರಕರಣ ಹೊರಿಸಿ ಬಂಧಿಸಲಾಗಿದೆ.

 Thailand Protest Against PM Prayut Chano Cha: Court Orders To Ban TV Channel

ಮುಂದಿನ ವಾರ ಸಂಸತ್‌ನ ತುರ್ತು ಅಧಿವೇಶನ ಕರೆಯಲು ಪ್ರಧಾನಿ ಪ್ರಯುತ್ ಚಾನ್ ಸಂಪುಟ ಒಪ್ಪಿಗೆ ನೀಡಿದೆ. ಆದರೆ ಪ್ರತಿಭಟನಾಕಾರರ ಬೇಡಿಕೆಯಂತೆ ತಾವು ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಯುತ್ ಅವರ ಸರ್ಕಾರ ಸಂಸತ್‌ನಲ್ಲಿ ಬಹುಮತ ಹೊಂದಿದೆ.

ಮಾಜಿ ಪ್ರಧಾನಿ ಥಾಕ್ಸಿನ್ ಶಿನವತ್ರ ಮತ್ತು ಅವರ ಸಹೋದರಿ ಯಿಂಗ್ಲುಕ್ ಕುಟುಂಬದ ಒಡೆತನವಿರುವ ವಾಯ್ಸ್ ಟಿವಿಯನ್ನು ಅಮಾನತು ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ಸರ್ಕಾರದ ಕಟು ಟೀಕಾಕಾರನಾದ ವಾಯ್ಸ್ ಟಿವಿ ಆನ್‌ಲೈನ್ ವಾಹಿನಿ ಸರ್ಕಾರದ ವಿರುದ್ಧ ಸುಳ್ಳು ಮಾಹಿತಿಗಳನ್ನು ಬಿತ್ತರಿಸುತ್ತಿದೆ ಎಂದು ಆರೋಪಿಸಲಾಗಿದೆ. ಪ್ರತಿಭಟನೆಯ ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ವಾಯ್ಸ್ ಟಿವಿ ಹಾಗೂ ಇತರೆ ಮೂರು ಮಾಧ್ಯಮಗಳನ್ನು ತನಿಖೆಗೆ ಒಳಪಡಿಸಲಾಗಿದೆ.

ಬೆಂಗಾವಲು ಪಡೆಯ ಉಪ ನಾಯಕಿಯನ್ನೇ ಮದುವೆಯಾದ ಥಾಯ್ಲೆಂಡ್ ರಾಜಬೆಂಗಾವಲು ಪಡೆಯ ಉಪ ನಾಯಕಿಯನ್ನೇ ಮದುವೆಯಾದ ಥಾಯ್ಲೆಂಡ್ ರಾಜ

ಶಿನವತ್ರ ಅವರನ್ನು 2014ರ ದಂಗೆ ಮೂಲಕ ಅಧಿಕಾರದಿಂದ ಕೆಳಕ್ಕಿಳಿಸಿದ್ದ ಪ್ರಯುತ್, ಬಲವಂತವಾಗಿ ಅಧಿಕಾರಕ್ಕೆ ಬಂದಿದ್ದರು. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಶಿನವತ್ರ ಮತ್ತು ಅವರ ಸಹೋದರಿ ಇಬ್ಬರೂ ದೇಶದಿಂದ ಪರಾರಿಯಾಗಿದ್ದರು.

English summary
Protest against Prime Minister Prayut Chano Cha continues amid several crackdowns. TV Channel was banned by court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X