ಶ್ರೀಲಂಕಾ ಸ್ಫೋಟ: ಮೂವರು ಮಹಿಳೆಯರು ಸೇರಿ ಆರು ಶಂಕಿತರ ಫೋಟೋ ಬಿಡುಗಡೆ

ಶ್ರೀಲಂಕಾ ಉಗ್ರ ದಾಳಿಗೆ ಸಂಬಂಧಿಸಿದಂತೆ ಆರು ಶಂಕಿತರ ಫೋಟೋ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಮೂವರು ಮಹಿಳೆಯರಿದ್ದಾರೆ. ಇನ್ನೂರೈವತ್ತು ಮಂದಿ ಸಾವಿಗೆ ಕಾರಣವಾದ ಭೀಕರ ದಾಳಿಗೆ ಕಾರಣ ಆದವರಿಗಾಗಿ ಬೇಟೆ ತೀವ್ರವಾಗಿದೆ. ಈ ವರೆಗೆ ಪೊಲೀಸರು ಎಪ್ಪತ್ತಾರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಒಂಬತ್ತು ಆತ್ಮಹತ್ಯಾ ಬಾಂಬರ್ ಗಳು ಸ್ಥಳೀಯ ಸಂಘಟನೆ ನ್ಯಾಷನಲ್ ತೌಹಿದ್ ಜಮಾತ್ ಗೆ ಸೇರಿದವರು ಎನ್ನಲಾಗಿದೆ.

ಪೊಲೀಸರು ಗುರುವಾರ ರಾತ್ರಿ ಮೂವರು ಪುರುಷರು, ಮಹಿಳೆಯರ ಭಾವಚಿತ್ರ ಬಿಡುಗಡೆ ಮಾಡಿದ್ದಾರೆ. ಜತೆಗೆ ಅವರ ಹೆಸರನ್ನು ಕೂಡ ತಿಳಿಸಲಾಗಿದೆ. ಅವರ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಕೂಡಲೇ ಗಮನಕ್ಕೆ ತರುವಂತೆ ಸಾರ್ವಜನಿಕರಿಗೆ ಮನವಿ ಮಾಡಿಕೊಳ್ಳಲಾಗಿದೆ. ಈಗ ಬಂಧಿಸಲಾಗಿರುವವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಬಂಧಿತರಲ್ಲಿ ಹಲವರು ನ್ಯಾಷನಲ್ ತೌಹಿದ್ ಜಮಾತ್ ಜತೆಗೆ ನಂಟು ಇರುವಂಥವರು. ಆದರೆ ಆ ಸಂಘಟನೆಯು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ದೇಶದಾದ್ಯಂತ ಐದು ಸಾವಿರಕ್ಕೂ ಹೆಚ್ಚು ಸೇನಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಈ ಮಧ್ಯೆ ಪುಗೋಡದ ಮ್ಯಾಜಿಸ್ಟ್ರೇಟ್ ಕೋರ್ಟ್ ಹಿಂಭಾಗ ಸಣ್ಣ ಪ್ರಮಾಣದ ಸ್ಫೋಟವೊಂದು ಸಂಭವಿಸಿದೆ.

Sri Lanka releases pictures of 6 suspects, including 3 women

ಕಸದ ರಾಶಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದು, ಯಾವುದೇ ಗಾಯಗಳಾಗಿಲ್ಲ. ಆದರೆ ಈ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರತಿ ರಾತ್ರಿ ಹತ್ತು ಗಂಟೆಗೆ ಕರ್ಫ್ಯೂ ಹೇರಲಾಗುತ್ತಿದೆ. ನಾಕಾಬಂದಿ ಹಾಕಿ, ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸನ್ನಿವೇಶ ಹತೋಟಿಗೆ ಬರುವ ತನಕ ಯಾವುದೇ ಚರ್ಚ್ ನಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡದಿರಲು ತೀರ್ಮಾನ ಕೈಗೊಳ್ಳಲಾಗಿದೆ.

ಗುಪ್ತಚರ ಇಲಾಖೆ ವೈಫಲ್ಯದಿಂದಲೇ ಇಂಥ ದೊಡ್ಡ ಅನಾಹುತ ಸಂಭವಿಸಿತು ಎಂದು ಶ್ರೀಲಂಕಾ ಸರಕಾರ ಒಪ್ಪಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+