Somaliland: ಇಸ್ರೇಲ್ ನಿರ್ಧಾರಕ್ಕೆ ಅಮೆರಿಕದ ಭಾರಿ ವಿರೋಧ, ದೋಸ್ತಿಗಳ ನಡುವೆ ತಿಕ್ಕಾಟ ಶುರು?
ವಾಷಿಂಗ್ಟನ್: ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಲ್ಲಿ ಹೊಸ ರಾಜತಾಂತ್ರಿಕ ತಿಕ್ಕಾಟ ಶುರುವಾಗಿದ್ದು, ಇಸ್ರೇಲ್ ಕೈಗೊಂಡಿರುವ ನಿರ್ಧಾರಕ್ಕೆ ಅಮೆರಿಕ ವಿರೋಧ ವ್ಯಕ್ತಪಡಿಸಿದೆ. ಸೊಮಾಲಿಲ್ಯಾಂಡ್ಗೆ ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರ ಎಂಬ ಸ್ಥಾನಮಾನ ನೀಡಲು ಇಸ್ರೇಲ್ ಮುಂದಾಗಿದೆ. ಈ ನಿರ್ಧಾರ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಆಫ್ರಿಕಾ ದೇಶಗಳಿಂದ ಕೂಡ ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ ಆಫ್ರಿಕಾ ಖಂಡವನ್ನು ಒಡೆಯುವ ಹುನ್ನಾರ ಇದಾಗಿದೆ ಎಂಬ ಆರೋಪವನ್ನು ಮಾಡುತ್ತಿವೆ ಆಫ್ರಿಕಾದ ರಾಷ್ಟ್ರಗಳು. ಇಷ್ಟೆಲ್ಲದರ ನಡುವೆ ಅಮೆರಿಕ ಈ ವಿವಾದಾತ್ಮಕ ನಿರ್ಧಾರಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.
ಸೊಮಾಲಿಲ್ಯಾಂಡ್ ತಿಕ್ಕಾಟಕ್ಕೆ ಬಹುದೊಡ್ಡ ಇತಿಹಾಸವೇ ಇದ್ದು, ಉತ್ತರ ಸೊಮಾಲಿಯಾದ ಸ್ವ-ಆಡಳಿತ ಪ್ರದೇಶ ಸೊಮಾಲಿಲ್ಯಾಂಡ್ 1991ರ ಸಮಯದಲ್ಲೇ ಸ್ವಾತಂತ್ರ್ಯ ಘೋಷಣೆ ಮಾಡಿಕೊಂಡು ತನ್ನದೇ ಕರೆನ್ಸಿ & ಸೈನ್ಯ ಕೂಡ ಹೊಂದಿದೆ. ಚುನಾವಣೆಗಳು ಕೂಡ ನಡೆದುಕೊಂಡು ಬರುತ್ತಿದ್ದು, ಗಣರಾಜ್ಯ ವ್ಯವಸ್ಥೆ ಇರುವ ದೇಶವಾಗಿದೆ. ಇಷ್ಟೆಲ್ಲಾ ಇದ್ದರೂ ಸೊಮಾಲಿಯಾ, ವಿಶ್ವಸಂಸ್ಥೆ & ಆಫ್ರಿಕನ್ ಒಕ್ಕೂಟ ಸೇರಿ ಪ್ರಮುಖ ದೇಶಗಳಿಂದ ಸ್ವಾತಂತ್ರ್ಯ ದೇಶ ಎಂದು ಗುರುತಿಸಿಕೊಂಡಿಲ್ಲ. ಹೀಗೆಲ್ಲಾ ಇದ್ದಾಗಲೇ ದಿಢೀರ್ ಇಸ್ರೇಲ್ ಪ್ರಮುಖ ನಿರ್ಧಾರ ಕೈಗೊಂಡಿದೆ. ಆದರೆ ಇದಕ್ಕೆ ಸ್ವತಃ ಇಸ್ರೇಲ್ನ ಜೀವದ ಗೆಳೆಯ ಅಮೆರಿಕ ರೊಚ್ಚಿಗೆದ್ದಿದೆ.

ಮಧ್ಯಪ್ರಾಚ್ಯ ಭಾಗದಲ್ಲೂ ಭಾರಿ ಬಿರುಗಾಳಿ?
ಹೀಗೆ ಇಸ್ರೇಲ್ ಕೈಗೊಂಡಿರುವ ಮಹತ್ವದ ನಿರ್ಧಾರದ ಬಗ್ಗೆ ತೀವ್ರ ಆಕ್ರೋಶ ಹೊರ ಹಾಕಿರುವ ಸೊಮಾಲಿಯಾ ಸರ್ಕಾರ, ಸೊಮಾಲಿಲ್ಯಾಂಡ್ಗೆ ಇಸ್ರೇಲ್ ಸ್ವತಂತ್ರ ರಾಷ್ಟ್ರ ಎಂಬ ಸ್ಥಾನಮಾನ ನೀಡಿದ್ದಕ್ಕೆ ಉದ್ದೇಶಪೂರ್ವಕ ದಾಳಿ ಎಂದು ಹೇಳಿದೆ. ಈ ತಿಕ್ಕಾಟ ಆಫ್ರಿಕಾ ಖಂಡದಲ್ಲಿ ಮಾತ್ರವಲ್ಲ ಮತ್ತೊಂದು ಕಡೆ ಮಧ್ಯಪ್ರಾಚ್ಯ ಕೂಡ ಒದ್ದಾಡುವ ಮುನ್ಸೂಚನೆ ನೀಡಿದೆ. ಹಾಗೆಯೇ ಆಫ್ರಿಕಾ ಒಕ್ಕೂಟ ಕೂಡ ಈ ಕ್ರಮ ಖಂಡಿಸಿದ್ದು, ಸೊಮಾಲಿಲ್ಯಾಂಡ್ ಸೊಮಾಲಿಯಾದ ಅವಿಭಾಜ್ಯ ಅಂಗ ಎಂದಿದೆ. ಮತ್ತು ಆಫ್ರಿಕಾದಾದ್ಯಂತ ಪ್ರತ್ಯೇಕತಾವಾದಿ ಚಳುವಳಿಗಳು ಅಪಾಯಕಾರಿ ಎಂಬ ವಿಚಾರ ಪ್ರಸ್ತಾಪ ಮಾಡಿದೆ.
ಸೊಮಾಲಿಲ್ಯಾಂಡ್ ಬೆನ್ನಿಗೆ ನಿಂತ ಇಸ್ರೇಲ್
ಇಸ್ರೇಲ್ ನಿರ್ಧಾರಕ್ಕೆ ಟರ್ಕಿ ಮತ್ತು ಈಜಿಪ್ಟ್ ಕೂಡ ಖಂಡನೆ ವ್ಯಕ್ತಪಡಿಸಿದ್ದು, ಕೈರೋ ಪ್ರಾದೇಶಿಕ ಸ್ಥಿರತೆ ಹಾಳುಮಾಡುವ ಪ್ರಯತ್ನ ಎಂಬ ಆರೋಪ ಮಾಡಿದೆ ಈಜಿಪ್ಟ್. ಇಷ್ಟೆಲ್ಲಾ ನಡೆಯುವಾಗ ಕೂಡ ಇಸ್ರೇಲ್ ತನ್ನ ನಿರ್ಧಾರ ಸಮರ್ಥಿಸಿಕೊಂಡಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈ ನಿರ್ಧಾರದಲ್ಲಿ ಗಟ್ಟಿಯಾಗಿ ನಿಂತಿದ್ದಾರೆ. ಇದೇ ಕಾರಣಕ್ಕೆ ಅಮೆರಿಕ ಹಾಗೂ ಇಸ್ರೇಲ್ ಮಧ್ಯೆ ಈಗ ಸೊಮಾಲಿಲ್ಯಾಂಡ್ ಸ್ವತಂತ್ರಗೊಳಿಸುವ ವಿಚಾರ ಸಂಕಷ್ಟ ತಂದಿದೆ.
ಇನ್ನೊಂದು ಕಡೆ ಈ ಎಲ್ಲಾ ಬೆಳವಣಿಗೆಗಳನ್ನು ಲೆಕ್ಕಿಸದೆಯೇ ಸೊಮಾಲಿಲ್ಯಾಂಡ್ ಪ್ರಜೆಗಳು ಮಾತ್ರ ಸಂಭ್ರಮಾಚರಣೆ ಶುರು ಮಾಡಿ ಧ್ವಜ ಹಾರಿಸುತ್ತಾ ಖುಷಿಯಾಗಿದ್ದಾರೆ. ಆಫ್ರಿಕಾ ಅತ್ಯಂತ ಬಡತನ ಎದುರಿಸುತ್ತಿರುವ ಖಂಡವಾಗಿದ್ದು, ಪದೇ ಪದೇ ಆಫ್ರಿಕಾದಲ್ಲಿ ಪ್ರತ್ಯೇಕತೆಯ ಕೂಗು ಕೇಳಿಬರುತ್ತಲೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರತ್ಯೇಕ ರಾಷ್ಟ್ರದ ಕೂಗು ಕೇಳಿಬಂದರೆ ಅದನ್ನು ಆಫ್ರಿಕಾ ಒಕ್ಕೂಟ ತೀವ್ರ ರೀತಿಯಲ್ಲಿ ಖಂಡಿಸುತ್ತಿದೆ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications