ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತಾನೋತ್ಪತ್ತಿ ಪರೀಕ್ಷೆ: ಬಾಹ್ಯಾಕಾಶಕ್ಕೆ ಕೋತಿಯನ್ನು ಕಳುಹಿಸಲಿದೆ ಚೀನಾ

|
Google Oneindia Kannada News

ಬೀಚಿಂಗ್, ನ.08: ಚೀನಾದ ಬಾಹ್ಯಾಕಾಶ ನಿಲ್ದಾಣವಾದ ಟಿಯಾಂಗಾಂಗ್‌ನ ನಿರ್ಮಾಣವನ್ನು ಪೂರ್ಣಗೊಳಿಸಿದ ನಂತರ, ಚೀನೀಯರು ಶೂನ್ಯ ಗುರುತ್ವಾಕರ್ಷಣೆಯಲ್ಲಿ ಜೀವ ವಿಜ್ಞಾನ ಸಂಶೋಧನೆಗೆ ಸಿದ್ಧರಾಗಿದ್ದಾರೆ.

ಆ ಶೂನ್ಯ ಗುರುತ್ವಾಕರ್ಷಣೆಯ ಪರಿಸ್ಥಿತಿಗಳಲ್ಲಿ ಸಂತಾನೋತ್ಪತ್ತಿಯನ್ನು ಪರೀಕ್ಷಿಸಲು ದೇಶವು ಕೋತಿಯೊಂದನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಯೋಜಿಸುತ್ತಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನಂತಹ ಚೀನೀ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ರಾಬರ್ಟ್ ವಾದ್ರಾ ಅಪ್ತ ಸಂಜಯ್ ಭಂಡಾರಿ ಹಸ್ತಾಂತರಕ್ಕೆ ಬ್ರಿಟನ್ ಕೋರ್ಟ್ ಒಪ್ಪಿಗೆ?ರಾಬರ್ಟ್ ವಾದ್ರಾ ಅಪ್ತ ಸಂಜಯ್ ಭಂಡಾರಿ ಹಸ್ತಾಂತರಕ್ಕೆ ಬ್ರಿಟನ್ ಕೋರ್ಟ್ ಒಪ್ಪಿಗೆ?

"ಇಲಿಗಳು ಮತ್ತು ಮಂಗಗಳನ್ನು ಒಳಗೊಂಡಿರುವ ಕೆಲವು ಅಧ್ಯಯನಗಳು ಬಾಹ್ಯಾಕಾಶದಲ್ಲಿ ಹೇಗೆ ಬೆಳೆಯುತ್ತವೆ ಅಥವಾ ಸಂತಾನೋತ್ಪತ್ತಿ ಮಾಡುತ್ತವೆ ಎಂಬುದನ್ನು ನೋಡಲು ಪ್ರಯೋಗ ಕೈಗೊಳ್ಳಲಾಗುತ್ತದೆ. ಈ ಪ್ರಯೋಗಗಳು ಸೂಕ್ಷ್ಮ ಗುರುತ್ವಾಕರ್ಷಣೆ ಮತ್ತು ಇತರ ಬಾಹ್ಯಾಕಾಶ ಪರಿಸರದಲ್ಲಿಯ ಜೀವಿಗಳ ರೂಪಾಂತರದ ಬಗ್ಗೆ ನಮ್ಮ ತಿಳುವಳಿಕೆಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ" ಎಂದು ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ನ ಸಂಶೋಧಕ ಜಾಂಗ್ ಲು ಹೇಳಿದ್ದಾರೆ.

Testing Reproduction In Space: China Planning To Send Monkey

ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ ಈ ಯೋಜನೆಯನ್ನು ಮುನ್ನಡೆಸುತ್ತಿದೆ. ಪರೀಕ್ಷೆಗಳಿಗೆ ಅಗತ್ಯವಾದ ಅತ್ಯಾಧುನಿಕ ವೈಜ್ಞಾನಿಕ ಉಪಕರಣಗಳನ್ನು ಸಹ ಬಳಸಿಕೊಳ್ಳಲಾಗುತ್ತದೆ. ಈ ವರ್ಷದ ಆರಂಭದಲ್ಲಿ ಪ್ರಾರಂಭಿಸಲಾದ ವೆಂಟಿಯನ್ ಮಾಡ್ಯೂಲ್‌ನಲ್ಲಿ ಈ ಯೋಜನೆಯನ್ನು ನಡೆಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಬಾಹ್ಯಾಕಾಶ ನಿಲ್ದಾಣದ ಟಿಯಾನ್ಹೆ, ವೆಂಟಿಯನ್ ಮತ್ತು ಮೆಂಗ್ಟಿಯನ್ ಲ್ಯಾಬ್ ಮಾಡ್ಯೂಲ್‌ಗಳು ಟಿ ಆಕಾರದ ರಚನೆಯಲ್ಲಿವೆ. ಅಂತಿಮ ಪ್ರಯೋಗಾಲಯದ ನಂತರ, ಚೀನಾ ಭೂಮಿಯ ಕಕ್ಷೆಯನ್ನು ಮೀರಿ ತನ್ನದೇ ಆದ ದೀರ್ಘಕಾಲೀನ ಶಾಶ್ವತ ಉಪಸ್ಥಿತಿಯಲ್ಲಿ ಪರೀಕ್ಷೆಗಳನ್ನು ನಡೆಸಲು ಸಿದ್ಧವಾಗಿದೆ.

ಚೀನಾ ಮಾನವಸಹಿತ ಬಾಹ್ಯಾಕಾಶ ಸಂಸ್ಥೆ (China Manned Space Agency) ತಾಂತ್ರಿಕ ಕ್ಷೇತ್ರಗಳಿಂದ ವೈದ್ಯಕೀಯ ವಿಜ್ಞಾನದವರೆಗಿನ ಕ್ಷೇತ್ರಗಳಲ್ಲಿ 1,000 ಕ್ಕೂ ಹೆಚ್ಚು ಪ್ರಯೋಗಗಳನ್ನು ನಡೆಸುವ ಗುರಿ ಹೊಂದಿದೆ.

Testing Reproduction In Space: China Planning To Send Monkey

ಈ ಏಜೆನ್ಸಿಯು ಇತರ ಹಲವು ದೇಶಗಳಿಂದ ಮನವಿಗಳನ್ನು ಸಹ ಸ್ವೀಕರಿಸಿದೆ. ಪ್ರಸ್ತುತ ಸುಮಾರು 9 ಅಂತರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಗಳನ್ನು ನಡೆಸುತ್ತಿದೆ. ಭೂಮಿಯಿಂದ 388.9 ಕಿಲೋಮೀಟರ್ ಎತ್ತರದಲ್ಲಿರುವ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣಕ್ಕೆ ಉಡಾವಣೆಯಾಗಲಿದೆ.

ವೆಂಟಿಯನ್ ಮಾಡ್ಯೂಲ್‌ನ ವಿನ್ಯಾಸವು ದೊಡ್ಡ ಜೀವಿಗಳಿಗೆ ಸರಿಹೊಂದುವಂತೆ ವಿಸ್ತರಣೆ ಮಾಡಲಾಗುತ್ತದೆ. ಸದ್ಯ ಇದು ಪಾಚಿ, ಮೀನು ಅಥವಾ ಬಸವನ ಹುಳುಗಳಂತಹ ಸಣ್ಣ ಜೀವಿಗಳನ್ನು ಮಾತ್ರ ಹೊಂದುವ ಸ್ಥಳಾವಕಾಶವನ್ನು ಹೊಂದಿದೆ.

English summary
China is planning to send Monkey to space, to test reproduction in space. China completing the construction of its space station. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X