Taliban Fight: ಪಾಕಿಸ್ತಾನ ಮಿಲಿಟರಿ ವಿರುದ್ಧ ದಿಢೀರ್ ಯುದ್ಧ ಸಾರಿದ ತಾಲಿಬಾನ್?
ತಾಲಿಬಾನ್ ಇದೀಗ ತನ್ನ ವಿರುದ್ಧ ಪಾಕಿಸ್ತಾನ ಮಾಡುತ್ತಿರುವ ದೌರ್ಜನ್ಯಕ್ಕೆ ತಕ್ಕ ಉತ್ತರ ನೀಡಲು ಸಜ್ಜಾಗಿದೆ. ಗಡಿ ಭಾಗದಲ್ಲಿ ಬೇಡ ಬೇಡ ಅಂದರೂ ಕಿರಿಕ್ ಮಾಡುತ್ತಿರುವ ಪಾಕಿಸ್ತಾನ ಮಿಲಿಟರಿ ಉಡೀಸ್ ಮಾಡಲು ಎಲ್ಲಾ ರೀತಿಯ ಪ್ಲಾನ್ ಮಾಡುತ್ತಿದೆ ತಾಲಿಬಾನ್ ಪಡೆ. ಸುಖಾಸುಮ್ಮನೆ ಪಾಪಿ ಪಾಕಿಸ್ತಾನ ತಾಲಿಬಾನ್ ವಿರುದ್ಧ ಘೋರವಾದ ಷಡ್ಯಂತ್ರ ಮಾಡುತ್ತಿದ್ದು, ಗಡಿ ಭಾಗದಲ್ಲಿ ದಿಢೀರ್ ಹಿಂಸಾಚಾರ ನಡೆಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇಂತಹ ಪರಿಸ್ಥಿತಿ ಎದುರಾಗಿರುವಾಗ ಮತ್ತೊಂದು ಸುದ್ದಿ ಸಂಚಲನ ಸೃಷ್ಟಿಸಿದೆ.
ವಿವಾದಿತ ಪ್ರದೇಶ ಡ್ಯುರಾಂಡ್ ರೇಖೆ ಉದ್ದಕ್ಕೂ ದಿಢೀರ್ ಪಾಕಿಸ್ತಾನ ಸೇನೆ & ತಾಲಿಬಾನ್ ನಡುವೆ ಫೈಟಿಂಗ್ ಆಗಿತ್ತು. ದಾಳಿ ಬಗ್ಗೆ ತಾಲಿಬಾನ್ ರೊಚ್ಚಿಗೆದ್ದು ಪಾಕಿಸ್ತಾನ ಸೇನೆಯನ್ನ ಉಡೀಸ್ ಮಾಡಿ ಹಾಕಲು ಮುಂದಾಗಿತ್ತು. ಎಲ್ಲಾ ಘಟನೆಗಳ ನಂತರ ಮತ್ತೆ ಮತ್ತೆ ಭೀಕರ ತಿಕ್ಕಾಟ ನಡೆಯುತ್ತಲೇ ಇರುವಾಗ ದಿಢೀರ್ ಯುದ್ಧದ ವಾತಾವರಣ ಇದೀಗ ನಿರ್ಮಾಣ ಆಗಿದೆ. ಅದರಲ್ಲೂ ತಾಲಿಬಾನ್ ವಿರುದ್ಧ ಪಾಕಿಸ್ತಾನ ಅತ್ಯಾಧುನಿಕ ಅಸ್ತ್ರಗಳನ್ನು ಬಳಸಲು ಮುಂದಾಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಇದೇ ಕಾರಣಕ್ಕೆ ತಾಲಿಬಾನ್ ಕೂಡ ವಾರ್ನಿಂಗ್ ಕೊಟ್ಟಿದೆ.

ಪಾಕಿಸ್ತಾನ ವಿರುದ್ಧ ಯುದ್ಧ ಗ್ಯಾರಂಟಿ?
ಹೌದು, ಇದೀಗ ತಾಲಿಬಾನ್ ತನ್ನ ಬತ್ತಳಿಕೆಯಲ್ಲಿ ಇರುವ ಅಸ್ತ್ರಗಳನ್ನು ಒಂದೊಂದಾಗಿ ಹೊರ ತೆಗೆದು ಪ್ರಯೋಗ ಮಾಡಲು ಮುಂದಾಗಿದೆ. ಅದರಲ್ಲೂ ಪಾಕಿಸ್ತಾನ ಅತ್ಯಾಧುನಿಕ ಅಸ್ತ್ರಗಳನ್ನು ಬಳಕೆ ಮಾಡಿ ದಾಳಿ ಮಾಡಲು ಮುಂದಾಗಿದೆ ಎಂಬ ಸುದ್ದಿಯೇ ಈಗ ದೊಡ್ಡ ಅವಾಂತರ ಸೃಷ್ಟಿ ಮಾಡುತ್ತಿದೆ. ಹೀಗಿದ್ದಾಗ ತಾಲಿಬಾನ್ ಕೂಡ ಯುದ್ಧಕ್ಕೆ ಸನ್ನದ್ಧವಾಗಿದ್ದು, ತನ್ನನ್ನು ಮುಟ್ಟಿದರೆ ಪರಿಸ್ಥಿತಿ ನೆಟ್ಟಗೆ ಇರಲ್ಲ ಎಂಬ ಸಂದೇಶ ರವಾನಿಸಿದೆ.












Click it and Unblock the Notifications