ಪರ್ವತವನ್ನು ಅಲ್ಲಾಡಿಸಬಹುದು ಚೀನಾ ಸೇನೆಯನ್ನಲ್ಲ: ಭಾರತಕ್ಕೆ ಎಚ್ಚರಿಕೆ

Posted By:
Subscribe to Oneindia Kannada

ಬೀಜಿಂಗ್, ಜುಲೈ 24: ಚೀನಾ ರಕ್ಷಣಾ ಸಚಿವಾಲಯ ಸೋಮವಾರ (ಜುಲೈ 24) ಭಾರತಕ್ಕೆ ಖಡಕ್ ಸಂದೇಶ ರವಾನಿಸಿದ್ದು ದೋಕ್ಲಾಂ ಗಡಿಯಿಂದ ಸೇನೆಯನ್ನು ಹಿಂದಕ್ಕೆ ಪಡೆಯದಿದ್ದಲ್ಲಿ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದೆ.

ಒಂದು ವೇಳೆ ಪರ್ವತವನ್ನಾದರೂ ಅಲುಗಾಡಿಸಬಹುದು, ಆದರೆ ಚೀನಾದ ಸೇನೆಯನ್ನಲ್ಲ ಎಂದು ಎಚ್ಚರಿಕೆ ನೀಡಿರುವ ಚೀನಾ, ಒಂದು ವೇಳೆ ಭಾರತ ಯುದ್ದಕ್ಕೆ ಸಿದ್ದವಾದರೆ ಈಗಿರುವ ಭೂಭಾಗವನ್ನೂ ಕಳೆದುಕೊಳ್ಳಬೇಕಾಗಬಹುದು ಎಂದು ಹೇಳಿದೆ.

ಹಿಂದೂ ರಾಷ್ಟ್ರೀಯತೆ'ಯೇ ಯುದ್ಧಕ್ಕೆ ಮುನ್ನುಡಿ, ಚೀನಾ

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯನ್ನು ಅಲುಗಾಡಿಸುವುದು ಕಷ್ಟ ಎಂದಿರುವ ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ವು ಕಿಯಾನ್, ನಮ್ಮ ದೇಶದ ಭಾಗವನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ಚೀನಾಗೆ ಗೊತ್ತಿದೆ ಎಂದು ಹೇಳಿದ್ದಾರೆ.

Shaking a mountain is easy but shaking China army is hard: China warning to India

ದೋಕ್ಲಾಂ ಚೀನಾದ ಸ್ವತ್ತು ಎಂದಿರುವ ಕಿಯಾನ್, ಪೀಪಲ್ಸ್ ಲಿಬರೇಶನ್ ಆರ್ಮಿ ಕಾಲಕ್ಕೆ ತಕ್ಕಂತೆ ತನ್ನ ಶಕ್ತಿಯನ್ನು ಬಲಪಡಿಸಿಕೊಂಡು ಬರುತ್ತಲೇ ಇದೆ. ದೇಶದ ರಕ್ಷಣೆ ಮತ್ತು ಸಾರ್ವಭೌಮತೆಯ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಕಿಯಾನ್ ಹೇಳಿದ್ದಾರೆ.

ಚೀನಾ ವಿರುದ್ಧ ಬಳಸಲು ಭಾರತ ಹೊಸ ಯುದ್ಧ ವಿಮಾನ ಖರೀದಿ?

Who Will Win If ώάŕ Starts Between India And China | Oneindia Kannada

1962ರಲ್ಲಿ ಭಾರತದ ಹೀನಾಯ ಸೋಲನ್ನು ಮತ್ತೆ ನೆನೆಪಿಸಿರುವ ಕಿಯಾನ್, ಭಾರತ ತನ್ನ ಸೇನೆಯನ್ನು ಹಿಂದಕ್ಕೆ ಪಡೆಯದೇ ಇದ್ದಲ್ಲಿ ನಾವು ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ಗಡಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
China's defence ministry on Monday (Jul 24) warned India not to harbour any illusions about the Chinese military's ability to defend its territory, amid a festering border dispute.Shaking a mountain is easy but shaking the People's Liberation Army is hard, China warning to India.
Please Wait while comments are loading...