ದ. ಆಫ್ರಿಕಾ ಚರ್ಚ್‌ನಲ್ಲಿ ನರಮೇಧ, ಗುಂಡಿನ ದಾಳಿಗೆ ಐವರು ಬಲಿ
ಜೋಹಾನ್ಸ್ ಬರ್ಗ್, ಜುಲೈ 11: ಹರಿಣಗಳ ನಾಡಲ್ಲಿ ಕ್ರೂರಿಗಳು ನರಮೇಧ ನಡೆಸಿದ್ದಾರೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ ನಗರದ ಹೊರವಲಯದಲ್ಲಿರುವ ಚರ್ಚ್‌ನಲ್ಲಿ ಗುಂಡಿನ ಚಕಮಕಿ ನಡೆದಿದೆ.
Recommended Video
ಈ ಘಟನೆಯಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಸೌತ್ ಆಫ್ರಿಕಾ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಿಂಸಾಚಾರ ನಡೆದಿರುವ ಚರ್ಚ್‌ನ ಸ್ವಾಧೀನ ಸಂಬಂಧ 2 ಗುಂಪುಗಳ ನಡುವೆ 2016ರಿಂದಲೂ ಕಿರಿಕ್ ನಡೆಯುತ್ತಾ ಬಂದಿತ್ತು.

ಈ ಕುರಿತು ಮಾತುಕತೆಗೆ ಬಂದ ಸಂದರ್ಭದಲ್ಲಿ ಆಗಂತುಕರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಎರಡೂ ಗುಂಪಿನ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಐವರು ಬಲಿಯಾಗಿದ್ದಾರೆ. ಈ ಘಟನೆಯ ಬೆನ್ನಲ್ಲೇ ಜೋಹಾನ್ಸ್‌ಬರ್ಗ್ ನಗರದಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ.
#sapsGP Early hours this morning #SAPS was alerted to a hostage situation & shooting @ International Pentcost Holiness Church, Zuurbekom, 30 suspects arrested & seized more than 25 firearms. 5 fatalities are confirmed. The scene is still active with SAPS Hostage Negotiators. TM pic.twitter.com/5sMjYkYFjg
— SA Police Service 🇿🇦 (@SAPoliceService) July 11, 2020
30ಕ್ಕೂ ಹೆಚ್ಚು ಬಂದೂಕು ವಶಕ್ಕೆ..!: ಚರ್ಚ್‌ನಲ್ಲಿ ನಡೆದಿರುವ ದಾಳಿಯ ಭೀಕರತೆಗೆ ಸಾಕ್ಷಿ ಎಂಬಂತೆ ಹಂತಕರಿಂದ ಸುಮಾರು 30ಕ್ಕೂ ಹೆಚ್ಚು ಅತ್ಯಾಧುನಿಕ ಗನ್‌ಗಳನ್ನ ವಶಕ್ಕೆ ಪಡೆಯಲಾಗಿದೆ. 16 ಶಾಟ್‌ಗನ್, 5 ರೈಫಲ್ಸ್ ಸೇರಿದಂತೆ 13 ಪಿಸ್ತೂಲ್ ಹಾಗೂ ಇನ್ನಿತರ ಆಯುಧಗಳನ್ನ ದಕ್ಷಿಣ ಆಫ್ರಿಕಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ 40ಕ್ಕೂ ಹೆಚ್ಚು ಜನರನ್ನ ಬಂಧಿಸಲಾಗಿದೆ.












Click it and Unblock the Notifications