Earthquake: ಅಫ್ಘಾನಿಸ್ತಾನ ಹಾಗೂ ಚೀನಾದಲ್ಲಿ ಪ್ರಬಲ ಭೂಕಂಪ
Earthquake: ಭಾರತದ ನೆರೆಹೊರೆಯ ರಾಷ್ಟ್ರಗಳಾದ ಅಫ್ಘಾನಿಸ್ತಾನ ಹಾಗೂ ಚೀನಾದಲ್ಲಿ ಇಂದು (ಮೇ 16) ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪನಕ್ಕೆ ಜನರು ತತ್ತರಿಸಿ ಹೋಗಿದ್ದು, ದಿಕ್ಕಪಾಲಾಗಿ ಓಡಿ ಹೋಗಿರುವ ಘಟನೆ ನಡೆದಿದೆ. ಆದರೆ, ಸದ್ಯ ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ತಿಳಿದುಬಂದಿದೆ.
ಚೀನಾದ ಬೌಷಾನ್ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ 6.30ರ ಸುಮಾರಿಗೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.6 ರಷ್ಟು ಕಂಪನ ದಾಖಲಾಗಿದೆ. ಭೂಕಂಪದ ಕೇಂದ್ರ ಬಿಂದು ಭೂಮಿಯಿಂದ 10 ಕಿಲೋ ಮೀಟರ್ ಆಳದಲ್ಲಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಮಾಪನ ಕೇಂದ್ರ ತಿಳಿಸಿದೆ.

ಮತ್ತೊಂದೆಡೆ ಆಫ್ಘಾನಿಸ್ತಾನದಲ್ಲಿಯೂ ಗುರುವಾರ ಮಧ್ಯರಾತ್ರಿ 12.47ರ ವೇಳೆಗೆ ಲಘು ಭೂಕಂಪ ಸಂಭವಿಸಿದೆ. ಇಲ್ಲಿಯೂ ಯಾವುದೇ ಸಾವು, ನೋವುಗಳು, ಆಸ್ತಿಗಳು ಹಾನಿಯಾಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ, ಭಾರತದ ಅಕ್ಕಪಕ್ಕದ ದೇಶಗಳಿಗೆ ಭೂಕಂಪದ ಆತಂಕ ಶುರುವಾಗಿದೆ. ಈಗಾಗಲೇ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ದೇಶಗಳು ಪ್ರಕೃತಿ ವಿಕೋಪದ ಹೊಡೆತಕ್ಕೆ ಅಕ್ಷರಸಃ ನಲುಗಿಹೋಗಿವೆ.
ಜಾಗತಿಕ ಮಟ್ಟದಲ್ಲಿ ಜನವರಿಯಿಂದ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಭಾರತದ ದೆಹಲಿ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಭೂಕಂಪನದ ಅನುಭವ ಆಗಿದೆ.
ಅಷ್ಟೇ ಅಲ್ಲದೆ ಏಷ್ಯಾ, ಅಮೆರಿಕ ಮತ್ತು ಇತರ ಖಂಡಗಳ ವಿವಿಧ ದೇಶಗಳಲ್ಲಿಯೂ ಭೂಕಂಪಗಳು ಸಂಭವಿಸಿವೆ ಮತ್ತು ಈಗ ಮ್ಯಾನ್ಮಾರ್ ಸೇರಿದಂತೆ ಭಾರತದಲ್ಲಿ ಮತ್ತೆ ಭೂಕಂಪನದ ಅನುಭವವಾಗಿದೆ. ಆದ್ದರಿಂದ ಭೂಕಂಪದ ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದು, ಬಾಬಾ ವೆಂಗಾ ಅವರ ಭವಿಷ್ಯವಾಣಿ ನಿಜವಾಗುತ್ತಿದೆ ಎಂದು ಹಲವರರಲ್ಲಿ ಆತಂಕ ಶುರುವಾಗಿದೆ.
ಡಿಸೆಂಬರ್ 26, 2004ರಂದು ಹಿಂದೂ ಮಹಾಸಾಗರದಲ್ಲಿ ಸಂಭವಿಸಿದ ಭೂಕಂಪವು ಭಾರಿ ಸುನಾಮಿ ಅಲೆಗಳನ್ನು ಸೃಷ್ಟಿಸಿತು ಮತ್ತು ಭಾರತ ಸೇರಿದಂತೆ ಹಲವು ದೇಶಗಳಲ್ಲಿ 200,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ಭೂಕಂಪದ ಪ್ರಮಾಣವು ರಿಕ್ಟರ್ ಮಾಪಕದಲ್ಲಿ 9.2 ಮತ್ತು 9.3 ರ ನಡುವೆ ಇತ್ತು ಮತ್ತು ಇದನ್ನು 21ನೇ ಶತಮಾನದ ಅತ್ಯಂತ ವಿನಾಶಕಾರಿ ಭೂಕಂಪವೆಂದು ಪರಿಗಣಿಸಲಾಗಿದೆ.












Click it and Unblock the Notifications