World War: ಪೋಲ್ಯಾಂಡ್ ಪಂಜಿಗೆ ಬೆಂಕಿ ಹಚ್ಚಿದ್ದು ಯಾರು?
ರಷ್ಯಾ & ಉಕ್ರೇನ್ ಯುದ್ಧದ ಭೀಕರತೆ ಕ್ಯಾನ್ಸರ್ ರೀತಿ ಇಡೀ ಜಗತ್ತಿಗೆ ಹರಡುವ ಮುನ್ಸೂಚನೆ ನೀಡುತ್ತಿದೆ. ಅದರಲ್ಲೂ ಯುರೋಪ್ ರಾಷ್ಟ್ರಗಳು ಒಂದೊಂದಾಗಿ ಜಗಳಕ್ಕೆ ನಿಲ್ಲುತ್ತಿದ್ದು, ಅತ್ತ ಒಂದು ಬಣ ಅಮೆರಿಕದ ಪರ ಇದ್ದರೆ & ಮತ್ತೊಂದು ಬಣ ರಷ್ಯಾ ಬೆಂಬಲದ ಜೊತೆಗೆ ಯುದ್ಧ ಮಾಡಲು ಸಿದ್ಧತೆ ನಡೆಸಿದಂತೆ ಕಾಣ್ತಿದೆ. ರಷ್ಯಾ ಅಕ್ಕಪಕ್ಕದ ದೇಶಗಳಾದ ಪೋಲ್ಯಾಂಡ್ ಮತ್ತು ಬೆಲಾರಸ್ ಜಿದ್ದಿಗೆ ಬಿದ್ದು ಗಡಿಯಲ್ಲಿ ಭಯ ಹುಟ್ಟಿಸಿವೆ.
ಪೋಲ್ಯಾಂಡ್ ಹಾಗೂ ಬೆಲಾರಸ್ ಸಂಬಂಧ ಈ ಮೊದಲಿನಿಂದ ಹಾವು & ಮುಂಗುಸಿ ರೀತಿಯೇ ಇದೆ. ಆದರೆ ಈಗ ರಷ್ಯಾ ಮತ್ತು ಉಕ್ರೇನ್ ನಡುವೆ ಬೆಂಕಿ ಧಗಧಗಿಸುವ ಹೊತ್ತಲ್ಲೇ ಬೆಲಾರಸ್ ವಿರುದ್ಧ ಪೋಲ್ಯಾಂಡ್ ಕೆಂಡಕಾರಿದೆ. ಅಲ್ಲದೆ ಪೋಲ್ಯಾಂಡ್ ಸೇನೆ ಬೆಲಾರಸ್ ಗಡಿಗೆ ಓಡೋಡಿ ಬರುತ್ತಿದ್ದು, ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರುತ್ತಿದೆ. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಸೇನೆ ಮತ್ತು ಶಸ್ತ್ರಾಸ್ತ್ರ ನಿಯೋಜನೆ ಮಾಡಿದ್ದ ಪೋಲ್ಯಾಂಡ್, ಈಗ ಇನ್ನಷ್ಟು ಉಗ್ರ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. 10 ಸಾವಿರ ಸೈನಿಕರನ್ನ ಹೆಚ್ಚುವರಿಯಾಗಿ ನಿಯೋಜಿಸಲು ಪೋಲ್ಯಾಂಡ್ ಸೇನೆ ಮುಂದಾಗಿದೆ ಎನ್ನಲಾಗಿದೆ.

ಈಗಲೇ ನಡೆಯುತ್ತಾ 3ನೇ ಮಹಾಯುದ್ಧ?
ಬೆಲಾರಸ್ ದೇಶ ರಷ್ಯಾ ಪರ ನಿಂತಿದ್ದಕ್ಕೆ ಪೋಲ್ಯಾಂಡ್ ಈ ರೀತಿ ತಕರಾರು ತೆಗೆಯುತ್ತಿದೆ ಎಂಬ ಆರೋಪ ಇದೆ. ಇಂತಹ ಆರೋಪಗಳ ನಡುವೆ ರಷ್ಯಾ ಕೂಡ ರೊಚ್ಚಿಗೆದ್ದು ಬೆಲಾರಸ್‌ಗೆ ತನ್ನ ಅಧಿಕೃತ ಬೆಂಬಲ ಘೋಷಿಸಿದೆ. ಈ ಮೊದಲೇ ರಷ್ಯಾ ಅಧ್ಯಕ್ಷ ಪುಟಿನ್ ವಾರ್ನಿಂಗ್ ಕೊಟ್ಟಿದ್ದು ಅಪ್ಪಿತಪ್ಪಿ ಬೆಲಾರಸ್ ತಂಟೆಗೆ ಹೋದ್ರೆ ನಿಮಗೆ ಉತ್ತರ ಸಿಗಲಿದೆ ಎಂದಿದ್ದರು ವ್ಲಾದಿಮಿರ್ ಪುಟಿನ್. ಈಗ ನೋಡಿದರೆ ರಷ್ಯಾ ಮಾತಿಗೆ ವಿರುದ್ಧವಾಗಿ ಬೆಲಾರಸ್ ಗಡಿಯಲ್ಲಿ ಮತ್ತಷ್ಟು ಸೈನಿಕರನ್ನು ನಿಯೋಜನೆ ಮಾಡುತ್ತಿದೆ ಪೋಲ್ಯಾಂಡ್. ಹೀಗಾಗಿ ಮತ್ತೊಂದು ಮಹಾಯುದ್ಧದ ಭೀತಿಯೂ ಆವರಿಸಿದೆ.
ಬೆಲಾರಸ್ ಅಧ್ಯಕ್ಷ ಪುಟಿನ್ ಫ್ರೆಂಡ್!
ರಷ್ಯಾ ಖಾಸಗಿ ಸೇನೆ ಬಂಡಾಯ ಎದ್ದು ಕಿರಿಕ್ ಮಾಡಿದಾಗ ಬೆಲಾರಸ್ ಅಧ್ಯಕ್ಷನಾದ ಅಲೆಕ್ಸಾಂಡರ್ ಲುಕಾಶೆಂಕೊ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಿದ್ರು. ಬೆಲಾರಸ್ ಮಧ್ಯಪ್ರವೇಶದ ಹಿನ್ನೆಲೆ ರಷ್ಯಾದ ಖಾಸಗಿ ಸೇನೆ ಸಮಾಧಾನವಾಗಿತ್ತು. ಲುಕಾಶೆಂಕೊ ರಷ್ಯಾದ ಖಾಸಗಿ ಸೇನೆಯನ್ನು ತನ್ನ ದೇಶಕ್ಕೆ ಕರೆಸಿಕೊಂಡು ರಷ್ಯಾನ ಬಚಾವ್ ಮಾಡಿದ್ದರು. ಈಗ ಇದೇ ಕಾರಣಕ್ಕೆ ಬೆಲಾರಸ್ ಟಾರ್ಗೆಟ್ ಅಗಿದೆ ಎಂಬ ಆರೋಪ ಕೇಳಿಬಂದಿದೆ. ಬೆಲಾರಸ್‌ನಲ್ಲಿ ರಷ್ಯಾದ ಖಾಸಗಿ ಸೈನಿಕರು ಕವಾಯತು ನಡೆಸುತ್ತಿದ್ದಾರೆ ಎಂದು ಆರೋಪ ಮಾಡಿರುವ ಪೋಲ್ಯಾಂಡ್, ಬೆಲಾರಸ್ ಗಡಿಗೆ ಭಾರಿ ಪ್ರಮಾಣದ ಪಡೆಗಳನ್ನು ಕಳುಹಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ನ್ಯೂಕ್ಲಿಯರ್ ಬಾಂಬ್ ಬೀಳೋದು ಗ್ಯಾರಂಟಿ
ಭೀಕರ ಯುದ್ಧಕ್ಕೆ ರಷ್ಯಾ ಈಗಾಗಲೇ ತಯಾರಿ ನಡೆಸಿದೆ. ಬೆಲಾರಸ್‌ನ ಗಡಿಯಲ್ಲಿ ತನ್ನ ಪರಮಾಣು ಅಸ್ತ್ರ ಸಿದ್ಧವಾಗಿ ನಿಲ್ಲಿಸಿದೆ ರಷ್ಯಾ. ಈ ಕಾರಣಕ್ಕೆ ಈಗ ಯುರೋಪ್ ಒಕ್ಕೂಟಕ್ಕೆ ಆತಂಕ ಮೂಡಿದೆ ಎಂಬ ಮಾತಿದೆ. ಅದ್ರಲ್ಲೂ ರಷ್ಯಾ ಶತ್ರುಗಳು ನಡುಗುತ್ತಿದ್ದಾರೆ. ಈ ಸಂದರ್ಭದಲ್ಲಿ ಪೋಲ್ಯಾಂಡ್ ಕೂಡ ತಿರುಗಿಬಿದ್ದಿದ್ದು, ತನ್ನ ಗಡಿಯ ಸಮೀಪದಲ್ಲಿ ಇರುವ ಬೆಲಾರಸ್ ಗಡಿಗೆ ಸೇನೆ ಕಳುಹಿಸುತ್ತಿದೆ. ಆದರೆ ಇದರಿಂದ ಬೆಲಾರಸ್ ಭಯಗೊಂಡಿದ್ದು, ರಷ್ಯಾ ಖಡಕ್ ರಿಯಾಕ್ಷನ್ ಕೊಟ್ಟಿದೆ. ಅಕಸ್ಮಾತ್ ಬೆಲಾರಸ್‌ನ ತಂಟೆಗೆ ಹೋದ್ರೆ ನಮ್ಮಿಂದ ಉತ್ತರ ಸಿಗುತ್ತೆ ಎಂದಿದೆ ರಷ್ಯಾ. ಅಲ್ಲದೆ ಕೆಲವೇ ಕೆಲವು ದಿನದ ಹಿಂದೆ ಬೆಲಾರಸ್ ಮೇಲೆ ದಾಳಿ ನಡೆದರೆ ರಷ್ಯಾ ಮೇಲೆ ನಡೆದಂತೆ ಎಂದಿದ್ರು ಪುಟಿನ್.
ಹೀಗೆ ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧ ನಡೆಯುವ ಸಂದರ್ಭದಲ್ಲೇ ಮತ್ತೆರಡು ದೇಶಗಳ ಸೇನೆ ಹಿಂಸೆಗೆ ಸಿದ್ಧವಾಗಿವೆ. ಅಕಸ್ಮಾತ್ ಬೆಲಾರಸ್ ವಿರುದ್ಧ ಪೋಲ್ಯಾಂಡ್ ಕ್ರಮ ಕೈಗೊಂಡರೆ ರಷ್ಯಾ ನುಗ್ಗುವುದು ಗ್ಯಾರಂಟಿ. ಹೀಗೆ ರಷ್ಯಾ ಮುಂದೆ ಬಂದರೆ ಮತ್ತೆ ಅಮೆರಿಕ & ಯುರೋಪ್ ರಾಷ್ಟ್ರಗಳು ಯುದ್ಧಕ್ಕೆ ಸಿದ್ಧತೆ ನಡೆಸುತ್ತವೆ. ಆ ಮೂಲಕ ಪರಿಸ್ಥಿತಿ ಇನ್ನಷ್ಟು ಭೀಕರವಾಗುತ್ತದೆ. ಹೀಗಾಗಿ ಹೇಗಾದರೂ ಮಾಡಿ ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಬೇಕು ಎಂದು ಪ್ರಪಂಚ ಪ್ರಯತ್ನ ಮುಂದುವರಿಸಿದೆ.












Click it and Unblock the Notifications