ಭಗ್ನ ಪ್ರೇಮಿಗಳು ತಪ್ಪದೇ ನೋಡಬೇಕಾದ ವಿಡಿಯೋ
ಬರ್ಲಿನ್, ಜೂ.19: ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವವರು ಅಗಲಿದ ಒಬ್ಬಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸುತ್ತಾರೆ. ತಮ್ಮ ಆಪ್ತರಿಗೆ ಇಷ್ಟವಾದ ವಸ್ತುವನ್ನು ಬಳಸುವುದೇ ಇಲ್ಲ, ಇನ್ನು ಕೆಲವರು ಅದೇ ವಸ್ತುವನ್ನು ಹೆಚ್ಚು ಬಳಸತೊಡಗುತ್ತಾರೆ. ಹುಚ್ಚು ಪ್ರೇಮಿಗಳ ಭಾವನೆಗಳ ಮೀಟರ್ ಅಳೆಯುವುದು ಕಷ್ಟ. ಇಲ್ಲೊಬ್ಬ ಅಂಥದ್ದೇ ಪ್ರೇಮಿ ಇದ್ದಾನೆ ನೋಡಿ
ಅಮರ ಪ್ರೇಮಿಗಳಿದ್ದಂತೆ ಅಮರ ಭಗ್ನ ಪ್ರೇಮಿಗಳ ಪಟ್ಟಿಯೂ ದೊಡ್ಡದಿರುತ್ತದೆ. ಕೆಲವರು ಪ್ರೀತಿ ಕೊಂದ ಸಂಗಾತಿಗೆ ಆಸಿಡ್ ಹಾಕುವುದು ಮುಂತಾದ ಕ್ರೂರ ಮಾರ್ಗ ಅನುಸರಿಸುತ್ತಾರೆ. ಕೆಲವರು ಆಕೆಯ ನೆನಪನ್ನು ಅಳಿಸಿಕೊಳ್ಳಲು ಯತ್ನಿಸುತ್ತಲೆ ಇರುತ್ತಾರೆ. ಇದೇ ರೀತಿ ಪ್ರಯತ್ನವೊಂದನ್ನು ಜರ್ಮನಿಯ ಪ್ರೇಮಿಯೊಬ್ಬ ಮಾಡಿದ್ದಾನೆ.
ಇಬೇನಲ್ಲಿ ಡೆರ್.ಜುಲಿ ಎಂಬ ಖಾತೆ ಹೊಂದಿರುವ ಈ ವ್ಯಕ್ತಿ ತಮ್ಮ ಬಳಿ ಇದ್ದ ಮೊಬೈಲ್, ಕಾರು, ಟಿವಿ.. ಇತ್ಯಾದಿ ವಸ್ತುಗಳನ್ನು ಇಬೇನಲ್ಲಿ ಮಾರಾಟಕ್ಕಿಟ್ಟಿದ್ದಾನೆ. ಇದರಲ್ಲಿ ಏನು ವಿಶೇಷ. ಆಕೆ ಜೊತೆ ಹಂಚಿಕೊಂಡ ವಸ್ತುಗಳನ್ನು ಮಾರಿದರೆ ಅದರಲ್ಲಿ ಗಮನಾರ್ಹ ಸಂಗತಿ ಏನಿದೆ ಎಂದೆನಿಸಬಹುದು. ಅದರೆ, ಇದರಲ್ಲೂ ಟ್ವಿಸ್ಟ್ ಇದೆ.

ಜರ್ಮನಿಯ ಈ ವ್ಯಕ್ತಿ ಎಂಥ ಕರಕುಶಲ ನಿಪುಣ ಎಂದರೆ, ಆಕೆ ಜೊತೆ ಹಂಚಿಕೊಂಡ ವಸ್ತುಗಳನ್ನು ಸರಿಯಾಗಿ ಅರ್ಧಕ್ಕೆ ಕತ್ತರಿಸಿದ್ದಾನೆ. ಪವರ್ ಟೂಲ್ ಬಳಸಿ ಕತ್ತರಿಸುವ ದೃಶ್ಯವುಳ್ಳ ವಿಡಿಯೋ ಯೂಟ್ಯೂಬ್ ನಲ್ಲಿ ಭರ್ಜರಿಯಾಗಿ ಓಡಾಡುತ್ತಿದೆ.
ಮೊಬೈಲ್ ಫೋನ್, ಬೈಸಿಕಲ್, ಕಾರು, ಚೇರ್, ಸೋಫಾ, ಬೆಡ್, ಲೆಟರ್ ಬಾಕ್ಸ್, ವಾರ್ಡ್ ರೋಬ್, ಲ್ಯಾಪ್ ಟಾಪ್ ಹಾಗೂ ಐಫೋನ್ ..ವಗೈರೆ ವಗೈರೆ ಎಲ್ಲವನ್ನು ಅರ್ಧಕ್ಕೆ ಕತ್ತರಿಸಿ ಹಾಕಿ ಮಾರಾಟಕ್ಕಿಟ್ಟಿದ್ದಾನೆ.
ಈತನ ಮಾಜಿ ಪ್ರೇಯಸಿ ತನ್ನ ಅರ್ಧಪಾಲನ್ನು ಪಡೆದುಕೊಂಡ ಮೇಲೆ ಉಳಿದರ್ಧವನ್ನು ಈ ರೀತಿ ಮಾರಲು ಯತ್ನಿಸಿದ್ದಾನೆ. For Laura ಎಂಬ ಹೆಸರಿನಲ್ಲಿರುವ ಈ ವಿಡಿಯೋದ ಬಗ್ಗೆ ಬರೆಯುತ್ತಾ 12 ವರ್ಷ ಸುಂದರ ಸಾಂಗತ್ಯ ನೀಡಿದ್ದಕ್ಕೆ ಥ್ಯಾಂಕ್ಸ್ ನಿನ್ನ ಪಾಲಿನ ಅರ್ಧ ವಸ್ತುಗಳು ಇಲ್ಲಿವೆ ಎಂದು ಹಾಕಲಾಗಿದೆ.












Click it and Unblock the Notifications