ಸಲಿಂಗಿಯ ಕಣ್ಣುಕಟ್ಟಿ ಕಟ್ಟಡದಿಂದ ಕೆಳಕ್ಕೆ ದಬ್ಬಿ ಕೊಂದರು!

Posted By:
Subscribe to Oneindia Kannada

ಮೊಸುಲ್: ಸಲಿಂಗಿಯಾಗಿದ್ದ ಎಂಬ ಕಾರಣಕ್ಕಾಗಿ ಆತನ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ ಬಹುಮಹಡಿ ಕಟ್ಟಡದಿಂದ ಕೆಳಕ್ಕೆ ನೂಕಿ ಕೊಲ್ಲಲಾಗಿದೆ. ಈ ಘಟನೆ ನಡೆದಿರುವುದು ಇರಾಕ್ ನ ಉತ್ತರ ಭಾಗದ ಮೊಸುಲ್ ನಗರದಲ್ಲಿ. ಹಾಗೆ ಕೊಂದವರು ಐಸ್ಐಎಸ್ ಉಗ್ರರು.

ತಳ್ಳುವ ಮೊದಲು ಪಟ್ಟಿ ಮಾಡಿ ತರಲಾಗಿರುವ ಆತನ ಓದಿ ಹೇಳಲಾಗಿದೆ. ಆನಂತರ ಆತನನ್ನು ಕಟ್ಟಡದ ಮೇಲಿಂದ ತಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

SIS militants accuse prisoner of being gay, throw him off a roof in Mosul

ಇಸ್ಲಾಮಿಕ್ ಸ್ಟೇಟ್ ಉಗ್ರರ ನಿಯಮದಂತೆ, ಸಲಿಂಗ ಕಾಮ ಅಪರಾಧ. ಇದಕ್ಕೆ ಮರಣ ದಂಡನೆಯೇ ಶಿಕ್ಷೆ. ಸಲಿಂಗ ಕಾಮದಲ್ಲಿ ತೊಡಗುವ ಯಾರೇ ಇರಲಿ, ಅಂಥವರನ್ನು ಎತ್ತರದ ಕಟ್ಟಡದ ಮೇಲಿಂದ ನೂಕಬೇಕು ಅಥವಾ ಜನರ ಮುಂದೆ ಕಟ್ಟಿಹಾಕಿ ಕಲ್ಲುಗಳಿಂದ ಹೊಡೆದು ಸಾಯಿಸಬೇಕೆಂಬುದು ಅವರ ನಿಯಮ. ಹಾಗಾಗಿಯೇ ಇರಾಕ್ ನ ಖೈದಿಯೊಬ್ಬನಿಗೆ ಈ ಶಿಕ್ಷೆ ವಿಧಿಸಲಾಗಿದೆ.

ಇನ್ನೂ ಕೆಲವು ಬಾರಿ ಸಲಿಂಗಿಗಳನ್ನ ಜನನಿಬಿಡ ಪ್ರದೇಶಕ್ಕೆ ತಂದು ಮಂಡಿಯೂರಿ ಕೂರಿಸಲಾಗುತ್ತದೆ. ಆತನ ಮುಂದೆ ಐಸ್ ಐಸ್ ಸಂಘಟನೆಯ ಉಗ್ರನೊಬ್ಬ ಆತ ಎಸಗಿದ ತಪ್ಪುಗಳನ್ನು ಓದಿ ಹೇಳುತ್ತಾನೆ. ಆನಂತರ, ಆತ ಕತ್ತು ಕತ್ತರಿಸಲಾಗುತ್ತದೆ.

ಚಿತ್ರ ಕೃಪೆ: ಟ್ವೀಟರ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Islamic State (IS) militants threw a blind-folded prisoner off a building in Mosul after accusing him of being a gay.
Please Wait while comments are loading...