ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾವ್: ಸಂಭಾವ್ಯ ಕೊರೊನಾ ವೈರಸ್ ಲಸಿಕೆ ಮೊದಲ ಹಂತದಲ್ಲಿ ಪಾಸ್.!

|
Google Oneindia Kannada News

ವಿಶ್ವದಾದ್ಯಂತ 11 ಲಕ್ಷಕ್ಕೂ ಅಧಿಕ ಮಂದಿಗೆ ಮಾರಣಾಂತಿಕ ಕೊರೊನಾ ವೈರಸ್ ಸೋಂಕು ತಗುಲಿದೆ. 59 ಸಾವಿರಕ್ಕೂ ಹೆಚ್ಚು ಜನ ಕೋವಿಡ್-19 ನಿಂದ ಜೀವ ಕಳೆದುಕೊಂಡಿದ್ದಾರೆ. ದಿನೇ ದಿನೇ ಸೋಂಕಿತರ ಪ್ರಮಾಣ ಮತ್ತು ಸಾವಿನ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಲೇ ಇದೆ.

Recommended Video

7 ತಿಂಗಳ ಕೊರೊನಾ ಸೋಂಕಿತ ಮಗಿವಿನ ಜೊತೆ ವೈದ್ಯರು ಹೇಗೆ ನಡೆದುಕೊಂಡಿದ್ದಾರೆ ನೋಡಿ

ಹೀಗಿರುವಾಗಲೇ, ಒಂದು ಸಮಾಧಾನಕರ ಸುದ್ದಿ ಹೊರಬಿದ್ದಿದೆ. ಕೊರೊನಾ ವೈರಸ್ ವಿರುದ್ಧ ಹೋರಾಡಲು ಲಸಿಕೆ ಕಂಡುಹಿಡಿಯುವ ಕಾಯಕದಲ್ಲಿ ವಿಜ್ಞಾನಿಗಳು ತೊಡಗಿದ್ದು, ಮೊದಲ ಹಂತದಲ್ಲಿ ಪ್ರಗತಿ ಸಾಧಿಸಿದ್ದಾರೆ.

ಗುಡ್ ನ್ಯೂಸ್: ಕೊರೊನಾ ವೈರಸ್ ಗೆ ಲಸಿಕೆ, ಮನುಷ್ಯರ ಮೇಲೆ ಪ್ರಯೋಗ ಆರಂಭ!ಗುಡ್ ನ್ಯೂಸ್: ಕೊರೊನಾ ವೈರಸ್ ಗೆ ಲಸಿಕೆ, ಮನುಷ್ಯರ ಮೇಲೆ ಪ್ರಯೋಗ ಆರಂಭ!

ಸಂಭಾವ್ಯ ಕೊರೊನಾ ವೈರಸ್ ಲಸಿಕೆಯನ್ನು ಇಲಿಗಳ ಮೇಲೆ ವಿಜ್ಞಾನಿಗಳು ಪ್ರಯೋಗ ಮಾಡಿದ್ದು, ಅವುಗಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿರುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ವಿಜ್ಞಾನಿಗಳ ಗಮನಕ್ಕೆ ಬಂದ ಅಂಶ

ವಿಜ್ಞಾನಿಗಳ ಗಮನಕ್ಕೆ ಬಂದ ಅಂಶ

ಕೋವಿಡ್-19 ಗಾಗಿ ತಯಾರು ಮಾಡಲಾದ ಸಂಭಾವ್ಯ ಲಸಿಕೆಯನ್ನು ಇಲಿಗಳ ಮೇಲೆ ವಿಜ್ಞಾನಿಗಳು ಪ್ರಯೋಗ ಮಾಡಿದ್ದಾರೆ. ಬೆರಳು ತುದಿಯ ಗಾತ್ರದ ಪ್ಯಾಚ್ ಮೂಲಕ ಇಲಿಗಳಿಗೆ ಲಸಿಕೆ ಹಾಕಲಾಗಿದ್ದು, ಆ ಮೂಲಕ ವೈರಸ್ ಗಳು ತಟಸ್ಥಗೊಂಡಿರುವುದು ವಿಜ್ಞಾನಿಗಳ ಗಮನಕ್ಕೆ ಬಂದಿದೆ.

ಅಧ್ಯಯನದಲ್ಲಿ ಬಹಿರಂಗ

ಅಧ್ಯಯನದಲ್ಲಿ ಬಹಿರಂಗ

ಇಲಿಗಳ ಮೇಲೆ ಪಿಟ್ಸ್ ಬರ್ಗ್ ಕೊರೊನಾ ವೈರಸ್ ಲಸಿಕೆ ಪ್ರಯೋಗ ಮಾಡಿದ ಎರಡು ವಾರಗಳಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡುವ Antibodies ಉಲ್ಬಣಗೊಂಡವು ಎಂಬ ಅಂಶ ಈ-ಬಯೋಮೆಡಿಸಿನ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಬಹಿರಂಗವಾಗಿದೆ.

ಅಚ್ಚರಿ ತಂದ ಅಧ್ಯಯನ: ಕೊರೊನಾ ವೈರಸ್ ಗೆ BCG ಲಸಿಕೆ ರಾಮಬಾಣ?ಅಚ್ಚರಿ ತಂದ ಅಧ್ಯಯನ: ಕೊರೊನಾ ವೈರಸ್ ಗೆ BCG ಲಸಿಕೆ ರಾಮಬಾಣ?

ಸ್ಪೈಕ್ ಪ್ರೋಟೀನ್ ಅವಶ್ಯಕ

ಸ್ಪೈಕ್ ಪ್ರೋಟೀನ್ ಅವಶ್ಯಕ

''2003 ರಲ್ಲಿ ಸಾರ್ಸ್ ಮತ್ತು 2014 ರಲ್ಲಿ ಮರ್ಸ್ ನಿಂದ ನಮಗೆ ಅನುಭವ ಉಂಟಾಗಿದೆ. ಈ ಎರಡೂ ವೈರಸ್ ಗಳು ಈಗಿನ ಕೊರೊನಾ ವೈರಸ್ ಗೆ ನಿಕಟ ಸಂಬಂಧ ಹೊಂದಿದ್ದು, ಇವುಗಳ ವಿರುದ್ಧ ಇಮ್ಯೂನಿಟಿ ಹೊಂದಲು ಸ್ಪೈಕ್ ಪ್ರೋಟೀನ್ ಅವಶ್ಯಕ'' ಎಂದು ಯು.ಎಸ್ ನಲ್ಲಿನ ಪಿಟ್ಸ್ ಬರ್ಗ್ ವಿಶ್ವವಿದ್ಯಾನಿಲಯದ ಆಂಡ್ರಿಯಾ ಗ್ಯಾಂಬೊಟ್ಟೊ ಹೇಳಿದ್ದಾರೆ.

ಮೈಕ್ರೋ ನೀಡಲ್ ವಿಧಾನ

ಮೈಕ್ರೋ ನೀಡಲ್ ವಿಧಾನ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಲ್ಯಾಬ್ ನಿರ್ಮಿತ ವೈರಲ್ ಪ್ರೋಟೀನ್ ಗಳನ್ನು ಬಳಸಲಾಗಿದ್ದು, ಪ್ರಸ್ತುತ ಫ್ಲೂ ಲಸಿಕೆಗಳಂತೆಯೇ ಇವು ಸಹ ಕಾರ್ಯ ನಿರ್ವಹಿಸಲಿದೆ. ಲಸಿಕೆಯನ್ನು ಹಾಕಲು ಮೈಕ್ರೋ ನೀಡಲ್ ವಿಧಾನವನ್ನು ಅನುಸರಿಸಲಾಗಿದೆ. 400 ಸಣ್ಣ ಸೂಜಿಗಳನ್ನು ಹೊಂದಿರುವ ಬೆರಳು ತುದಿಯ ಗಾತ್ರದಷ್ಟು ಪ್ಯಾಚ್ ಇದಾಗಿದ್ದು, ಚರ್ಮದ ಮುಖಾಂತರ ಸ್ಪೈಕ್ ಪ್ರೋಟೀನ್ ಗಳನ್ನು ರವಾನಿಸಲಿದೆ. ಆ ಮೂಲಕ ರೋಗ ನಿರೋಧಕ ಕ್ರಿಯೆ ಪ್ರಬಲವಾಗಿರುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

ಮೊದಲ ಹಂತದಲ್ಲಿ ಪಾಸ್

ಮೊದಲ ಹಂತದಲ್ಲಿ ಪಾಸ್

ಸದ್ಯ ಈ ಲಸಿಕೆಯನ್ನು ಇಲಿಗಳ ಮೇಲೆ ಪ್ರಯೋಗ ಮಾಡಲಾಗಿದ್ದು, ಮೊದಲ ಹಂತದಲ್ಲಿ ವಿಜ್ಞಾನಿಗಳು ಪಾಸ್ ಆಗಿದ್ದಾರೆ. ಇದೇ ಪ್ರಯೋಗ ಮಾನವರ ಮೇಲೆ ಆಗಲು ಕನಿಷ್ಟ ಅಂದ್ರೂ ವರ್ಷ ಬೇಕು ಎನ್ನುತ್ತಾರೆ ವಿಜ್ಞಾನಿಗಳು. ಕ್ಲಿನಿಕಲ್ ಪ್ರಯೋಗಗಳು ತೆಗೆದುಕೊಳ್ಳುವ ಸಮಯದ ಬಗ್ಗೆ ನಿಖರವಾಗಿ ಹೇಳುವುದು ಕಷ್ಟ ಎನ್ನುವ ವಿಜ್ಞಾನಿಗಳು ಈಗಿನ ಪರಿಸ್ಥಿತಿಯಲ್ಲಿ ಪ್ರಯೋಗಗಳನ್ನು ವೇಗವಾಗಿ ಮುನ್ನಡೆಸುತ್ತಿದ್ದಾರೆ.

English summary
Latest Study says Potential Coronavirus vaccine generates immunity in Mice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X