ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯನ್ ಅಧ್ಯಕ್ಷನಿಗೆ ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ಸವಾಲ್

|
Google Oneindia Kannada News

ಕೀವ್, ಮಾರ್ಚ್ 14: ಉಕ್ರೇನ್ ಮೇಲೆ ನಿರಂತರ ದಾಳಿ ನಡೆಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೋರಾಟಕ್ಕೆ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ಸವಾಲು ಹಾಕಿದ್ದಾರೆ.

ನಾನು ಈ ಮೂಲಕ ಉಕ್ರೇನ್ ಪರವಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಒಂದು ಸವಾಲು ಹಾಕುತ್ತೇನೆ. ಏಕಾಂಗಿ ಆಗಿ ಹೋರಾಡುವುದಕ್ಕೆ ನೀವು ಸಿದ್ಧರಿದ್ದೀರಾ," ಎಂದು ಎಲೋನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಸಂದೇಶದ ಮಧ್ಯೆ ವ್ಲಾಡಿಮಿರ್ ಪುಟಿನ್ ಎಂದು ರಷ್ಯನ್ ವರ್ಣಮಾಲೆಯಲ್ಲಿ ಬರೆದುಕೊಂಡಿದ್ದಾರೆ. ಹಕ್ಕು ಮತ್ತು ಉಕ್ರೇನ್ ನಡುವಿನ ದ್ವಂದ್ವ ಹೋರಾಟದಲ್ಲಿ ಗೆದ್ದವರು ರಷ್ಯಾ ಮತ್ತು ಉಕ್ರೇನ್ ಭವಿಷ್ಯವನ್ನು ನಿರ್ಧರಿಸುತ್ತಾರೆ ಎನ್ನುವ ಧಾಟಿಯಲ್ಲಿ ಟ್ವೀಟ್ ಮಾಡಿದ್ದಾರೆ.

Russia-Ukraine War Live Updates: ಮರಿಯುಪೋಲ್‌ನಲ್ಲಿ ರಷ್ಯಾ ದಾಳಿಗೆ 2,500ಕ್ಕೂ ಅಧಿಕ ಮಂದಿ ಬಲಿRussia-Ukraine War Live Updates: ಮರಿಯುಪೋಲ್‌ನಲ್ಲಿ ರಷ್ಯಾ ದಾಳಿಗೆ 2,500ಕ್ಕೂ ಅಧಿಕ ಮಂದಿ ಬಲಿ

ವ್ಲಾಡಿಮಿರ್ ಪುಟಿನ್ ವೈಯಕ್ತಿಕ ಟ್ವಿಟ್ಟರ್ ಖಾತೆಯನ್ನು ಹೊಂದಿಲ್ಲ. ಈ ಕಾರಣಕ್ಕೆ ಎಲೋನ್ ಮಸ್ಕ್ ರಷ್ಯಾದ ಅಧ್ಯಕ್ಷರ ಅಧಿಕೃತ ಟ್ವಿಟರ್ ಖಾತೆ @KremlinRussia_E ನಿರ್ವಹಿಸುವವರಿಂದ ಉತ್ತರ ಕೇಳಿದ್ದಾರೆ. ಈ ಹೋರಾಟಕ್ಕೆ ನೀವು ಒಪ್ಪುತ್ತೀರಾ? ಎಂದು ಮಸ್ಕ್ ಪ್ರಶ್ನಿಸಿದ್ದಾರೆ.

 Tesla and SpaceX CEO Elon Musk is challenged Russian President Vladimir Putin fight

ಉಕ್ರೇನ್‌ಗೆ ಇಂಟರ್ನೆಟ್ ಸಂಪರ್ಕ ಒದಗಿಸಿದ ಎಲೋನ್:

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಅವರು ಯುದ್ಧದ ನಡುವೆ ಕಂಪನಿಯ ಸ್ಟಾರ್‌ಲಿಂಕ್ ಉಪಗ್ರಹಗಳ ಮೂಲಕ ಈ ಹಿಂದೆ ಉಕ್ರೇನ್‌ಗೆ ಇಂಟರ್ನೆಟ್ ಸಂಪರ್ಕವನ್ನು ಒದಗಿಸಿದ್ದರು.

ಫೆಬ್ರುವರಿ 24ರಂದು ಉಕ್ರೇನ್ ಮೇಲೆ ರಷ್ಯಾ ದಾಳಿ ಶುರು ಮಾಡಿತು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ಅನ್ನು ಸೇನಾಪಡೆ ಮುಕ್ತಗೊಳಿಸುವುದರ ಜೊತೆಗೆ ನಾಶಪಡಿಸುವುದಕ್ಕಾಗಿ ವಿಶೇಷ ಮಿಲಿಟರಿ ಕಾರ್ಯಾಚರಣೆ ನಡೆಸಿದರು. ಇದರಿಂದ ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ, 2.8 ಮಿಲಿಯನ್‌ಗಿಂತಲೂ ಹೆಚ್ಚು ಜನರು ಪೋಲೆಂಡ್ ಮತ್ತು ಇತರ ನೆರೆಯ ದೇಶಗಳಿಗೆ ವಲಸೆ ಹೋಗಿದ್ದಾರೆ.

ರಷ್ಯಾ-ಉಕ್ರೇನ್ ಸಂಧಾನ ಮಾತುಕತೆ:

ಉಕ್ರೇನ್ ಮತ್ತು ರಷ್ಯಾದ ಪ್ರತಿನಿಧಿಗಳು ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಸೋಮವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಯಿತು. ಆದರೆ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರ ನಡುವಿನ ನಿಯೋಗ ಮಟ್ಟದಲ್ಲಿ ನಡೆಸಿದ ಮಾತುಕತೆಗಳು ಈವರೆಗೆ ಯಾವುದೇ ರೀತಿಯ ಅನುಕೂಲಕರ ಫಲಿತಾಂಶವನ್ನು ನೀಡಿಲ್ಲ. ಉಕ್ರೇನಿಯನ್ ಅಧ್ಯಕ್ಷೀಯ ಆಡಳಿತದ ಸಲಹೆಗಾರ ಮೈಖೈಲೊ ಪೊಡೊಲಿಯಾಕ್, ನಿಯೋಗಗಳು ಷರತ್ತುಗಳನ್ನು ಸ್ಪಷ್ಟಪಡಿಸಲು ವಿರಾಮ ತೆಗೆದುಕೊಂಡಿವೆ ಎಂದರು. ನಾಳೆ (ಮಾರ್ಚ್ 15) ಮತ್ತೆ ಮಾತುಕತೆ ಪುನರಾರಂಭವಾಗಲಿದೆ.

English summary
Tesla and SpaceX CEO Elon Musk is challenged Russian President Vladimir Putin fight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X