• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಯಿ ಅಂದುಕೊಂಡು ಕರಡಿ ಮರಿ ಸಾಕಿದ್ದ ಗಾಯಕಿಯ ಬಂಧನ

|

ಕರಡಿಯನ್ನು ಮನೆಯಲ್ಲಿ ಸಾಕು ಪ್ರಾಣಿಯಂತೆ ಪೋಷಿಸುತ್ತಿದ್ದ ಮಲೇಷ್ಯಾ ಹಾಡುಗಾರ್ತಿಯನ್ನು ಕಳೆದ ವಾರ ಬಂಧಿಸಲಾಗಿದೆ. 'ಅಯ್ಯೋ, ಅದನ್ನು ನಾಯಿ ಅಂದುಕೊಂಡಿದ್ದೆ' ಎಂದು ಆಕೆ ಸಮಜಾಯಿಷಿ ನೀಡಿದ್ದಾರೆ. ಝರಿತ್ ಸೋಫಿಯಾ ಯಾಸಿನ್ ಒಂದು ಸಂದರ್ಶನದಲ್ಲಿ, ಎರಡು ವಾರಗಳ ಹಿಂದೆ ಕರಡಿ ನೋಡಿದ್ದಾಗಿ, ಆರೋಗ್ಯ ಚಿಕಿತ್ಸೆಗಾಗಿ ಕರೆದೊಯ್ದಿದ್ದೆ ಎಂದಿದ್ದಾರೆ.

ರಸ್ತೆ ಪಕ್ಕದಲ್ಲಿ ಬಹಳ ನಿತ್ರಾಣ ಆಗಿದ್ದ ಕರಡಿ ಮರಿಯನ್ನು ನಾನು ರಾತ್ರಿ ವೇಳೆ ನೋಡಿದೆ. ಮತ್ತು ನಾನದನ್ನು ನಾಯಿ ಅಂದುಕೊಂಡೆ ಎಂದು ಹೇಳಿದ್ದಾರೆ. ರಿಯಾಲಿಟಿ ಶೋವೊಂದರ ಮಾಜಿ ಆಟಗಾರರೊಬ್ಬರು ಆಕೆಯ ಪರವಾಗಿ ಮಾತನಾಡಿದ್ದು, ಕಾನೂನು ಮುರಿಯುವ ಉದ್ದೇಶ ಆಕೆಗೆ ಇರಲಿಕ್ಕಿಲ್ಲ ಎಂದಿದ್ದಾರೆ.

ಮೈಸೂರಿನಲ್ಲಿ ಮನುಷ್ಯನ ಮುಖವನ್ನೇ ಹೋಲುವ ಆಡಿನ ಮರಿ

ಕರಡಿಯನ್ನು ಸಾಕು ಪ್ರಾಣಿಯಂತೆ ಪೋಷಿಸುವ ಹಾಗಿಲ್ಲ ಎಂಬುದು ನನಗೆ ಗೊತ್ತು ಎಂದು ಆಕೆ ಹೇಳಿದ್ದು, ನನಗೆ ಅದನ್ನು ರಕ್ಷಿಸಬೇಕು ಎಂಬ ಉದ್ದೇಶ ಇತ್ತೇ ವಿನಾ ಬೇರೆ ಯಾವ ದುರುದ್ದೇಶ ಇರಲಿಲ್ಲ ಎಂದಿದ್ದಾರೆ. ಇನ್ನು ಆ ಕರಡಿಗೆ ಬ್ರೂನೋ ಎಂದು ಹೆಸರಿಟ್ಟಿದ್ದು, ಅದು ಚೇತರಿಸಿಕೊಂಡ ಕೂಡಲೇ ಝೂಗೆ ನೀಡಬೇಕು ಎಂದಿದ್ದೆ ಎಂಬುದನ್ನು ಹೇಳಿದ್ದಾರೆ.

ಕ್ವಾಲಾಲಂಪುರ್ ನಲ್ಲಿರುವ ಯಾಸಿನ್ ಮನೆ ಮೇಲೆ ಮಲೇಷ್ಯಾದ ವನ್ಯಜೀವಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅದಕ್ಕೂ ಮುನ್ನ ಯಾರೋ ಆ ಕರಡಿಯ ವಿಡಿಯೋ ಮಾಡಿ, ಪೋಸ್ಟ್ ಮಾಡಿದ್ದರು. ಅದನ್ನು ನೋಡಿ, ಈ ಗಾಯಕಿ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಟೀಕಿಸಲಾಗುತ್ತಿತ್ತು. ಈಕೆ ಕಾನೂನು ಬಾಹಿರವಾಗಿ ವನ್ಯಜೀವಿಗಳ ಮಾರಾಟ ಮಾಡುತ್ತಾಳೆ ಎಂದು ಆಕ್ರೋಶ ವ್ಯಕ್ತವಾಗಿತ್ತು.

ಹಗಲು ಹೊತ್ತು ನಾನೊಂದು ಉದ್ಯಮ ನಡೆಸುತ್ತೇನೆ. ರಾತ್ರಿ ವೇಳೆ ಹಾಡು ಹೇಳುತ್ತೇನೆ. ಈ ಮಧ್ಯೆ ವನ್ಯಜೀವಿಗಳ ಮಾರಾಟಕ್ಕೆ ಸಮಯ ಎಲ್ಲಿದೆ ಎಂದು ಆಕೆ ಪ್ರಶ್ನಿಸಿದ್ದರು.

English summary
27-year-old Singer arrested for keeping bear as a pet in Malaysia. Here is the complete details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X