ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈವಾನ್‌ನಲ್ಲಿ ಮತ್ತೆ ಪ್ರಬಲ ಭೂಕಂಪ; ಸುನಾಮಿ ಅಲರ್ಟ್ ಹೊರಡಿಸಿದ್ದ ಜಪಾನ್

|
Google Oneindia Kannada News

ನವದೆಹಲಿ, ಸೆ. 18: ತೈವಾನ್‌ನ ಆಗ್ನೇಯ ಭಾಗದ ಕರಾವಳಿ ಜಾಗದಲ್ಲಿ ಭಾನುವಾರ ಪ್ರಬಲ ಭೂಕಂಪ ಸಂಭವಿಸಿದೆ. ಯುಎಸ್ ಭೂಸರ್ವೇಕ್ಷಣ ಸಂಸ್ಥೆ ಪ್ರಕಾರ ಭೂಕಂಪ ರಿಕ್ಟರ್ ಮಾಪಕದಲ್ಲಿ 7.2 ಇತ್ತು. ನಂತರ ತೀವ್ರತೆಯ ಅಂದಾಜನ್ನು 6.9ಕ್ಕೆ ತಗ್ಗಿಸಲಾಯಿತು.

ಸ್ಥಳೀಯ ಕಾಲಮಾನದಲ್ಲಿ ಮಧ್ಯಾಹ್ನ 2:44 (ಭಾರತೀಯ ಕಾಲಮಾನದಲ್ಲಿ ಮಧ್ಯಾಹ್ನ 12:14) ಕ್ಕೆ ತೈಟುಂಗ್ ನಗರದ ಉತ್ತರಕ್ಕೆ 50 ಕಿಮೀ ಆಚೆ, ಭೂಮಿಯಿಂದ 10 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿರುವುದು ತಿಳಿದುಬಂದಿದೆ.

7.1 ತೀವ್ರತೆಯ ಭೂಕಂಪಕ್ಕೆ ನಡುಗಿದ ಉತ್ತರ ಫಿಲಿಪೈನ್ಸ್‌7.1 ತೀವ್ರತೆಯ ಭೂಕಂಪಕ್ಕೆ ನಡುಗಿದ ಉತ್ತರ ಫಿಲಿಪೈನ್ಸ್‌

ತೈವಾನ್ ಸಮೀಪ ಇರುವ ಪುಟ್ಟ ದ್ವೀಪಗಳಿಗೆ ಸುನಾಮಿ ದಾಳಿಯಾಗಬಹುದು ಎಂದು ಜಪಾನ್ ಎಚ್ಚರಿಸಿತು. ಮಧ್ಯಾಹ್ನ ಒಂದು ಮೀಟರ್‌ನಷ್ಟು ಎತ್ತರದ ಅಲೆಗಳು ಕರಾವಳಿ ಭಾಗಕ್ಕೆ ನುಗ್ಗಬಹುದು ಎಂದು ಹೇಳಲಾಗಿತ್ತು. ಆದರೆ ಸಂಜೆಯಾದರೂ ಸುನಾಮಿ ಸಂಭವಿಸಿರುವುದು ವರದಿಯಾಗಿಲ್ಲ. ಸುನಾಮಿ ಸಾಧ್ಯತೆ ಇಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿತು.

Taiwan earthquake of 6.9 magnitude, Tsunami Warning Taken Back

ಇನ್ನು ಭಾನುವಾರ ತೈವಾನ್‌ನಲ್ಲಿ ಸಂಭವಿಸಿದ ಭೂಕಂಪದ ತೀವ್ರತೆಗೆ ಯುಲಿ ಪಟ್ಟಣದಲ್ಲಿ ಕೆಲ ಕಟ್ಟಡಗಳು ಉರುಳಿಬಿದ್ದಿವೆ ಎನ್ನಲಾಗಿದೆ. ರೈಲ್ವೆ ಸ್ಟೇಷನ್‌ನಲ್ಲಿ ನಿಂತಿದ್ದ ಟ್ರೈನ್‌ವೊಂದು ಆಟಿಕೆ ರೈಲಿನಂತೆ ಅಲುಗಾಡುತ್ತಿರುವ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಬಹುದು. ಅಷ್ಟರ ಮಟ್ಟಿಗೆ ಭೂಕಂಪದ ತೀವ್ರತೆ ಇತ್ತು.

ಇದೇ ಪ್ರದೇಶದಲ್ಲಿ ನಿನ್ನೆ ಶನಿವಾರ 6.6 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದಾದ ನಂತರ ಹಲವು ಬಾರಿ ಪಶ್ಚಾತ್ ಕಂಪನಗಳು ಸಂಭವಿಸುತ್ತಿವೆ. ಗುಡ್ಡಗಾಡು ಹೆಚ್ಚಿರುವ ಈ ಗ್ರಾಮೀಣ ಪ್ರದೇಶದಲ್ಲಿ ಜನಸಂಖ್ಯೆ ಕೂಡ ಕಡಿಮೆ ಇರುವುದರಿಂದ ಹೆಚ್ಚಿನ ಸಾವು ನೋವುಗಳಾಗಿಲ್ಲ.

ತೈವಾನ್‌ನ ರಾಜಧಾನಿ ಚೈನೀಸ್ ಥೈಪೆ ಮೊದಲಾದ ಸ್ಥಳಗಳಲ್ಲೂ ಭಾನುವಾರದ ಭೂಕಂಪದ ಅನುಭವವಾಗಿದೆ. ಚೀನಾದ ಫುಜಿಯಾನ್, ಗುವಾಂಗ್‌ಡೋಂಗ್, ಜಿಯಾಂಗ್‌ಸು, ಶಾಂಘೈ ಮೊದಲಾದ ಕರಾವಳಿ ಪ್ರದೇಶಗಳಲ್ಲೂ ಕಂಪನಗಳಾಗಿರುವುದು ವರದಿಯಾಗಿದೆ.

Taiwan earthquake of 6.9 magnitude, Tsunami Warning Taken Back

ಭೂಕಂಪ ಪ್ರದೇಶದಲ್ಲಿ ತೈವಾನ್
ಜಪಾನ್‌ನಂತೆ ತೈವಾನ್ ಕೂಡ ಭೂಕಂಪ ಪೀಡಿತ ಪ್ರದೇಶದಲ್ಲಿದೆ. ಎರಡು ಟೆಕ್ಟಾನಿಕ್ ಪ್ಲೇಟ್‌ಗಳು ಸೇರುವ ಜಾಗದಲ್ಲಿ ತೈವಾನ್ ದ್ವೀಪ ಇರುವುದರಿಂದ ಇಲ್ಲಿ ಆಗಾಗ್ಗೆ ಭೂಕಂಪಗಳಾಗುತ್ತಿರುತ್ತವೆ.

ಪಪುವಾ ನ್ಯೂಗಿನಿಯಾದಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪಪಪುವಾ ನ್ಯೂಗಿನಿಯಾದಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ

1999ರಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿ 2,400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇಲ್ಲಿಯವರೆಗೆ ಭೂಕಂಪದಿಂದ ಆದ ಅತಿ ಹೆಚ್ಚು ಹಾನಿ ಅದು.

(ಒನ್ಇಂಡಿಯಾ ಸುದ್ದಿ)

English summary
Taiwan country faced concecutive earthquake on Sunday, with intensity on ricter scale was 6.9. On saturday too earthquake of 6.6 magnitude had shaked earth on same region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X