ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Solar Storm : ಭೂಮಿಗೆ ಅಪ್ಪಳಿಸಲಿರುವ ಸೋಲಾರ್ ಚಂಡಮಾರುತ: ಏನಿದರ ಪರಿಣಾಮಗಳು?

|
Google Oneindia Kannada News

ಇಂದು ಭೂಮಿಗೆ ಸೋಲಾರ್ ಚಂಡಮಾರುತ ಅಪ್ಪಳಿಸಬಹುದಾಗಿದ್ದು, ವಿಮಾನ ಸಂಚಾರ ವ್ಯತ್ಯಯವಾಗುವ ಭೀತಿ ಎದುರಾಗಿದೆ. ಬೃಹತ್ ಸೌರ ಜ್ವಾಲೆಯು ಸೂರ್ಯನಿಂದ ಭೂಮಿಗೆ ಚಲಿಸುತ್ತಿದೆ. ಸೌರ ಚಂಡಮಾರುತ ಜುಲೈ 20ರಂದು ನೇರವಾಗಿ ಭೂಮಿಗೆ ಅಪ್ಪಳಿಸುತ್ತದೆ ಎಂದು ಸಂಭವನೀಯ ಪರಿಣಾಮಗಳ ಬಗ್ಗೆ NOAA ಎಚ್ಚರಿಕೆ ನೀಡಿದೆ.

ಸೂರ್ಯನಿಂದ ಹೊರಹೊಮ್ಮುವ ಬೃಹತ್ ಸೌರ ಜ್ವಾಲೆಯು ಭೂಮಿಯ ಕಡೆಗೆ ಚಲಿಸುತ್ತಿದೆ. ಈ ಭಯಾನಕ ಸೌರ ಜ್ವಾಲೆಯು ಶೀಘ್ರದಲ್ಲೇ ಭೂಮಿಗೆ ಅಪ್ಪಳಿಸುವ ನಿರೀಕ್ಷೆಯಿದೆ. ಇದು ಶಕ್ತಿಯುತವಾದ ಸೌರ ಚಂಡಮಾರುತವನ್ನು ಉಂಟುಮಾಡಬಹುದು. ಮಾತ್ರವಲ್ಲದೆ ಇದು ರೇಡಿಯೊ ಬ್ಲ್ಯಾಕೌಟ್ ಅನ್ನು ಉಂಟುಮಾಡಬಹುದು.

ಮೈಸೂರು; ತಂಬಾಕು ಬೆಳೆಯುವ ರೈತರನ್ನು ಕಾಡಿದ ಅಸನಿ ಚಂಡಮಾರುತ ಮೈಸೂರು; ತಂಬಾಕು ಬೆಳೆಯುವ ರೈತರನ್ನು ಕಾಡಿದ ಅಸನಿ ಚಂಡಮಾರುತ

ಜಿಪಿಎಸ್ ನ್ಯಾವಿಗೇಷನ್, ಮೊಬೈಲ್ ಫೋನ್ ಸಿಗ್ನಲ್ ಮತ್ತು ಸ್ಯಾಟಲೈಟ್ ಸಿಗ್ನಲ್ ಸಹ ಅಡ್ಡಿಪಡಿಸಬಹುದು ಎಂದು ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲದ ಆಡಳಿತ (NOAA) ಈ ಬಗ್ಗೆ ಎಚ್ಚರಿಕೆ ನೀಡಿದೆ. ಈ ಸೌರ ಜ್ವಾಲೆಯು ಜುಲೈ 14 ರಂದು ಸೂರ್ಯನ ಮೇಲ್ಮೈಯಿಂದ ಹೊರಹೊಮ್ಮಿತು ಮತ್ತು ಭೂಮಿಯ ಕಡೆಗೆ ಚಲಿಸುತ್ತಿದೆ.

ಇನ್ನೂ ಸರಳವಾಗಿ ಹೇಳಬೇಕು ಅಂದರೆ ಭೂಮಿಯ ಕಾಂತಕ್ಷೇತ್ರವು ಸೂರ್ಯನಿಂದ ಹೊರಹೊಮ್ಮುವ ಅಪಾಯಕಾರಿ ಕಿರಣಗಳಿಂದ ಮಾನವನನ್ನು ರಕ್ಷಿಸುತ್ತದೆ. ಈ ಕಿರಣಗಳು ಹೆಚ್ಚಿನ ವೇಗದಲ್ಲಿ ಭೂಮಿಯೆಡೆ ಬಂದಾಗ ಕಾಂತೀಯ ಮೇಲ್ಮೈಗೆ ಡಿಕ್ಕಿ ಹೊಡೆಯುತ್ತವೆ. ನಂತರ ಈ ಸೌರ ಮಾರುತದ ಕಣಗಳು ಧ್ರುವಗಳಿಗೆ ಚಲಿಸುತ್ತವೆ. ಇದರಿಂದ ಭೂಮಿಯ ಮೇಲ್ಮೈನಲ್ಲಿ ಸೌರ ಚಂಡಮಾರುತ ಸಂಭವಿಸುತ್ತದೆ.

ಸೂರ್ಯನಿಂದ ಹೊರಹೊಮ್ಮುವ ಈ ಸೌರ ಜ್ವಾಲೆಯ ಬಗ್ಗೆ ಬಾಹ್ಯಾಕಾಶ ಪವನಶಾಸ್ತ್ರಜ್ಞ ಡಾ. ತಮಿತಾ ಸ್ಕೋವ್ ತಮ್ಮ ಪ್ರತಿಕ್ರಿಯೆಯನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ಹೊಸ ಪ್ರದೇಶ 3058M 2.9-ಜ್ವಾಲೆಯನ್ನು ಹಾರಿಸುತ್ತದೆ. ಇದು ಈಗ X- ಫ್ಯಾಕ್ಟರ್‌ನೊಂದಿಗೆ ಸೂರ್ಯನ ಮೇಲೆ ನಾಲ್ಕನೇ ಪ್ರದೇಶವಾಗಿದೆ. NOAA ಎಕ್ಸ್-ಫ್ಲೇರ್‌ನ ಅಪಾಯವನ್ನು 10 ಪ್ರತಿಶತದಷ್ಟು ಇರಿಸುತ್ತದೆ'' ಎಂದು ಹೇಳಿದ್ದಾರೆ.

ಭೂಮಿಯ ಮೇಲೆ ಸೌರ ಜ್ವಾಲೆಗಳ ಪರಿಣಾಮ

ಭೂಮಿಯ ಮೇಲೆ ಸೌರ ಜ್ವಾಲೆಗಳ ಪರಿಣಾಮ

ಸೌರ ಜ್ವಾಲೆಗಳ X- ಅಂಶವು ಅತ್ಯಂತ ತೀವ್ರವಾದ ಜ್ವಾಲೆಗಳಲ್ಲಿ ಒಂದನ್ನು ಸೂಚಿಸುತ್ತದೆ ಮತ್ತು ಸೌರ ಜ್ವಾಲೆಯ ತೀವ್ರತೆಯ ಸಂಕೇತವು ಅದರ ಶಕ್ತಿಯನ್ನು ಸೂಚಿಸುತ್ತದೆ. ಸೌರ ಜ್ವಾಲೆಗಳನ್ನು ಅವುಗಳ ತೀವ್ರತೆಯ ಆಧಾರದ ಮೇಲೆ ನಾಲ್ಕು ವರ್ಗಗಳಾಗಿ ವರ್ಗೀಕರಿಸಲಾಗಿದೆ.. A, B, C, M ಮತ್ತು X. ಅತ್ಯಂತ ಶಕ್ತಿಶಾಲಿ ಸೌರ ಜ್ವಾಲೆಯು X-ವರ್ಗೀಕರಿಸಿದ ಸೌರ ಜ್ವಾಲೆಯಾಗಿರುತ್ತದೆ. ಆದರೆ M ಎರಡನೇ ಅತ್ಯಂತ ಶಕ್ತಿಶಾಲಿ ಸೌರ ಜ್ವಾಲೆಯಾಗಿದೆ. ಹೀಗೆ ಸೂರ್ಯನ ಜ್ವಾಲೆಯು ಭೂಮಿಯೊಂದಿಗೆ ನೇರ ಘರ್ಷಣೆಗೊಳಪಡಲಿದೆ.

"ಹೆಚ್ಚು ರೇಡಿಯೋ ಬ್ಲ್ಯಾಕೌಟ್‌ಗಳು ಭೂಮಿಯ ಮೇಲಿನ ಹಗಲಿನ ರೇಡಿಯೊ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದರಿಂದ GPS ಬಳಕೆದಾರರು ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ಎಚ್ಚರವಾಗಿರಬೇಕು" ಎಂದು ಡಾ. ಸ್ಕೋ ಹೇಳಿದ್ದಾರೆ. ಅಂದರೆ ಸೌರ ಚಂಡಮಾರುತವು ಭೂಮಿಯ ಮೇಲಿನ ಜಿಪಿಎಸ್ ನ್ಯಾವಿಗೇಷನ್ ಸಿಸ್ಟಮ್ ಅನ್ನು ಬ್ಲ್ಯಾಕ್ ಔಟ್ ಮಾಡುವ ನಿರೀಕ್ಷೆಯಿದೆ. ಇದು ಸಣ್ಣ ವಿಮಾನಗಳು ಮತ್ತು ದೊಡ್ಡ ಹಡಗುಗಳ ಪ್ರಯಾಣವನ್ನು ಅಡ್ಡಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

ಸೌರ ಜ್ವಾಲೆಗಳು ಪರಿಣಾಮಗಳೇನು?

ಸೌರ ಜ್ವಾಲೆಗಳು ಪರಿಣಾಮಗಳೇನು?

ಸೌರ ಚಂಡಮಾರುತದ ಸಮಯದಲ್ಲಿ ಭೂಮಿಯ ಮೇಲ್ಮೈನಲ್ಲಿ ಶಾಖದಿಂದಾಗಿ ವಿದ್ಯುತ್ ಪ್ರವಾಹ ಹೆಚ್ಚಿರುತ್ತದೆ. ಹೀಗಾಗಿ ಉಪಗ್ರಹಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಜಿಪಿಎಸ್ ನೇವಿಗೇಶನ್, ಮೊಬೈಲ್‌ ಫೋನ್ ಸಿಗ್ನಲ್ ಹಾಗೂ ಸ್ಯಾಟಲೈಟ್ ಟಿವಿಯಲ್ಲಿ ಸಮಸ್ಯೆಗೆ ಕಾರಣವಾಗುತ್ತದೆ. ವಿದ್ಯುತ್ ಲೈನ್‌ಗಳಲ್ಲಿ ಪ್ರವಾಹ ಅಧಿಕವಾಗಿ ಟ್ರಾನ್ಸ್‌ಫಾರ್ಮರ್‌ಗಳು ಸ್ಫೋಟಗೊಳ್ಳುವ ಸಾಧ್ಯತೆಯಿದೆ.

ಇತ್ತೀಚಿಗೆ, ಸೌರ ಮೇಲ್ಮೈಯಲ್ಲಿನ ದೈತ್ಯಾಕಾರದ ಸೌರಕಲೆ ಮತ್ತು ತಂತುಗಳು ಸಹ ಖಗೋಳಶಾಸ್ತ್ರಜ್ಞರನ್ನು ಭೂಮಿಯ ಸಮೀಪಿಸುತ್ತಿರುವ ಜ್ವಾಲೆಗಳ ಬಗ್ಗೆ ಕಳವಳವನ್ನುಂಟುಮಾಡಿದೆ. ಅದು ಭೂಮಿಯ ಕೆಲವು ಪ್ರದೇಶಗಳಲ್ಲಿ ಬ್ಲ್ಯಾಕ್‌ ಔಟ್‌ಗೆ ಕಾರಣವಾಗಬಹುದು. ಸೂರ್ಯನಿಂದ ಹೊರಹೊಮ್ಮುವ ಬೃಹತ್ ಸೌರ ಜ್ವಾಲೆಯು ಪ್ರಪಂಚದ ಅನೇಕ ಭಾಗಗಳಲ್ಲಿ ರೇಡಿಯೊ ಬ್ಲ್ಯಾಕ್‌ ಔಟ್‌ಗೆ ಕಾರಣವಾಗಬಹುದು ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

NASA ಪ್ರಕಾರ, "ಸೌರ ಜ್ವಾಲೆಗಳು ಸೂರ್ಯನ ಕಲೆಗಳೊಂದಿಗೆ ಸಂಬಂಧಿಸಿದ ಕಾಂತೀಯ ಶಕ್ತಿಯ ಬಿಡುಗಡೆಯಿಂದ ಉಂಟಾಗುವ ವಿಕಿರಣದ ಕ್ಷಿಪ್ರ ಸ್ಫೋಟವಾಗಿದೆ. ಸೌರ ಜ್ವಾಲೆಗಳು ನಮ್ಮ ಸೌರವ್ಯೂಹದಲ್ಲಿ ಅತಿದೊಡ್ಡ ಸ್ಫೋಟಕಗಳಾಗಿವೆ. ಅವು ಸೂರ್ಯನ ಮೇಲೆ ಪ್ರಕಾಶಮಾನವಾದ ಪ್ರದೇಶಗಳಾಗಿ ಕಂಡುಬರುತ್ತವೆ ಮತ್ತು ಅವುಗಳು ನಿಮಿಷಗಳಿಂದ ಗಂಟೆಗಳವರೆಗೆ ಉಳಿಯಬಹುದು.

ಶತಕೋಟಿ ಹೈಡ್ರೋಜನ್ ಬಾಂಬ್‌ಗಳಿಗೆ ಸಮ

ಶತಕೋಟಿ ಹೈಡ್ರೋಜನ್ ಬಾಂಬ್‌ಗಳಿಗೆ ಸಮ

ಸೌರ ಜ್ವಾಲೆಯನ್ನು ಕರೋನಲ್ ಮಾಸ್ ಇಂಜೆಕ್ಷನ್ (CME) ಎಂದೂ ಕರೆಯಲಾಗುತ್ತದೆ. ಈ ಜ್ವಾಲೆಗಳನ್ನು ಸೌರವ್ಯೂಹದಲ್ಲಿ ಇದುವರೆಗೆ ಅತ್ಯಂತ ಶಕ್ತಿಶಾಲಿ ಸ್ಫೋಟಗಳು ಎಂದು ಪರಿಗಣಿಸಲಾಗುತ್ತದೆ. ಇದು ಶತಕೋಟಿ ಹೈಡ್ರೋಜನ್ ಬಾಂಬ್‌ಗಳಿಗೆ ಹೋಲಿಸಬಹುದಾದ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಈ ಜ್ವಾಲೆಗಳು ಮಧ್ಯಮ, ಬಲವಾದ ಮತ್ತು ಪ್ರಕಾಶಮಾನವಾಗಿರಬಹುದು.

ರೇಡಿಯೋ ತರಂಗಗಳಿಗೆ ಅಡಚಣೆ

ರೇಡಿಯೋ ತರಂಗಗಳಿಗೆ ಅಡಚಣೆ

ಜುಲೈ 19 (ಭಾರತೀಯ ಕಾಲಮಾನ) ಬೆಳಿಗ್ಗೆ ಈ ಪರಿಣಾಮ ಉತ್ತುಂಗವಾಗಿರುತ್ತದೆ ಎಂದು ನಾಸಾ ಭವಿಷ್ಯ ನುಡಿದಿದೆ. ಇದು ಜಿಪಿಎಸ್ ಮತ್ತು ರೇಡಿಯೋ ತರಂಗಗಳಿಗೆ ಅಡಚಣೆಯನ್ನು ಉಂಟುಮಾಡಬಹುದು. ಈ ವರ್ಷದ ಮಾರ್ಚ್‌ನಲ್ಲಿ, ಭೂಮಿಯು ವಿವಿಧ ಭೂಕಾಂತೀಯ ಬಿರುಗಾಳಿಯನ್ನು ಎದುರಿಸಿದೆ. ಭೂಕಾಂತೀಯ ಚಂಡಮಾರುತಗಳು ಯಾವುದೇ ಹಾನಿಯನ್ನುಂಟುಮಾಡದಿದ್ದರೂ, ಭವಿಷ್ಯದಲ್ಲಿ ಹೆಚ್ಚು ಶಕ್ತಿಶಾಲಿ ಚಂಡಮಾರುತಗಳು ಸಂಭವಿಸಬಹುದು ಎಂಬ ಆತಂಕವಿತ್ತು.

English summary
Solar storm to directly hit the Earth on July 20; Know Effects, What to Expect and Other Details in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X