ಮ್ಯೂನಿಕ್ ಶಾಪಿಂಗ್ ಮಾಲ್ ನಲ್ಲಿ ಗುಂಡಿನ ದಾಳಿ, 3 ಸಾವು

Posted By:
Subscribe to Oneindia Kannada

ಮ್ಯೂನಿಕ್(ಜರ್ಮನಿ), ಜುಲೈ 22: ಇಲ್ಲಿನ ಐತಿಹಾಸಿಕ ಒಲಿಂಪಿಕ್ ಸ್ಟೇಡಿಯಂ ಬಳಿ ಇರುವ ಶಾಪಿಂಗ್ ಮಾಲ್ ನಲ್ಲಿ ಓರ್ವ ವ್ಯಕ್ತಿ ಶುಕ್ರವಾರ ಗುಂಡಿನ ದಾಳಿ ನಡೆಸಿದ್ದಾನೆ.

ಈ ಘಟನೆಯಲ್ಲಿ ಸದ್ಯದ ಮಾಹಿತಿಯಂತೆಮೂವರು ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿ ಮೆಟ್ರೋ ಸ್ಟೇಷನ್ ಕಡೆಗೆ ಪರಾರಿಯಾಗಿದ್ದಾನೆ.[ದಾಳಿ ಮಾಡಲು ವಾಹನಗಳ ಬಳಕೆ, ಉಗ್ರರ ಹೊಸ ತಂತ್ರ?]

Shooting at Munich shopping centre: German police

ಡಿಪಿಎ ನ್ಯೂಸ್ ಏಜೆನ್ಸಿ ಪ್ರಕಾರ ಹಲವಾರು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಓಇಜಡ್ಜ್ ಶಾಪಿಂಗ್ ಸೆಂಟರ್ ಅನ್ನು ಪೊಲೀಸರು ಸುತ್ತುವರೆದಿದ್ದು, ಗನ್ ಮ್ಯಾನ್ ಗಾಗಿ ಹುಡುಕಾಟ ನಡೆಸಿದ್ದಾರೆ.

ಇತ್ತೀಚೆಗೆ ಫ್ರಾನ್ಸಿನ ನೀಸ್ ನಗರದಲ್ಲಿ ನಡೆದ ಉಗ್ರರದ ದಾಳಿ ಬಳಿಕ ಈ ಘಟನೆ ಸಂಭವಿಸಿದ್ದು, ಒಂಟಿ ತೋಳ ಎಂದು ಕರೆದುಕೊಳ್ಳುವ ಉಗ್ರನ ಕೃತ್ಯ ಇರಬಹುದು ಎಂದು ಶಂಕಿಸಲಾಗಿದೆ.


ಇತ್ತೀಚೆಗೆ ಈತ ಮೆಟ್ರೋ ಸ್ಟೇಷನ್ ನಲ್ಲಿ ಚಾಕು ಹಿಡಿದುಕೊಂಡು ಐದಾರು ಮಂದಿಗೆ ತೀವ್ರವಾಗಿ ಗಾಯ ಮಾಡಿ ಪರಾರಿಯಾಗಿದ್ದ. ಇಸ್ಲಾಮಿಕ್ ಉಗ್ರ ಸಂಘಟನೆಗಳಿಂದ ಪ್ರಭಾವಿತನಾಗಿರುವ ಇವನು ಯಾವುದೇ ಸಂಘಟನೆ ಜೊತೆ ಗುರುತಿಸಿಕೊಂಡಿಲ್ಲ. ಮ್ಯೂನಿಕ್ ಶೂಟಿಂಗ್ ಇವನದ್ದೇ ಕೃತ್ಯ ಇರಬಹುದು ಎಂದು ಶಂಕಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Several people were killed on Friday in a shooting rampage by a lone gunman in a Munich shopping centre, police said.
Please Wait while comments are loading...