ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಶಾಹಿದ್ ಖಾಕನ್ ಅಬ್ಬಾಸಿ

Posted By:
Subscribe to Oneindia Kannada

ಇಸ್ಲಾಮಾಬಾದ್, ಆಗಸ್ಟ್ 01 : ಪಾಕಿಸ್ತಾನದ 18ನೇ ಪ್ರಧಾನಿಯಾಗಿ ಮಂಗಳವಾರ ಶಾಹಿದ್ ಖಾಕನ್ ಅಬ್ಬಾಸಿ ಆಯ್ಕೆಯಾಗಿದ್ದಾರೆ.

ಹಂಗಾಮಿ ಪ್ರಧಾನಿ ನೇಮಕಕ್ಕೆ ನಡೆದ ಚುನಾವಣೆಯಲ್ಲಿ ಪಾಕಿಸ್ತಾನದ ಸಂಸದರು ಬಹುಮತದಿಂದ ಶಾಹಿದ್ ಖಾಕನ್ ಅಬ್ಬಾಸಿ ಅವರನ್ನು ಹಂಗಾಮಿ ಪ್ರಧಾನಿಯನ್ನಾಗಿ ನೇಮಕ ಮಾಡಿದ್ದಾರೆ.

ಸುಪ್ರೀಂ ಸೂಚನೆ: ಪ್ರಧಾನಿ ಪಟ್ಟಕ್ಕೆ ರಾಜಿನಾಮೆ ಸಲ್ಲಿಸಿದ ನವಾಜ್ ಷರೀಫ್

ಭ್ರಷ್ಟಾಚಾರ ಪ್ರಕರಣದಲ್ಲಿ ಷರೀಫ್ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸುಪ್ರೀಂ ಕೋರ್ಟ್, ಷರೀಫ್ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ಜುಲೈ 28ರ ಬೆಳಗ್ಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ, ಷರೀಫ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

Shahid Khaqan Abbasi elected as interim prime minister
Nawaz Sharif has resigned as prime minister of Pakistan | Oneindia kannada

ಶಾಹಿದ್ ಖಾಕನ್ ಅಬ್ಬಾಸಿ ಪರ 221 ಮತಗಳು ಚಲಾವಣೆಯಾಗಿದ್ದು, ನವಾಜ್ ಷರೀಫ್ ಅವರ ಸಹೋದರ ಶಾಬಾಜ್ ಷರೀಫ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವವರೆಗೆ ಅಬ್ಬಾಸಿ ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Pakistan's parliament has elected Shahid Khaqan Abbasi as the country's new prime minister, after a Supreme Court decision last week disqualified Nawaz Sharif, his predecessor, over allegations he lied on a wealth declaration.
Please Wait while comments are loading...