ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಲೀಸ್, ಪ್ಲೀಸ್, ಡೋಂಟ್ ಶೂಟ್..! ಫ್ಲೋರಿಡಾ ಶೂಟೌಟ್ ನ ಮನಕಲಕುವ ವಿಡಿಯೋ

|
Google Oneindia Kannada News

Recommended Video

ಫ್ಲೋರಿಡಾ, ಯುಎಸ್ಎ : ಪಾರ್ಕ್ ಲ್ಯಾಂಡ್ ನ ಸ್ಟೋನ್ ಮ್ಯಾನ್ ಡೌಗ್ಲಸ್ ಹೈ ಸ್ಕೂಲ್ ನಲ್ಲಿ ಭೀಕರ ಘಟನೆ

ಫ್ಲೊರಿಡಾ, ಫೆಬ್ರವರಿ 15: ಅಮೆರಿಕದ ಫ್ಲೋರಿಡಾದ ಹೈಸ್ಕೂಲ್ ವೊಂದರಲ್ಲಿ ನಡೆದ ಭೀಕರ ಶೂಟೌಟ್ ನ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅನಾಮತ್ತಾಗಿ ಕ್ಲಾಸ್ ರೂಮಿಗೆ ನುಗ್ಗಿ, ಶೂಟೌಟ್ ನಡೆಸುತ್ತಿರುವ ವಿಕೃತ ಮನಸ್ಸಿನ ವ್ಯಕ್ತಿಯನ್ನು, ವಿದ್ಯಾರ್ಥಿಗಳು 'ಪ್ಲೀಸ್ ಪ್ಲೀಸ್' ಎಂದು ಅಂಗಲಾಚುತ್ತಿರುವ ದೃಶ್ಯವನ್ನು ಕಂಡರೆ ಹೃದಯ ಭಾರವಾಗುತ್ತದೆ!

ಫ್ಲೊರಿಡಾ ಶಾಲೆಯಲ್ಲಿ ಮಾಜಿ ವಿದ್ಯಾರ್ಥಿಯಿಂದಲೇ ಶೂಟೌಟ್: 17 ಜನ ಸಾವುಫ್ಲೊರಿಡಾ ಶಾಲೆಯಲ್ಲಿ ಮಾಜಿ ವಿದ್ಯಾರ್ಥಿಯಿಂದಲೇ ಶೂಟೌಟ್: 17 ಜನ ಸಾವು

ಶೂಟೌಟ್ ಗಳು ಅಮೆರಿಕದ ಮಟ್ಟಿಗೆ ಹೊಸತಲ್ಲ. ಆದರೆ ಯಾವುದೋ ದ್ವೇಷಕ್ಕೆ, ಯಾರದೋ ಮೇಲಿನ ಪ್ರತೀಕಾರಕ್ಕೆ ಪುಟ್ಟ ಮಕ್ಕಳನ್ನು ಬಲಿತೆಗೆದುಕೊಳ್ಳುವುದು ಯಾವ ನ್ಯಾಯ ಎಂಬುದು ಈಗಿರುವ ಪ್ರಶ್ನೆ!

ಫ್ಲೋರಿಡಾದ ಪಾರ್ಕ್ ಲ್ಯಾಂಡ್ ಎಂಬಲ್ಲಿಯ ಮಾರ್ಜರಿ ಸ್ಟೋನ್ ಮನ್ ಡಗ್ಲಸ್ ಹೈ ಸ್ಕೂಲ್ ನಲ್ಲಿ ಈ ಶೂಟೌಟ್ ನಡೆದಿದ್ದು. ಇಲ್ಲಿನ ಮಾಜಿ ವಿದ್ಯಾರ್ಥಿ ನಿಕೋಲಸ್ ಕ್ರುಜ್ ಎಂಬಾತನೇ ಈ ವಿಕೃತ ಕೃತ್ಯ ಎಸಗಿದವನು. 19 ವರ್ಷದ ನಿಕೋಲಸ್ ನನ್ನು ಅಶಿಸ್ತಿನ ಕಾರಣ ನೀಡಿ ಈ ಶಾಲೆಯಿಂದ ಹೊರದಬ್ಬಲಾಗಿತ್ತು. ಈ ಅವಮಾನದ ಸೇಡು ತೀರಿಸಿಕೊಳ್ಳಲು ವಿದ್ಯಾರ್ಥಿ 17 ಜನರ ಪ್ರಾಣಬಲಿತೆಗೆದುಕೊಂಡಿದ್ದಾನೆ. ಸದ್ಯಕ್ಕೆ ನಿಕೋಲಸ್ ನನ್ನು ಬಂಧಿಸಲಾಗಿದೆಯಾದರೂ ತಮ್ಮ ಮಕ್ಕಳನ್ನು ಕಳೆದುಕೊಂಡ ತಂದೆ ತಾಯಿಗಳ ನೋವಿಗೆ ಹೊಣೆಯಾರು?

ಮೈನಡುಗಿಸುವಂತಿವೆ ಅಮೆರಿಕಾ ಶಾಲಾ ಹತ್ಯಾಕಾಂಡಗಳುಮೈನಡುಗಿಸುವಂತಿವೆ ಅಮೆರಿಕಾ ಶಾಲಾ ಹತ್ಯಾಕಾಂಡಗಳು

ಮನಕಲಕುವ ವಿಡಿಯೋ...

ಇದ್ದಕ್ಕಿದ್ದಂತೆ ಕ್ಲಾಸ್ ರೂಮಿನೊಳಗಡೆ ನುಗ್ಗಿ ಶೂಟೌಟ್ ನಡೆಸುತ್ತಿರುವ ವ್ಯಕ್ತಿಯನ್ನು ಪ್ಲೀಸ್ ಪ್ಲೀಸ್ ಎಂದು ವಿದ್ಯಾರ್ಥಿಗಳು ಅಂಗಲಾಚುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ಆದರೆ ಅವರ್ಯಾರ ಮಾತನ್ನೂ ಕಿವಿಗೆ ಹಾಕಿಕೊಳ್ಳದೆ ಶೂಟರ್ ಮನಬಂದಂತೆ ಗುಂಡು ಹಾರಿಸುತ್ತಿದ್ದಾನೆ!

ಭಾವುಕರಾಗಿ ಶ್ರದ್ಧಾಂಜಲಿ ಅರ್ಪಿಸಿದ ಟ್ರಂಪ್

ಫ್ಲೋರಿಡಾ ಶಾಲೆಯಲ್ಲಿ ನಡೆದ ಭೀಕರ ಶೂಟೌಟ್ ಪ್ರಕರಣಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಸಂತ್ರಸ್ತರಿಗೆ, ಅವರ ಕುಟುಂಬಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಮಡಿದವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಅಮೆರಿಕದ ಇನ್ಯಾವುದೇ ಶಾಲೆಯಲ್ಲೂ ಇಂಥ ಘಟನೆಗಳು ಇನ್ನು ಮೇಲೆ ನಡೆಯಕೂಡದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾವುಕರಾಗಿ, ಅಷ್ಟೇ ಕಠಿಣವಾಗಿ ಟ್ವೀಟ್ ಮಾಡಿದ್ದಾರೆ.

Array

ಆತಂಕದಲ್ಲಿ ಪಾಲಕರು

ಗಾಯಗೊಂಡ ಮಕ್ಕಳನ್ನು ರಕ್ಷಿಸಿದ ಭದ್ರತಾ ಸಿಬ್ಬಂದಿ, ಅವರನ್ನು ತಂದೆ-ತಾಯಿಗಳಿಗೆ ಒಪ್ಪಿಸಿ ಅವರ ನಿಗಾ ನೋಡುವುದಕ್ಕೆ ಹೇಳಿದರು. ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಶಾಲೆಯ ಬಳಿ ದೌಡಾಯಿಸಿದ ಪಾಲಕರು ತಮ್ಮ ತಮ್ಮ ಮಕ್ಕಳನ್ನು ಆತಂಕದಿಂದ ಮನೆಗೆ ಕರೆದೊಯ್ಯುತ್ತಿರುವ ದೃಶ್ಯವೂ ವಿಡಿಯೋದಲ್ಲಿದೆ.

ನಾವಿದ್ದೇವೆ ಹೆದರಬೇಡಿ..!

ಮಕ್ಕಳನ್ನು ಕಳೆದುಕೊಂಡ ಹಲವು ಪಾಲಕರಿಗೆ ಅವರ ಬಂಧುಗಳು, ಸ್ನೇಹಿತರು ಸಾಂತ್ವನ ಹೇಳುತ್ತಿದ್ದ ದೃಶ್ಯವೂ ಎಲ್ಲೆಡೆ ಕಂಡುಬಂತು. 19 ವರ್ಷದ ನಿಕೋಲಸ್ ಎಂಬ ವಿಕೃತ ವ್ಯಕ್ತಿಗೆ ಪಾಲಕರು ಹಿಡಿಶಾಪ ಹಾಕುತ್ತಿದ್ದರು.

English summary
17 people were killed on Feb 15th when a gunman opened fire at a high school in Parkland, Florida.As per local media reports, the incident at Marjory Stoneman Douglas High School, northwest of Fort Lauderdale, was carried out by 19-year-old Nikolaus Cruz. Here is a shocking video of Florida shootout
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X