ಎಲಾನ್ ಮಸ್ಕ್ SpaceX ನಿಂದ ಇಂದು ಶಕ್ತಿಶಾಲಿ ರಾಕೆಟ್ ಉಡ್ಡಯನ

ಮಿಯಾಮಿ(ಅಮೆರಿಕ), ಫೆಬ್ರವರಿ 06: ಖ್ಯಾತ ಉದ್ಯಮಿ, ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ (SpaceX) ಕಂಪೆನಿ ಇಂದು ವಿಶ್ವದ ಅತ್ಯಂತ ಶಕ್ತಿಯುತ ರಾಕೆಟ್ ವೊಂದನ್ನು ಉಡ್ಡಯನ ಮಾಡುತ್ತಿದೆ.

ಈ ಫಾಲ್ಕನ್ ಹೆವಿ ರಾಕೆಟ್ 20 ಮಹಡಿ ಎತ್ತರದ ಕಟ್ಟಡದಷ್ಟೇ ಎತ್ತರವಿದೆ. ಒಟ್ಟು 27 ಇಂಜಿನ್ ಗಳನ್ನು ಈ ರಾಕೆಟ್ ನಲ್ಲಿ ಜೋಡಿಸಲಾಗಿದೆ.

ಖಾಸಗಿ ಕಂಪೆನಿಯೊಂದು ಉಡ್ಡಯನ ಮಾಡುತ್ತಿರುವ ಕಾರಣ ಇದು ಅತ್ಯಂತ ಪ್ರಮುಖವಾದ್ದು ಎನ್ನಿಸಿದೆ. ಭವಿಷ್ಯದಲ್ಲಿ ಚಂದ್ರ ಮತ್ತು ಮಂಗಳ ಗ್ರಹವನ್ನೂ ಮುಟ್ಟುವ ಉದ್ದೇಶ ಈ ಉಡ್ಡಯನದ ಹಿಂದಿದೆ.

SpaceX's world's most powerful rocket will be launching today

ಇಂದು ಮಧ್ಯಾಹ್ನ 1:30 ಕ್ಕೆ ಈ ರಾಕೆಟ್ ಫ್ಲುರಿಡಾದ ಕೇಪ್ ಕ್ಯಾನವೆರಲ್ ನಿಂದ ಉಡ್ಡಯನಗೊಳ್ಳಲಿದ್ದು, ಬಾಹ್ಯಾಕಾಶ ಕ್ಷೇತ್ರದ 'ಗೇಮ್ ಚೇಂಜರ್' ಎಂದೇ ಇದನ್ನು ಕರೆಯಲಾಗುತ್ತಿದೆ. ಸದ್ಯಕ್ಕೆ ಇದೊಂದು ಮಾನವರಹಿತ ರಾಕೆಟ್ ಆಗಿರಲಿದ್ದು, ಈ ರಾಕೆಟ್ ನಲ್ಲಿ ಎಲಾನ್ ಮಸ್ಕ್ ಅವರ ಸಂಸ್ಥೆಯೇ ನಿರ್ಮಿಸಿದ ಚೆರ್ರಿ ಕೆಂಪು ಬಣ್ಣದ ಟೆಸ್ಲಾ ಕಾರನ್ನೂ ಕಳಿಸಲಾಗುತ್ತಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+