ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳ ಗ್ರಹ ಮಾದರಿ ರಾಕೆಟ್ ಭೂಸ್ಪರ್ಶದ ವೇಳೆ ಸ್ಫೋಟ

|
Google Oneindia Kannada News

ಟೆಕ್ಸಾಸ್, ಫೆಬ್ರವರಿ 3: ಮಂಗಳ ಗ್ರಹದ ಸಂಚಾರಕ್ಕಾಗಿ ವಿನ್ಯಾಸಗೊಳಿಸಲಾಗಿದ್ದ ಅಮೆರಿಕದ ಸ್ಪೇಸ್‌ಎಕ್ಸ್‌ನ ಮಾದರಿ ರಾಕೆಟ್ ಪರೀಕ್ಷಾರ್ಥ ಪ್ರಯೋಗದ ವೇಳೆ ಭೂಸ್ಪರ್ಶವಾಗುವಾಗ ಸ್ಫೋಟಗೊಂಡಿದೆ. ಭೂಮಿಯ ಕಕ್ಷೆ, ಚಂದ್ರ, ಮಂಗಳ ಗ್ರಹ ಹಾಗೂ ಅದರಾಚೆಗೆ ಸಿಬ್ಬಂದಿ ಮತ್ತು ಸರಕು ಎರಡನ್ನೂ ಸಾಗಿಸಲು ಅನುಕೂಲಕರವಾಗುವಂತೆ ವಿನ್ಯಾಸಗೊಳಿಸಲಾಗಿದ್ದ ಸಂಪೂರ್ಣ ಮರುಬಳಕೆಯ ಸಾರಿಗೆ ವ್ಯವಸ್ಥೆ ಇದಾಗಿತ್ತು ಸ್ಪೇಸ್ ಎಕ್ಸ್ ತಿಳಿಸಿದೆ.

ಸ್ಟಾರ್‌ಶಿಪ್‌ ನೌಕೆಯ ಮಾದರಿ ಇದ್ದಾಗಿದ್ದು ಮಂಗಳ ಗ್ರಹಕ್ಕೆ ಪರೀಕ್ಷಾರ್ಥ ಪ್ರಯೋಗವಾಗಿ ಉಡಾವಣೆ ಮಾಡಲಾಗಿತ್ತು. ಅದತೆ ಅದು ನೆಲಕ್ಕೆ ಸ್ಪರ್ಶಿಸುವ ಸಂದರ್ಭದಲ್ಲಿ ಸ್ಫೋಟಗೊಂಡಿದೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಪರೀಕ್ಷಾರ್ಥ ಹಾರಾಟವೂ ಇದೇ ರೀತಿ ಸ್ಫೋಟದ ಅಂತ್ಯ ಕಂಡಿತ್ತು.

ನಾಸಾದ ಹಂಗಾಮಿ ಸಿಬ್ಬಂದಿ ಮುಖ್ಯಸ್ಥೆಯಾಗಿ ಭಾರತ ಮೂಲದ ಭವ್ಯಾ ಲಾಲ್ ನೇಮಕನಾಸಾದ ಹಂಗಾಮಿ ಸಿಬ್ಬಂದಿ ಮುಖ್ಯಸ್ಥೆಯಾಗಿ ಭಾರತ ಮೂಲದ ಭವ್ಯಾ ಲಾಲ್ ನೇಮಕ

ರಾಕೆಟ್ ಇಳಿಯುವ ಸಂದರ್ಭದಲ್ಲಿ ಅದರ ಮೂರು ಎಂಜಿನ್‌ಗಳು ಹೊತ್ತಿಕೊಳ್ಳುವ, ಆರುವ ಮತ್ತು ಪುನಃ ಚಾಲೂ ಆಗುವಂತೆ ಯೋಜಿಸಲಾಗಿತ್ತು. ಆದರೆ ಅದು ಉಡಾವಣಾ ಕೇಂದ್ರಕ್ಕೆ ಮರಳಿ ತಲುಪುವಾಗ ಬೆಂಕಿಯ ಉಂಡೆಗಳಾಗಿ ಸ್ಫೋಟಗೊಂಡಿದೆ. ನೇರ ಪ್ರಸಾರದಲ್ಲಿ ಈ ಘಟನೆ ದಾಖಲಾಗಿದೆ. ಮುಂದೆ ಓದಿ.

ಸುರಕ್ಷತಾ ನಿಯಮ ಅಡ್ಡಿ

ಸುರಕ್ಷತಾ ನಿಯಮ ಅಡ್ಡಿ

160 ಅಡಿ ಉದ್ದದ ರಾಕೆಟ್ ಮಾದರಿಯು ಕೆಲವು ವಾರಗಳ ಹಿಂದೆಯೇ ಪರೀಕ್ಷಾರ್ಥ ಹಾರಾಟ ನಡೆಸಬೇಕಿತ್ತು. ಆದರೆ ಈ ಪರೀಕ್ಷೆಯು ಸಾರ್ವಜನಿಕ ಸುರಕ್ಷತೆಗೆ ಹಾನಿಯುಂಟುಮಾಡಬಹುದು ಎಂಬ ಕಾರಣಕ್ಕೆ ದಕ್ಷಿಣ ಟೆಕ್ಸಾಸ್‌ನಲ್ಲಿನ ಪರೀಕ್ಷಾ ಕೇಂದ್ರದಲ್ಲಿನ ಕಾರ್ಯಾಚರಣೆಗೆ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಅನುಮತಿ ನೀಡಿರಲಿಲ್ಲ.

ಬಜೆಟ್ 2021: ಭಾರತೀಯ ಬಾಹ್ಯಾಕಾಶ ಇಲಾಖೆಗೆ ಭರ್ಜರಿ ಅನುದಾನಬಜೆಟ್ 2021: ಭಾರತೀಯ ಬಾಹ್ಯಾಕಾಶ ಇಲಾಖೆಗೆ ಭರ್ಜರಿ ಅನುದಾನ

10 ಕಿಮೀ ಹಾರಿದ್ದ ರಾಕೆಟ್

ಸಾರ್ವಜನಿಕ ಸುರಕ್ಷತಾ ನಿಯಮಗಳನ್ನು ಪಾಲಿಸುವ ಸೂಕ್ತ ಕ್ರಮಗಳನ್ನು ತೆಗೆದುಕೊಂಡ ಬಳಿಕ ಪರೀಕ್ಷೆಗೆ ಅನುಮತಿ ನೀಡಲಾಗಿತ್ತು. ಸುಮಾರು 10 ಕಿಮೀ ಎತ್ತರ ಸಾಗಿದ್ದ ರಾಕೆಟ್ ಅಲ್ಲಿಂದ ತಿರುಗಿ ಭೂಮಿಯತ್ತ ಮರಳುವಾಗ ಸುರಕ್ಷಿತವಾಗಿ ಭೂಸ್ಪರ್ಶ ಮಾಡುವಲ್ಲಿ ವಿಫಲವಾಗಿದೆ.

143 ಉಪಗ್ರಹಗಳ ಉಡಾವಣೆ

143 ಉಪಗ್ರಹಗಳ ಉಡಾವಣೆ

ಖ್ಯಾತ ಉದ್ಯಮಿ ಎಲೋನ್ ಮಸ್ಕ್ ಅವರ ಮಾಲೀಕತ್ವದ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಪೇಸ್ ಎಕ್ಸ್, ಕಳೆದ ಭಾನುವಾರ ಏಕಕಾಲಕ್ಕೆ 143 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಭಾರತದ ಇಸ್ರೋ ನಿರ್ಮಿಸಿದ್ದ ವಿಶ್ವದಾಖಲೆಯನ್ನು ಮುರಿದಿತ್ತು. ಭಾರತದ ಇಸ್ರೋ 104 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು.

ಜಾಗತಿಕ ಬ್ರಾಡ್‌ಬ್ಯಾಂಡ್

ಜಾಗತಿಕ ಬ್ರಾಡ್‌ಬ್ಯಾಂಡ್

143 ಉಪಗ್ರಹಗಳು ವಾಣಿಜ್ಯ ಹಾಗೂ ಸರ್ಕಾರದ ಕ್ಯೂಬ್‌ಸ್ಯಾಟ್‌ಗಳು, ಮೈಕ್ರೋಸ್ಯಾಟಲೈಟ್‌ಗಳು, ಕಕ್ಷಾ ವರ್ಗಾವಣೆ ವಾಹನಗಳು ಮತ್ತು 10 ಸ್ಟಾರ್‌ಲಿಂಕ್ ಉಪಗ್ರಹಗಳನ್ನು ಒಳಗೊಂಡಿದ್ದವು. ಈ ಉಪಗ್ರಹಗಳ ಮೂಲಕ 2021ರ ಅಂತ್ಯದೊಳಗೆ ಜಾಗತಿಕ ಬ್ರಾಡ್‌ಬ್ಯಾಂಡ್ ಅಂತರ್ಜಾಲ ಸಂಪರ್ಕ ಒದಗಿಸುವ ಗುರಿಯನ್ನು ಸ್ಪೇಸ್‌ಎಕ್ಸ್ ಹೊಂದಿದೆ.

English summary
SpaceX's Starship Mars prototype rocket exploded while attempting to land back to earth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X