ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹವಾಮಾನ ಬದಲಾವಣೆಯಿಂದ ಕೊರೊನಾ ದೂರವಾಗದು, ಮತ್ತೇನು ಮಾಡಬೇಕು?

|
Google Oneindia Kannada News

ಲಂಡನ್, ಮೇ 20: ಹೆಚ್ಚಿನ ಉಷ್ಣಾಂಶದಿಂದ ಕೊರೊನಾವೈರಸ್ ದೂರವಾಗುತ್ತೆ ಎನ್ನುವುದು ಸುಳ್ಳು ಎನ್ನುವುದು ಹಲವು ತಜ್ಞರ ಅಭಿಪ್ರಾಯವಾಗಿದೆ.ಚಳಿ, ಬಿಸಿಲು, ಮಳೆ ಯಾವುದೂ ಕೂಡ ಪರಿಣಾಮ ಬೀರುವುದಿಲ್ಲ.

ಹೆಚ್ಚಿನ ಪ್ರಮಾಣದಲ್ಲಿ ಜನರು ರೋಗ ನಿರೋಧಕ ಶಕ್ತಿ ವೃದ್ದಿಸಿಕೊಳ್ಳುವುದರಿಂದ ಮಾತ್ರ ಕೊರೊನಾ ವೈರಸ್ ಹರಡುವುದನ್ನು ತಡೆಯಬಹುದು. ಹವಾಮಾನ ಬದಲಾವಣೆಯಿಂದ ಇದನ್ನು ನಿಯಂತ್ರಿಸಲಾಗದು ಎಂದು ಹೊಸ ಅಧ್ಯಯನವೊಂದು ದೃಢಪಡಿಸಿದೆ.

ಬಿಸಿಲು, ಮಳೆ, ಚಳಿ ಕೊರೊನಾ ವೈರಸ್‌ ಮೇಲೆ ಪರಿಣಾಮ ಬೀರದುಬಿಸಿಲು, ಮಳೆ, ಚಳಿ ಕೊರೊನಾ ವೈರಸ್‌ ಮೇಲೆ ಪರಿಣಾಮ ಬೀರದು

ಕೊರೊನಾ ಸಾಂಕ್ರಾಮಿಕ ಹರಡುವಿಕೆಯ ಮೇಲೆ ಉಷ್ಣಾಂಶ ಹಾಗೂ ಶೀತ ವಾತಾವರಣ ಯಾವುದೇ ಪ್ರಭಾವ ಬೀರುವುದಿಲ್ಲ. ಕೋವಿಡ್ -19 ಸೋಂಕಿನ ಮೊದಲ ಹಂತ ಪ್ರಸಕ್ತ ಬೇಸಿಗೆ ಅವಧಿಯಲ್ಲಿ ಗಮನಾರ್ಹವಾಗಿ ತಡೆಯುತ್ತದೆ ಎಂಬ ಅಂಶ ತಮ್ಮ ಅಧ್ಯಯನದಲ್ಲಿ ದೃಢಪಟ್ಟಿಲ್ಲ ಎಂದು ಪ್ರಿನ್ಸ್ಟನ್ ವಿಶ್ವವಿದ್ಯಾಲಯ ಸಂಶೋಧಕರು ಹೇಳಿದ್ದಾರೆ.

ಹೆಚ್ಚಿನ ತಾಪಮಾನ ವೈರಸ್ ವೃದ್ಧಿಯನ್ನು ತಡೆಯುವುದಿಲ್ಲ

ಹೆಚ್ಚಿನ ತಾಪಮಾನ ವೈರಸ್ ವೃದ್ಧಿಯನ್ನು ತಡೆಯುವುದಿಲ್ಲ

ಕಠಿಣ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳದ ಹೊರತು ಹೆಚ್ಚಿನ ತಾಪಮಾನ ವೈರಸ್ ವೃದ್ಧಿಯನ್ನು ತಡೆಯುವುದಿಲ್ಲ ಎಂದು ಹೇಳುತ್ತದೆ. ಪ್ರಪಂಚದಾದ್ಯಂತ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜನರು ವೈರಸ್‌ಗೆ ಪ್ರಭಾವಕ್ಕೆ ಒಳಗಾಗುವ ಅಪಾಯವಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಹೆಚ್ಚಿನ ರೋಗ ನಿರೋಧಕ ಶಕ್ತಿ ಬೇಕು

ಹೆಚ್ಚಿನ ರೋಗ ನಿರೋಧಕ ಶಕ್ತಿ ಬೇಕು

ಹವಾಮಾನ ಬದಲಾವಣೆ ಸೋಂಕು ವೃದ್ಧಿಯ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ವೈರಸ್ ವಿರುದ್ಧ ಹೆಚ್ಚಿನ ರೋಗನಿರೋಧಕ ಶಕ್ತಿ ಹೊಂದಿದರೆ ಮಾತ್ರ ಹವಾಮಾನದ ಪರಿಣಾಮ ಜನಸಾಮಾನ್ಯರ ಮೇಲೆ ಇರುತ್ತದೆ ಎಂಬುದು ಸ್ಪಷ್ಟವಾಗಿದೆ. ಹವಾಮಾನ ಪರಿಸ್ಥಿತಿಗಳನ್ನು ಲೆಕ್ಕಿಸದೆ ವೈರಸ್ ವೇಗವಾಗಿ ಹರಡುತ್ತಿದೆ ಎಂದು ಸಂಶೋಧಕ ಡಾ.ರಾಚೆಲ್ ಬೆಕರ್ ಹೇಳಿದ್ದಾರೆ. ಸೋಂಕಿಗೆ ಇನ್ನೂ ಲಸಿಕೆ ಕಂಡುಹಿಡಿಯದ ಕಾರಣ ದೈಹಿಕ ಅಂತರ ಕಾಪಾಡುವುದರಿಂದ ಮಾತ್ರವೇ ವೈರಾಣು ಹರಡುವುದನ್ನು ತಡೆಯಲು ಸಾಧ್ಯ ಎಂದು ಹೇಳಿದ್ದಾರೆ.

ಕೊವಿಡ್ ಚಳಿಗಾಲ, ಮಳೆಗಾಲದಲ್ಲಿ ತೀವ್ರವಾಗುತ್ತದೆ ಎಂಬುದು ಸುಳ್ಳು

ಕೊವಿಡ್ ಚಳಿಗಾಲ, ಮಳೆಗಾಲದಲ್ಲಿ ತೀವ್ರವಾಗುತ್ತದೆ ಎಂಬುದು ಸುಳ್ಳು

ಕೊವಿಡ್ ಮಳೆಗಾಲ, ಚಳಿಗಾಲದಲ್ಲಿ ತೀವ್ರವಾಗುತ್ತದೆ, ಬೇಸಗೆಯಲ್ಲಿ ದುರ್ಬಲವಾಗುತ್ತದೆ ಎಂಬ ವಾದ ಚಾಲ್ತಿಯಲ್ಲಿತ್ತು. ಆದರೆ, ವಿಜ್ಞಾನಿಗಳ ಸಂಶೋಧನೆ ಈ ವಾದಕ್ಕೆ ಉಲ್ಟಾ ಫ‌ಲಿತಾಂಶ ನೀಡಿದೆ. ಮಳೆ, ಬಿಸಿಲು, ಚಳಿ- ಋತುವಿನ ಈ ಯಾವ ಬದಲಾವಣೆಗಳೂ ಕೊರೊನಾ ವೈರಾಣು ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದನ್ನು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಚಳಿ, ಮಳೆಗೆ ಕೊವಿಡ್ ಹೆಚ್ಚುತ್ತೆ ಅಂದುಕೊಂಡಿದ್ದೆವು. ಆದರೆ, ನಮಗೆ ಸಿಕ್ಕಿರುವ ಫ‌ಲಿತಾಂಶ ಅಚ್ಚರಿ ತಂದಿದೆ. ಮರು ಅಧ್ಯಯನ ನಡೆಸಿದಾಗಲೂ, ಇದೇ ಫ‌ಲಿತಾಂಶವೇ ಬಂದಿದೆ.

ಚಳಿ, ಮಳೆ, ಬಿಸಿಲು ಯಾವುದೇ ಪರಿಣಾಮ ಬೀರುವುದಿಲ್ಲ

ಚಳಿ, ಮಳೆ, ಬಿಸಿಲು ಯಾವುದೇ ಪರಿಣಾಮ ಬೀರುವುದಿಲ್ಲ

ಜಗತ್ತಿನ 144 ಭೌಗೋಳಿಕ ಪ್ರದೇಶಗಳ ಅಕ್ಷಾಂಶ, ತಾಪಮಾನ, ತೇವಾಂಶ, ಶಾಲೆ ಮುಚ್ಚುವಿಕೆ, ಸಾಮಾಜಿಕ ಅಂತರ- ಇತ್ಯಾದಿಗಳನ್ನು ಆಧರಿಸಿ ಸಂಶೋಧನೆ ನಡೆಸಲಾಗಿತ್ತು. ಮಾರ್ಚ್‌ 20 ಮತ್ತು ಮಾರ್ಚ್‌ 27- ಇವೆರಡು ದಿನಗಳಲ್ಲಿ ಪತ್ತೆಯಾದ ಪ್ರಕರಣಗಳನ್ನು ತಜ್ಞರು ಪರಿಗಣಿಸಿದ್ದರು. ಅದರಂತೆ, ಚಳಿ, ಮಳೆ, ಬಿಸಿಲುಗಳು ಕೊರೊನಾ ಹರಡುವಿಕೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿದುಬಂದಿದೆ.

English summary
New research has bolstered the hypothesis that summer’s heat, humidity, abundant sunshine and opportunities for people to get outside should combine to inhibit though certainly not halt the spread of the coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X