3ನೇ ಮಹಾಯುದ್ಧ: ಪುಟಿನ್ ರಕ್ಷಣೆಗಾಗಿ ‘ವಿಜಯ ದಿವಸ’ ಕ್ಯಾನ್ಸಲ್?
ಮಾಸ್ಕೋ: ರಷ್ಯಾ ಪಾಲಿಗೆ ಆ ದಿನ ಎಂದೂ ಮರೆಯಲಾಗದು. ರಷ್ಯನ್ನರ ಪಾಲಿಗೆ ಎದೆಯುಬ್ಬಿಸಿ ಹೇಳುವ ಸಂದರ್ಭ ಅದು. ಪ್ರತಿವರ್ಷ ಆ ದಿನವನ್ನ ಅದ್ಧೂರಿಯಾಗಿ ಆಚರಿಸುತ್ತಿದ್ದ ರಷ್ಯನ್ನರು ಈ ಬಾರಿ ಭಯದಲ್ಲಿಯೇ ವಿಜಯ ದಿವಸ ರದ್ದು ಮಾಡಬೇಕಾಗಿದೆ. ಅಂದಹಾಗೆ ಇದು ರಷ್ಯಾ ಅಧ್ಯಕ್ಷರ ಜೀವ ರಕ್ಷಣೆಗೆ ಸೇನೆ ಯೋಜಿಸಿದ ತಂತ್ರ ಎನ್ನಲಾಗಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಅದು 1945 ಮೇ 8, ನಾಜಿ ಜರ್ಮನಿ ಸಂಪೂರ್ಣ ನಾಶವಾಗಿ ರಷ್ಯಾ ಮುಂದೆ ಮಂಡಿ ಊರಿತ್ತು. ಸೋವಿಯತ್ ರಷ್ಯಾ ಹಿಟ್ಲರ್ ಸೇನೆ ಬಗ್ಗುಬಡಿದು ಸಂಭ್ರಮಿಸಿದ ದಿನವದು. ಹೀಗೆ ನಾಜಿ ಜರ್ಮನಿ ವಿರುದ್ಧ ದಿಗ್ವಿಜಯದ ನೆನಪಿಗೆ 'ವಿಜಯ ದಿವಸ' ಆಚರಿಸುತ್ತೆ ರಷ್ಯಾ. ಆದರೆ ಈ ಬಾರಿ 'ವಿಜಯ ದಿವಸ' ಆಚರಣೆಗೂ ಕಲ್ಲು ಬಿದ್ದಿದೆ. ರಷ್ಯಾ ಅಧ್ಯಕ್ಷ ಪುಟಿನ್ ಸರ್ಕಾರಿ ನಿವಾಸದ ಮೇಲೆ ಡ್ರೋನ್ ಮೂಲಕ ನಡೆಸಲಾಗಿರುವ ಬಾಂಬ್ ದಾಳಿ ಎಲ್ಲವನ್ನೂ ಈಗ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ. ಹಾಗಾದರೆ 'ವಿಜಯ ದಿವಸ' ರದ್ದಾಗೋದು ಪಕ್ಕಾನಾ? ಮುಂದೆ ತಿಳಿಯಿರಿ.

ರಷ್ಯಾ ಅಧ್ಯಕ್ಷರ ಜೀವ ಅಪಾಯದಲ್ಲಿ?
ಮೊನ್ನೆ ಮೊನ್ನೆ ರಷ್ಯಾ ಅಧ್ಯಕ್ಷ ಪುಟಿನ್ ಅವರ ಕ್ರೆಮ್ಲಿನ್ ನಿವಾಸದ ಮೇಲೆ ನಡೆದಿರುವ ದಾಳಿ ಎಂತಹವರನ್ನೂ ಬೆಚ್ಚಿ ಬೀಳುವಂತೆ ಮಾಡುತ್ತದೆ. ಎಲ್ಲಾ ಭದ್ರತೆಯನ್ನೂ ಸೀಳಿ, ಒಳ ನುಸುಳಿದ 2 ಡ್ರೋನ್‌ಗಳು ಪುಟಿನ್ ನಿವಾಸದ ಮೇಲೆ ಆ ರೀತಿ ಭೀಕರ ದಾಳಿ ಮಾಡಲು ಹೇಗೆ ಸಾಧ್ಯ? ಹೀಗೆ ಸಾವಿರಾರು ಪ್ರಶ್ನೆಗಳು ರಷ್ಯಾ ಸೇನೆ ಮತ್ತು ರಷ್ಯನ್ನರ ಕಾಡಿವೆ. ಮತ್ತೊಂದು ಕಡೆ 'ವಿಜಯ ದಿವಸ' ಆಚರಣೆ ರದ್ದು ಮಾಡುವ ಬಗ್ಗೆ ರಷ್ಯಾ ಸೇನೆ ಯೋಚಿಸುತ್ತಿದೆ ಎನ್ನಲಾಗುತ್ತಿದೆ. ಈ ಮೂಲಕ ಪುಟಿನ್ ರಕ್ಷಣೆಗೆ ಹೊಸ ರಣತಂತ್ರ ಸಿದ್ಧವಾಗಿದೆ.
ಸಿಂಪಲ್ ಆಗಿ ನಡೆಯುತ್ತಾ ಆಚರಣೆ?
ನಮ್ಮಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ನಡೆದಷ್ಟೆ ಅದ್ಧೂರಿಯಾಗಿ ರಷ್ಯಾ ವಿಜಯ ದಿವಸ ಆಚರಿಸುತ್ತದೆ. ಆದರೆ ಈ ಬಾರಿ ಭದ್ರತೆ ಕಾರಣಗಳಿಗೆ ವ್ಲಾದಿಮಿರ್ ಪುಟಿನ್ ಅವರನ್ನ ಹೊರಗೆ ಕರೆಸಲು ರಷ್ಯಾ ಸೇನೆ ಇಷ್ಟಪಡುತ್ತಿಲ್ಲ. ಮತ್ತೊಂದ್ಕಡೆ ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಭಾರಿ ಪ್ರಮಾಣದ ಜನರನ್ನು ರಷ್ಯಾ ರಾಜಧಾನಿ ಮಾಸ್ಕೋಗೆ ಕರೆತಂದು ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂಬ ಚರ್ಚೆ ಸೇನಾ ಮಟ್ಟದಲ್ಲಿ ಶುರುವಾಗಿದೆ. ಹೀಗಾಗಿ ಈ ಬಾರಿ ರಷ್ಯಾ 'ವಿಜಯ ದಿವಸ' ಕ್ಯಾನ್ಸಲ್ ಮಾಡೋದು ಬಹುತೇಕ ಪಕ್ಕಾ ಎಂಬ ವದಂತಿ ಓಡಾಡುತ್ತಿದೆ.

ಗೆದ್ದಿದ್ದು ಮೇ 8, ಆಚರಣೆ ಮೇ 9ಕ್ಕೆ!
ಹೌದು ನಾಜಿ ಜರ್ಮನಿ ವಿರುದ್ಧ ರಷ್ಯಾ ಸೇನೆ ಐತಿಹಾಸಿಕ ಜಯ ಸಾಧಿಸಿದ್ದು 1945ರ ಮೇ 8ರಂದು. ಆದ್ರೆ ರಷ್ಯಾದಲ್ಲಿ ಆಚರಣೆ ನಡೆಯುವುದು ಮೇ 9ಕ್ಕೆ! ಇದಕ್ಕೆ ಕಾರಣ ರಷ್ಯಾದ ಸಮಯ. ಅಂದಹಾಗೆ ನಾಜಿ ಜರ್ಮನಿ ರಷ್ಯಾ ಎದುರು ಶರಣಾಗಿ ಮಂಡಿಯೂರಿದ ಸಮಯ ಮೇ 8, ಆದರೆ ಅದೇ ಹೊತ್ತಲ್ಲಿ ರಷ್ಯಾ ಟೈಮಿಂಗ್ಸ್ ಮೇ 9ನ್ನು ತಲುಪಿತ್ತು. ಈ ಕಾರಣಕ್ಕೆ ರಷ್ಯಾದಲ್ಲಿ ನಾಜಿ ಜರ್ಮನಿ ವಿರುದ್ಧದ ಗೆಲುವಿನ 'ವಿಜಯ ದಿವಸ' ಆಚರಣೆಯನ್ನು ಮೇ 9ಕ್ಕೆ ಆಚರಿಸುತ್ತಾ ಬರಲಾಗುತ್ತಿದೆ.
ಒಟ್ನಲ್ಲಿ ರಷ್ಯಾದಲ್ಲಿ ಭಯ ಆವರಿಸಿದೆ, ಅತ್ತ ಗಡಿ ಭಾಗದಲ್ಲಿ ಉಕ್ರೇನ್ ಕೂಡ ನಿರಂತರವಾಗಿ ದಾಳಿ ನಡೆಸುತ್ತಿದೆ. ಈ ನಡುವೆ ರಷ್ಯಾ ಒಳಗೇ ನುಗ್ಗಿ ಪುಟಿನ್ ಹತ್ಯೆಗೂ ಪ್ರಯತ್ನ ಪಟ್ಟಿದ್ದಾರೆ ಆಗಂತುಕರು. ಇನ್ನೊಂದ್ಕಡೆ 'ವಿಜಯ ದಿವಸ' ಆಚರಣೆ ವೇಳೆ ದಾಳಿ ನಡೆಯುವ ಭೀತಿಯೂ ಸೃಷ್ಟಿಯಾಗಿದೆ. ಹೀಗಾಗಿ 'ವಿಜಯ ದಿವಸ' ಆಚರಣೆಯನ್ನೂ ಕ್ಯಾನ್ಸಲ್ ಮಾಡಲು ರಷ್ಯಾ ಸೇನಾಧಿಕಾರಿಗಳು ಚಿಂತಿಸುತ್ತಿದ್ದಾರೆ. ನಾಳೆ ಬಿಟ್ಟು ನಾಡಿದ್ದು ಪಕ್ಕಾ ಮಾಹಿತಿ ಸಿಗಲಿದೆ. ಆದ್ರೆ ರಷ್ಯಾದಲ್ಲಿ ಇಂತಹ ಸೂಕ್ಷ್ಮ ಪರಿಸ್ಥಿತಿ ಸೃಷ್ಟಿಯಾಗಿರುವುದು 3 ದಶಕಗಳ ಬಳಿಕ ಇದೇ ಮೊದಲು ಎನ್ನಬಹುದು.












Click it and Unblock the Notifications