• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

20 ಸಖಿಯರೊಂದಿಗೆ ಥಾಯ್ಲೆಂಡ್ ಮಹಾರಾಜನ ಕ್ವಾರಂಟೈನ್!

|

ಬರ್ಲಿನ್, ಮಾರ್ಚ್ 31: ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಕೊರೊನಾ ಸೋಂಕು ತಗುಲಿದೆ.

ಬಹುತೇಕ ನಾಯಕರು ಕೊರೊನಾ ತಡೆಗಾಗಿ ಏನೆಲ್ಲಾ ಕ್ರಮಗಳನ್ನು ಪಾಲಿಸಬೇಕು ಎಂಬುದರ ಚಿಂತೆಯಲ್ಲಿದ್ದರೆ , ಇತ್ತ ಥಾಯ್ಲೆಂಡ್‌ನ ಮಹಾರಾಜ ಮಹಾ ವಜಿರಾಲಾಂಗ್ಕಾರ್ನ್ ಅಲಿಯಾಸ್ ರಾಮ 10 ಅವರು ಕೊರೊನಾದಿಂದ ಸುರಕ್ಷಿತವಾಗಿರುವ ನಿಟ್ಟಿನಲ್ಲಿ ಜರ್ಮಿನಿಯ ಐಷಾರಾಮಿ ಹೋಟೆಲ್‌ವೊಂದನ್ನೇ ಬಾಡಿಗೆ ಪಡೆದಿದ್ದಾರೆ.

ಕೊರೊನಾ: ದೆಹಲಿಯಲ್ಲಿ ಮಸೀದಿಗೆ ತೆರಳಿದ್ದ ತೆಲಂಗಾಣದ 6 ಮಂದಿ ಸಾವು

ಜರ್ಮನಿಯ ದಕ್ಷಿಣ ಭಾಗದಲ್ಲಿರುವ ಗ್ರಾಂಡ್ ಹೋಟೆಲ್‌ ಸೊನ್ನೇನ್ಬಿಚ್ಲ್‌ ಹೋಟೆಲ್‌ ಅನ್ನೇ ಸಂಪೂರ್ಣ ಬಾಡಿಗೆಗೆ ಪಡೆದಿರುವ ರಾಜ, ತಮ್ಮ 20 ಸಖಿಯರ ಜೊತೆ ಕ್ವಾರಂಟೈನ್ ಅವಧಿಯಲ್ಲೂ ಐಷಾರಾಮಿ ಜೀವನದ ಮೊರೆ ಹೋಗಿದ್ದಾರೆ.

ಆದರೆ, ತಮ್ಮ 119 ಮಂದಿ ಪ್ರತಿನಿಧಿಗಳನ್ನು ಜರ್ಮನಿಯಿಂದ ಥಾಯ್ಲೆಂಡ್‌ಗೆ ಮರಳಿ ಕಳುಹಿಸಿದ್ದಾರೆ ಎನ್ನಲಾಗಿದೆ.

ಥಾಯ್ಲೆಂಡ್‌ನ ರಾಜಪ್ರತಿನಿಧಿ ಮಂಡಳಿಗೆ ಜರ್ಮನಿಯಲ್ಲಿರುವ 2ನೇ ನಿವಾಸದಲ್ಲಿ ಹೆಚ್ಚು ಕಾಲ ಕಳೆಯುವ ರಾಮ-10 ಫೆಬ್ರವರಿಯಿಂದಲೂ ಇಲ್ಲೇ ಇದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜರ್ಮನಿಯಲ್ಲಿ ಇದುವರೆಗೆ 560 ಮಂದಿ ಮೃತಪಟ್ಟಿದ್ದು, 63,929 ಮಂದಿ ಕೊರೊನಾ ಸೋಂಕಿತರಿದ್ದಾರೆ ಎಂದು ತಿಳಿದುಬಂದಿದೆ.

English summary
Maha Vajiralongkorn, known as King Rama X, was given special permission to book out the entire four-star Grand Hotel Sonnenbichl in Bavaria despite lockdown rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X