ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಕ ಧರಿಸುವುದರಿಂದ ಕೊವಿಡ್-19 ರೋಗದಿಂದ ದೂರವಿರಬಹುದೇ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 17: ಕೊರೊನಾ ಸೋಂಕು ದೇಶ, ವಿದೇಶಗಳಿಗೆ ಹರಡಿದೆ. ಭಾರತ ಇತ್ತೀಚೆಗಷ್ಟೇ ಕೊರೊನಾ ಸೋಂಕು ಹೆಚ್ಚಿರುವ ರಾಷ್ಟ್ರಗಳ ಪೈಕಿ ಎರಡನೇ ಸ್ಥಾನದಲ್ಲಿತ್ತು. ಅಮೆರಿಕ ಮೊದಲನೇ ಸ್ಥಾನದಲ್ಲಿದೆ.

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದರಿಂದ ಕೊರೊನಾ ಸೋಂಕಿನಿಂದ ದೂರವಿರಬಹುದು ಎಂದು ಎಲ್ಲಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಚೀನಾದ ಅಧ್ಯಯನವೊಂದು ಕನ್ನಡಕ ಧರಿಸುವುದರಿಂದ ಕೂಡ ಸೋಂಕಿನಿಂದ ದೂರವಿರಬಹುದು ಎಂದು ಹೇಳಿದೆ.

2021ರ ಆರಂಭದಲ್ಲಿ ಭಾರತಕ್ಕೆ ಕೊರೊನಾ ಲಸಿಕೆ ಸಿಗುವ ನಿರೀಕ್ಷೆ: ಹರ್ಷವರ್ಧನ್2021ರ ಆರಂಭದಲ್ಲಿ ಭಾರತಕ್ಕೆ ಕೊರೊನಾ ಲಸಿಕೆ ಸಿಗುವ ನಿರೀಕ್ಷೆ: ಹರ್ಷವರ್ಧನ್

ಜಾಮಾ ಆಪ್ತಲ್‌ಮಾಲಜಿ ನಡೆಸಿರುವ ಅಧ್ಯಯನದಲ್ಲಿ ಯಾರ್ಯಾರು ಕನ್ನಡಕ ಧರಿಸುತ್ತಾರೋ ಅವರಿಗೆ ಕೊರೊನಾ ಸೋಂಕಿನಿಂದ ಕಡಿಮೆ ತೊಂದರೆಯಾಗಿರುವುದು ಪತ್ತೆಯಾಗಿದೆ.

Should People Wear Glasses To Reduce Risk Of COVID-19

ಹಾಗೆಯೇ ನಿತ್ಯ ಅವರು ಎಷ್ಟು ಗಂಟೆಗಳ ಕಾಲ ಕನ್ನಡಕ ಧರಿಸುತ್ತಾರೆ ಎನ್ನುವುದು ಕೂಡ ಮುಖ್ಯವಾಗಿರುತ್ತದೆ.ಅಧ್ಯಯನವು 276 ಜನರ ಮೇಲೆ ನಡೆದಿದೆ. ಜನವರಿ 27 ರಿಂದ ಮಾರ್ಚ್ 13ರವರೆಗೆ ಅಧ್ಯಯನ ನಡೆಸಲಾಗಿದೆ.

ಶೇ.5.8 ರಷ್ಟು ಮಂದಿ ದಿನಕ್ಕೆ 8 ಗಂಟೆಗಳ ಕಾಲ ಕನ್ನಡಕ ಧರಿಸುತ್ತಾರೆ. 276 ಮಂದಿಯಲ್ಲಿ 30 ಮಂದಿ ಅಂದರೆ ಶೇ.11ರಷ್ಟು ಮಂದಿ ಕನ್ನಡಕ ಧರಿಸುತ್ತಾರೆ.

1985ರಲ್ಲಿ ಮಾಡಿದ್ದ ಅಧ್ಯಯನದ ಪ್ರಕಾರ ಚೀನಾದ 1/3ರಷ್ಟು ಮಂದಿ ಮಯೋಫಿಯಾ ಹೊಂದಿದ್ದಾರೆ.ಕನ್ನಡಕ ಧರಿಸುವುದರಿಂದ ಕೊರೊನಾ ಸೋಂಕು ತಗುಲುವ ಸಾಧ್ಯತೆ ಕಡಿಮೆ ಇರುತ್ತದೆ. ಕನ್ನಡಕ ಧರಿಸುವ ಕೆಲವೇ ಕೆಲವು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದರು.

ಕೇವಲ ಒಂದು ಆಸ್ಪತ್ರೆ ಮಾತ್ರ ಈ ಕುರಿತು ಅಧ್ಯಯನ ನಡೆಸಿದ್ದು, ನಿಜವಾಗಿಯೂ ಕನ್ನಡ ಹಾಕುವುದಕ್ಕೂ ಕೊವಿಡ್ 19 ರೋಗಕ್ಕೂ ಏನು ಸಂಬಂಧ ಎಂಬುದನ್ನು ಸಾಬೀತುಪಡಿಸಿಲ್ಲ.

ಕನ್ನಡಕ ಧರಿಸುವುದರಿಂದ ಕೊರೊನಾ ಸೋಂಕಿನಿಂದ ದೂರವಿರಬಹುದು ಎಂದು ಹೇಳಲಾಗಿದೆ. ಆದರೆ ಇಷ್ಟು ಬೇಗ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ.

Recommended Video

ಚಳಿಗಾಲದಲ್ಲು ಯುದ್ಧ ಮಾಡೋಕೆ Ready ..China ನಾ ಸುಮ್ನೆ ಬಿಡಲ್ಲಾ | Oneindia Kannada

ಹೆಚ್ಚೆಚ್ಚು ಸಂಶೋಧನೆ, ಅಧ್ಯಯನಗಳು ಬೇಕಿವೆ. ಕನ್ನಡಕ ಧರಿಸುವುದರಿಂದ ಕಣ್ಣನ್ನು ಮುಟ್ಟಿಕೊಳ್ಳುವುದು ಕಡಿಮೆಯಾಗುತ್ತದೆ. ಇದರಿಂದ ಬೇರೊಬ್ಬರಿಗೆ ಅಥವಾ ನಿಮ್ಮ ಕಣ್ಣಿಗೆ ಸೋಂಕು ತಗುಲುವುದಿಲ್ಲ.

English summary
While there may be some evidence that suggests that use of eyeglasses can act as a protection against the disease, experts warn that it is too early to conclude that everyone should wear eyeglasses as a protective measure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X